ಶಾರುಖ್ ಖಾನ್ ಪುತ್ರಿ ಸುಹಾನಾಗೆ ಪ್ರೇಮದ ಪಾಠ ಮಾಡಿ ಟ್ರೋಲ್ ಆಗಿದ್ದಾರೆ ಗೌರಿ ಖಾನ್

By Infoflick Correspondent

Updated:Wednesday, September 21, 2022, 19:15[IST]

ಶಾರುಖ್ ಖಾನ್ ಪುತ್ರಿ ಸುಹಾನಾಗೆ ಪ್ರೇಮದ ಪಾಠ ಮಾಡಿ ಟ್ರೋಲ್ ಆಗಿದ್ದಾರೆ ಗೌರಿ ಖಾನ್

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತನ್ನ ಮಗಳಿಗೆ ಪ್ರೇಮದ ಪಾಠವನ್ನು ಮಾಡಿದ್ದಾರೆ. ಹೌದು. ಸುಹಾನಾ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡಲು ಸಕಲ ತಯಾರಿಯನ್ನು ನಡೆಸಿದ್ದಾರೆ. ಸ್ವತಃ ಗೌರಿ ಖಾನ್ ಅವರ ತಮ್ಮ ಮಗಳು ಸುಹಅನಾಳಿಗೆ ಆಕ್ಟಿಂಗ್ ತರಬೇತಿಯನ್ನೂ ನೀಡಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇನ್ನು ಸುಹಾನಾ ಖಾನ್ ಆಗಾಗ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಇವರ ಫೋಟೋಗಳು ಸೋಸಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. 

ಇನ್ನು ತಾಯೊಬ್ಬಳು ತನ್ ಮಗಳಿಗೆ  ಯಾವೆಲ್ಲ ಪಾಠ ಮಾಡಬಹುದು..? ಬದುಕಿನಲ್ಲಿ ಕಷ್ಟ-ಸುಖದ ಸಂದರ್ಭಗಳಲ್ಲಿ ಹೇಗಿರಬೇಕು..? ಯಾವ ಸಂದರ್ಭಗಳನ್ನು ಹೇಗೆಲ್ಲಾ ನಿಭಾಯಿಸಬೇಕು.? ಒಳ್ಳೆಯದು, ಕೆಟ್ಟದು ಹೀಗೆ ಒಂದಷ್ಟು ಪಾಠಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಆದರೆ ಮಕ್ಕಳಿಗೆ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಬಗ್ಗೆ ಪಾಠ ಮಾಡುವುದು ತೀರಾ ಕಷ್ಟ ಎಂದು ಪೋಷಕರು ಸುಮ್ಮನಿದ್ದು ಬಿಡುತ್ತಾರೆ. ಆದರೆ ಗೌರಿ ಖಾನ್ ಮಗಳಿಗೆ ಡೇಟಿಂಗ್ ಪಾಠವನ್ನು ಮಾಡಿದ್ದಾರೆ. ಈ ವಿಚಾರ ಇದೀಗ ವೈರಲ್ ಆಗಿದೆ. 

ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಕೂಡ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಣ್ ಬೀರ್ ಸಿಂಗ್, ಸಮಂತಾ ಪ್ರಭು, ವಿಜಯ್ ದೇವರಕೊಂಡ, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲಬ್ರಿಟಿಗಳ ಜೊತೆ ಕರಣ ಜೋಹರ್ ಟಾಕ್ ಶೋ ನಡೆಸಿದ್ದಾರೆ. ಅದರಂತೆಯೇ ಇತ್ತೀಚೆಗೆ ಗೌರಿ ಖಾನ್ ಅವರ ಜೊತೆಗೆ ಕರಣ ಜೋಹರ್ ಶೋ ಮಾಡಿದ್ದರು. ಈ ವೇಳೆ ಡೇಟಿಂಗ್ ಬಗ್ಗೆ ನಿಮ್ಮ ಗಳು ಸಹಾನಾ ಖಾನ್ ಗೆ ಏನು ಸಲಹೆ ಕೊಡುತ್ತೀರಾ ಎಂದು ಪ್ರಶ್ನಿಸಲಾಯ್ತು. ಆಗ ಗೌರಿ ಖಾನ್ ಅವರು ನನ್ನ ಮಗಳಿಗೆ ಒಟ್ಟಿಗೆ ಇಬ್ಬರ ಜೊತೆ ಡೇಟಿಂಗ್ ಮಾಡಬೇಡ ಎಂದು ಹೇಳುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಟ್ರೋಲ್ ಆಗುತ್ತಿದೆ. ತಾಯೊಬ್ಬಳು ಮಗಳಿಗೆ ಈ ಸಲಹೆ ನೀಡಬಹುದಾ ಎಂದು ಚರ್ಚೆ ನಡೆಯುತ್ತಿದೆ.