ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಕಾಶ್ಮೀರಿ ಫೈಲ್ಸ್ ಗಳಿಸಿದ್ದೆಷ್ಟು..?

By Infoflick Correspondent

Updated:Tuesday, April 5, 2022, 13:00[IST]

ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಕಾಶ್ಮೀರಿ ಫೈಲ್ಸ್ ಗಳಿಸಿದ್ದೆಷ್ಟು..?

  

ಕಳೆದೊಂದು ತಿಂಗಳಿನಿಂದ ಎಲ್ಲೆಡೆ ಕಾಶ್ಮೀರಿ ಫೈಲ್ಸ್ ಚಿತ್ರದ್ದೇ ಸದ್ದು. ಎಷ್ಟು ಸಿನಿಮಾಗಳು ರಿಲೀಸ್ ಆದರೂ, ಯಾವ ಸಿನಿಮಾ ಹಿಟ್ ಆದರೂ ಕೂಡ ಇನ್ನೂ ಸುದ್ದಿಯಲ್ಲಿರುವ ಸಿನಿಮಾ ಮಾತ್ರ ದಿ ಕಾಶ್ಮೀರಿ ಫೈಲ್ಸ್. ಈ ಚಿತ್ರದಲ್ಲಿನ ಘಟನೆಗಳು ನಿಜ ಮತ್ತು ಇದು ಭಾರತ ಕಂಡ ಅನೇಕ ಕ್ರೌರ್ಯದ ನರಮೇಧಗಳಲ್ಲಿ ಒಂದು. ಈ ಚಿತ್ರ ಥಿಯೇಟರ್ ಗಳಲ್ಲಿ ರಿಲೀಸ್ ಆದ ದಿನದಿಂದಲೂ ಹೌಸ್ ಫೂಲ್ ಓಡಿದೆ. ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿರುವ ದಿ ಕಾಶ್ಮೀರಿ ಫೈಲ್ಸ್ ಗಳಿಸಿದ್ದೆಷ್ಟು ಎಂದು ಕೇಳಿದರೆ ಶಾಕ್ ಆಗ್ತೀರಾ.

ಉಗ್ರರು ಕಾಶ್ಮೀರದಲ್ಲಿ ಇದ್ದ ಪಂಡಿತರನ್ನು ಹುಡುಕಿ ಹುಡುಕಿ ಕೊಲ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರಗಳು ಆಗುತ್ತವೆ. ಸಾಮಾನ್ಯ ಜನ ಬಿಡಿ, ನ್ಯಾಯಾಧೀಶರುಗಳನ್ನೇ ಬೀದಿಗೆ ಎಳೆದು ಹೊಡೆದು ಸಾಯಿಸುತ್ತಾರೆ. ಲೋಕಲ್ ಮಾಧ್ಯಮಗಳಲ್ಲಿ ಕೊಲೆಯ ಬಗ್ಗೆ ಕರೆ ಕೊಡಲಾಗುತ್ತದೆ. ಇದೆಲ್ಲ ಶುರು ಆಗಿದ್ದು 1989ರ ಕೊನೆಯಲ್ಲಿ. ಈ ಹತ್ಯಾಕಾಂಡದ ಹಿಂದೆ ಬಲಿಷ್ಠ ಉಗ್ರರು ಇದ್ರು. ಇದೆಲ್ಲವನ್ನೂ ಒಟ್ಟುಗೂಡಿಸಿ ಒಂದು ಕಥೆ ಬರೆದು ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ತಯಾರಿಸಲಾಗಿದೆ. 

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದ ಕುರಿತ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರೊಂದಿಗೆ ಭಾಷಾ ಸುಂಬ್ಳಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ದರ್ಶನ್ ಕುಮಾರ್, ಚಿನ್ಮಯ್ ಮಾಂಡ್ಲೇಕರ್, ಪುನೀತ್ ಇಸ್ಸಾರ್, ಅತುಲ್ ಶ್ರೀವಾಸ್ತವ ಮತ್ತು ಮೃಣಾಲ್ ಕುಲಕರ್ಣಿ ನಟಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಸಿನಿಮಾ ನೋಡಿದ ಮಹಿಳೆಯೊಬ್ಬರು ನಿರ್ದೇಶಕ ವಿವೇಕ್ ಕಾಲಿಗೆ ಬಿದ್ದಿದ್ದಾರೆ. 

ಈ ಸಿನಿಮಾವನ್ನು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇವಲ 15 ಕೋಟಿ ರೂಪಾಯಿಯಲ್ಲಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದೀಗ ಈ ಚಿತ್ರ ಗಳಿಸಿರುವ ಕಲೆಕ್ಷನ್ ಕೇಳಿದರೆ ಅಚ್ಚರಿಯಾಗುತ್ತೆ. ಬರೋಬ್ಬರಿ 331 ಕೋಟಿ ರೂಪಾಯಿ ಹಣವನ್ನು ಗಳಿಸಿದೆ.  ಈ ಬಗ್ಗೆ ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.