Sunny Leone : ಸಕ್ಕರೆನಾಡಿನ ಹುಡುಗರಿಗೆ ಹೊಗಳಿ ಟ್ವೀಟ್ ಮಾಡಿದ ಸನ್ನಿ ಲಿಯೋನ್! ಕಾರಣವೇನು ಗೊತ್ತೆ ?
Updated:Wednesday, May 18, 2022, 19:00[IST]

ಮಾಜಿ ನೀಲಿ ಚಿತ್ರ ತಾರೆ, ಹಾಲಿ ಬಾಲಿವುಡ್ ನಟಿ, ಉತ್ತಮ ನಾಯಕಿ, ಸಾಮಾಜಪರ ಕಾಳಜಿ ಹೊಂದಿದ ಸನ್ನಿ ಲಿಯೋನ್ ಸದಾ ಅಭಿಮಾನಿಗಳ ಹಾಟ್ ಫೇವರೆಟ್. ನಟನೆ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸನ್ನಿಲಿಯೋನ್ ಕರ್ನಾಟಕದಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮೇ.13ರಂದು ಸನ್ನಿ ಲಿಯೋನ್ ಹುಟ್ಟುಹಬ್ಬ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಸ್ವತಃ ಸನ್ನಿ ಲಿಯೋನ್ ಅವರನ್ನೇ ಮೆಚ್ಚಿಸಿದ್ದಾರೆ ಮಂಡ್ಯ ಅಭಿಮಾನಿಗಳು. ಮಂಡ್ಯ ಹುಡುಗರ ಅಭಿಮಾನವನ್ನು ಮೆಚ್ಚಿಕೊಂಡ ಸನ್ನಿ ಲಿಯೋನ್ ಟ್ವಿಟರ್ನಲ್ಲಿ ಥ್ಯಾಂಕ್ಸ್ ಹೇಳಿದ್ದರು.
ಮಂಡ್ಯದ ಹಳ್ಳಿಯೊಂದರಲ್ಲಿ ಸ್ಪೆಷಲ್ ಆಗಿ ಸನ್ನಿ ಬರ್ತ್ ಡೇ ಆಚರಿಸಲಾಗಿತ್ತು. ಯುವಕರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಕೊಮ್ಮೇರಹಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಸನ್ನಿ ಲಿಯೋನ್ ಅವರ ದೊಡ್ಡ ಕಟೌಟ್ಗಳನ್ನು ನಿರ್ಮಿಸಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಆಹಾರ ವಿತರಿಸಿದ್ದರು. ಶಿಬಿರದಲ್ಲಿ 39 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು.
ಮಂಡ್ಯದ ಯುವಕರು ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ್ದರು. ಅದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆ ವರದಿಯ ಪೇಪರ್ ಕಟಿಂಗ್ಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಸನ್ನಿ, ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದಿದ್ದಾರೆ. "ಓಹ್ ಇದು ನಂಬಲು ಅಸಾಧ್ಯವಾಗಿದೆ. ನಿಮ್ಮ ಪ್ರೀತಿ, ಅಭಿಮಾನಗ ಗೌರವಾರ್ಥ ನಾನೂ ಬಂದು ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು! ನೀವೆಲ್ಲರೂ ನಿಜವಾಗಿಯೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ! ನಿನ್ನನ್ನು ಪ್ರೀತಿಸುತ್ತೇನೆ" ಅಂತ ಬರೆದುಕೊಂಡಿದ್ದಾರೆ.
ಸನ್ನಿ ಪ್ರತಿಕ್ರಿಯೆಗೆ ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ. ಸನ್ನಿಲಿಯೋನ್ರ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಮಂಡ್ಯದಲ್ಲಿ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇದೀಗ ಸನ್ನಿ ತಮ್ಮೂರಿಗೆ ಬರಬೇಕು ಅಂತ ಅಭಿಮಾನಿಗಳು ಆಶಿಸುತ್ತಿದ್ದಾರೆ. ಸನ್ನಿ ಲಿಯೋನ್ ಸಕ್ಕರೆ ನಾಡಿಗೆ ಅಭಿಮಾನಿಗಳು ಪ್ರೀತಿಯ ಆಹ್ವಾನ ನೀಡಿದ್ದಾರೆ .