ಬಾಲಿವುಡ್ ನ ಬಿಗ್ ಆಫರ್ ನ ತಿರಸ್ಕರಿಸಿದ ರಶ್ಮಿಕಾ ಹೇಳಿದ್ದೇನು ಗೊತ್ತೇ?

Updated: Sunday, October 18, 2020, 19:34 [IST]

ರಶ್ಮಿಕಾ ಮಂದಣ್ಣ ಬಾಲಿವುಡ್ ನ ಬಿಗ್ ಆಫರ್' ನ್ನು ತಿರಸ್ಕರಿಸಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳಕಿಗೆ ಬಂದರು. ನಂತರ ಪುನೀತ್ ರಾಜ್‍ಕುಮಾರ್ ಅವರ ಅಂಜನಿ ಪುತ್ರ, ಗಣೇಶ್ ರವರ ಜೊತೆ ಚಮಕ್ ಚಿತ್ರದಲ್ಲಿ ನಟಿಸಿದರು.

 

Advertisement

ತದ ನಂತರ ಚಲೊ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟ ರಶ್ಮಿಕಾ ಯಶಸ್ಸಿನ ಮೆಟ್ಟಿಲು ಏರತೊಡಗಿದರು

 

ವಿಜಯ್ ದೇವರಕೊಂಡ ಜೊತೆ ಗೀತಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ್ದಾರೆ

 

Advertisement

ಮಹೇಶ ಬಾಬು ಜೊತೆ ಸವಿರೇಲು ನೀಕೆವ್ವರು ಚಿತ್ರ ಆಕೆಯ ವೃತ್ತಿ ಜೀವನದ ಬಹು ಮುಖ್ಯ ಚಿತ್ರ. ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದ್ದು ಆಕೆಗೆ ತಮಿಳಿಗೂ ಹೋಗುವಂತೆ ಮಾಡಿತು.

 

ಕಾರ್ತಿ ಜೊತೆಗೆ ಸುಲ್ತಾನ್, ನಂತರ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ಜೊತೆ ಇನ್ನೊಂದು ಚಿತ್ರ ಹೀಗೆ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಲೇ ಇವೆ.

ಈ ಮಧ್ಯೆ ಆಕೆಗೆ ಬಾಲಿವುಡ್ ನಿಂದ ಭರ್ಜರಿ ಆಫರ್ ಬಂದಿದೆ. ತೆಲುಗಿನ ಡಿಯರ್ ಕಾಮ್ರೇಡ್ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಲಾಗುತ್ತಿದೆ

 

ಅದರಲ್ಲಿ ರಶ್ಮಿಕಾಗೆ ನಟಿಸಲು ಆಫರ್ ಬಂದಿದೆ. ಸಾಮಾನ್ಯವಾಗಿ ಹಿಂದಿಯಲ್ಲಿ ಎಂತಹ ಸಣ್ಣ ಪಾತ್ರ ಸಿಕ್ಕರೂ ನಟಿಸಲು ಹಾತೊರೆಯುತ್ತಾರೆ. ಆದರೆ..

 

ರಶ್ಮಿಕಾ ಅದನ್ನು ತಿರಸ್ಕರಿಸಿದರು. ಕಾರಣ ಆಕೆ ತೆಲುಗಿನಲ್ಲಿ ಇದೇ ಪಾತ್ರವನ್ನು ಮಾಡಿದ್ದಾರೆ. ಅದನ್ನು ಮತ್ತೆ ಪುನಃ ನಟಿಸಲು ತನ್ನಿಂದಾಗದು. ಪಾತ್ರಕ್ಕೆ ನ್ಯಾಯ ಒದಗಿಸುವುದು ಕಷ್ಟ ಎಂದು ಅದನ್ನು ತಿರಸ್ಕರಿಸಿದರು.

 


ಅವಕಾಶ ಸಿಕ್ಕಿತು ಎಂದು ಎಂತಹ ಪಾತ್ರವಾದರೂ ಮಾಡಲು ನಾನು ಒಲ್ಲೆ ಎಂದು ರಶ್ಮಿಕಾ ಹೇಳಿದ್ದಾರೆ.