ಕಾಂಡೋಮ್ ಪರೀಕ್ಷಕಳಾದ ರಾಕುಲ್ , ಈ ಪಾತ್ರ ಒಪ್ಪಲು ಕಾರಣವೇನು ?
Updated:Wednesday, March 9, 2022, 15:15[IST]

ಯಾರಿಯನ್ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ಕಾಂಡಮ್ ಪರೀಕ್ಷಕಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾಂಡೋಮ್ ಟೆಸ್ಟ್ ಮಾಡುವ ವಿಭಿನ್ನ ಪಾತ್ರಕ್ಕೆ ಸಹಿ ಮಾಡಿದ್ದಾರೆ ರಾಕುಲ್!
ಈ ಪಾತ್ರಕ್ಕೆ ಮೊದಲು ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆರನ್ನು ಕೇಳಲಾಗಿದ್ದು, ಜನರಲ್ಲಿ ತಮ್ಮ ಮೇಲೆ ಬೇರೆ ರೀತಿಯ ಭಾವನೆ ಮೂಡಬಹುದೆಂಬ ಕಾರಣಕ್ಕೆ ಅವರು ನಿರಾಕರಿಸಿದರು. ಬಳಿಕ ಈ ಪಾತ್ರವನ್ನು ರಾಕುಲ್ ಒಪ್ಪಿಕೊಂಡರು. ಯಾವುದನ್ನೂ ತಲೆಗೆ ಹಾಕಿಕೊಳ್ಳದ ರಾಕುಲ್ ಧೈರ್ಯವಾಗಿ ಈ ಪಾತ್ರಕ್ಕೆ ಒಪ್ಪಿದ್ದಾರೆ.
ರಾಕುಲ್ ಅವರು ಕಾಂಡೋಮ್ ಪರೀಕ್ಷಕಳಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ 'ಛತ್ರಿವಾಲಿ. (Chatriwale) ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ. ಕಾಂಡೋಮ್ ಪ್ಯಾಕೆಟ್ ಓಪನ್ ಮಾಡುತ್ತಿರುವ ರಾಕುಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರ ಹುಬ್ಬೇರಿಸುತ್ತದೆ.
ಚಿತ್ರದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳಿಲ್ಲ. ಇಂತಹ ಪಾತ್ರಗಳನ್ನು ಮಾಡುವುದರಿಂದ ವೃತ್ತಿ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಇಂತಹ ಅವಕಾಶಗಳು ಅಪರೂಪಕ್ಕೆ ಒಮ್ಮೆ ನಮಗೆ ಸಿಗುತ್ತವೆ. ಹೀಗಾಗಿ ಈ ಪಾತ್ರವನ್ನು ಮಾಡಿಕೊಳ್ಳಲು ನಾನು ಒಪ್ಪಿಕೊಂಡೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಪಾಲಕರಿಗೆ ಹೇಳಿ,ಅವರ ಒಪ್ಪಿಗೆ ಬಳಿಕ ನಾನು ಒಪ್ಪಿಕೊಂಡಿದ್ದೇನೆ ಅವರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ.ಎಂದು ನಟಿ ರಾಕುಲ್ ಪ್ರೀತ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪುಟ್ಟ ಗ್ರಾಮದಿಂದ ಬರುವ ಹುಡುಗಿ ಕಾಂಡೋಮ್ ಗುಣಮಟ್ಟ ಪರೀಕ್ಷಿಸುವ ಮುಖ್ಯಸ್ಥಳಾಗುವುದೇ ಈ ಚಿತ್ರದ ಕತೆ. ಆರಂಭದಲ್ಲಿ ಹುಡುಗಿ ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸಕ್ಕೆ ಸೇರುತ್ತಾಳೆ. ಬಳಕ ತನ್ನ ಉದ್ಯೋಗದ ಮಹತ್ವವನ್ನು ತಿಳಿದುಕೊಳ್ಳುತ್ತಾಳೆ. ಕೌಂಟುಬಿಕ ಕಥೆಯಾಗಿ ಈ ಚಿತ್ರ ಮುಂದುವರೆಯುತ್ತದೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಹೊಸ ಬಗೆಯಲ್ಲಿ ಸಿನಿಪ್ರಿಯರನ್ನು ರಂಜಿಸಲು ಬರಲಿದೆ.