6 ತಿಂಗಳಿಂದ ಇಬ್ಬರೂ ಒಟ್ಟಿಗಿಲ್ಲ, ಆ ಮಗು ನನ್ನದು ಹೇಗಾಗುತ್ತದೆಂದ ಪತಿ..! ಗರ್ಭಿಣಿ ನಟಿ ಕಂಗಾಲು..!

Updated: Thursday, June 10, 2021, 12:14 [IST]

ಟಿಎಂಸಿ ಸಂಸದೆ ಹಾಗೂ ಖ್ಯಾತ ನಟಿ ಆಗಿರುವ ಈ ನುಸ್ರತ್ ಜಹಾಂ ಅವ್ರು, ಇತ್ತೀಚೆಗೆ ತಮ್ಮ ಪ್ರೆಗ್ನೆನ್ಸಿ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು ನಟಿ ಗರ್ಭಿಣಿಯಾಗಿದ್ದಾರೆ ಎಂದು ತಾಯಿಯಾಗಲಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ. ಅಂತದರೊಳಗೆ ನಟಿ ನುಸ್ರತ್ ಆಗಲೀ, ಅಥವಾ ಅವರ ಕುಟುಂಬದವರಾಗಲಿ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ನಟಿ ನುಸ್ರತ್ ತಾಯಿಯಾಗುತ್ತಿದ್ದಾರೆ ಎಂಬ ಈ ವಿಚಾರ ಅಚ್ಚರಿ ಪಡಬೇಕಾಗಿಯೇನು ಇಲ್ಲ, ಆದ್ರೆ ಈಕೆ ಗಂಡ ನಿಖುಲ್ ಜೈನ್‌ ಅವರು, ನಾವಿಬ್ಬರುರೂ ಒಟ್ಟಿಗೆನೆ ಇಲ್ಲ ಇದ್ಹೇಗೆ ಸಾದ್ಯ ಎಂದಾಗ, ಹಾಗೇನೇ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನೆ ಮಾಡಿದಾಗ ಎಲ್ಲರನ್ನೂ ಅಚ್ಚರಿ ಪಡುವಂತೆ ಮಾಡಿದೆ.  

ಹಿಂದೂಸ್ತಾನ್‌ ಟೈಮ್ಸ್ ಒಂದು ಈ ಕುರಿತು ಪ್ರಕಟಿಸಿದೆ.  ಆ ವರದಿಯಲ್ಲಿ ಕೇಳಿ ಬಂದ ಪ್ರಕಾರ ನುಸ್ರತ್ ಜಹಾಂ ಅವ್ರು ಈಗಾಗ್ಲೇ ಆರು ತಿಂಗಳ ಗರ್ಭಿಣಿ ಎನ್ನಲಾಗಿದೆ. ಆದ್ರೆ ಇವರ ಪ್ರೆಗ್ನೆನ್ಸಿ ವಿಚಾರದ ಬಗ್ಗೆ, ಗಂಡನಿಗಾಗಲೀ, ಅತ್ತೆ ಮನೆಯವರಿಗೆ ಆಗಲಿ, ಯಾವ ಮಾಹಿತಿಯಿಲ್ಲ ಅನ್ನೋದು ಮತ್ತೊಂದು ಶಾಕಿಂಗ್ ಸುದ್ದಿ. ಇನ್ನು ನಟಿ ನುಸ್ರತ್ ಹಾಗೂ ಈ ನಿಖಿಲ್ ಮದುವೆಯು ಮುರಿದು ಬೀಳುವ ಹಂತದಲ್ಲಿದೆ ಎಂಬುದಾಗಿಯೂ ಸಹ ಕೆಲವು ವರದಿಗಳು ಉಲ್ಲೇಖ ಮಾಡಿವೆ....

ನಟಿ ನುಸ್ರತ್ ಜಹಾಂ ಅವರು ಬೋಡ್ರಮ್ ಟೌನ್‌ನ ಉದ್ಯಮಿಯಾಗಿದ್ದ ಈ ನಿಖಿಲ್ ಜೈನ್ ಅವರ ಜೊತೆ, ಅಂದು ಜೂನ್ 19, 2019ರಲ್ಲಿ  ಮದುವೆಯಾಗಿದ್ದರು. ಹಾಗೇನೇ ಇವರಿಬ್ಬರ ಮದುವೆ ಹಿಂದೂ, ಮುಸ್ಲಿಂ ಜೊತೆಗೆ ಕ್ರಿಶ್ಚಿಯನ್ ಅಲ್ಲಿಯೂ ಎಲ್ಲ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹ ನಡೆದಿತ್ತು.