ಕರಣ್ ಜೋಹರ್ ತಮ್ಮ ಆಟೋಬಯೋಗ್ರಫಿಯಲ್ಲಿ ಶಾರುಖ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ

By Infoflick Correspondent

Updated:Thursday, August 11, 2022, 11:24[IST]

ಕರಣ್ ಜೋಹರ್ ತಮ್ಮ ಆಟೋಬಯೋಗ್ರಫಿಯಲ್ಲಿ ಶಾರುಖ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ

ಕರಣ್ ಜೋಹರ್ ಹಾಗೂ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಕರಣ್ ಜೋಹರ್ ಹಾಗೂ ಶಾರುಖ್ ಖಾನ್  ನಡುವೆ ಬೇರೆಯದೇ ರೀತಿಯ ಸಂಬಂಧ ಇದೆ ಎನ್ನುವ ವದಂತಿ ಈ ಮೊದಲು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ಕರಣ್ ಸ್ಪಷ್ಟನೆ ನೀಡಿದ್ದರು. ಆದರೆ ಈಗ ತಮ್ಮ ಪುಸ್ತಕದಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದಾರೆ.

ಕರಣ್ ಜೋಹರ್ ಮತ್ತು ಶಾರುಖ್ ಖಾನ್ ನಡುವಿನ ಸಂಬಂಧದ ಬಗ್ಗೆ ಗಾಸಿಪ್‌ಗಳು ಈ ಹಿಂದೆ ಬಾಲಿವುಡ್‌ನಲ್ಲಿ ವೈರಲ್ ಆಗಿದ್ದವು. ಶಾರುಖ್ ಖಾನ್ ಜೊತೆ ಕರಣ್ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದು, ಶಾರುಖ್ ಖಾನ್ ಜೊತೆ ಶಾರೀರಿಕ ಸಂಬಂಧವನ್ನೂ ಹೊಂದಿದ್ದರು ಎಂಬ ವದಂತಿಗಳು ಬಾಲಿವುಡ್​ನಲ್ಲಿ ಹರಿದಾಡಿದ್ದವು. ಆದರೆ ಇದೀಗ ಕರಣ್ ತಮ್ಮ ಪುಸ್ತಕದ ಮೂಲಕ ಇವೆಲ್ಲದಕ್ಕೂ ಉತ್ತರ ನೀಡಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬಿಗ್ ಪ್ರೊಡ್ಯೂಸರ್ ಕರಣ್ ಜೋಹರ್ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಶಾರುಖ್ ಖಾನ್ ಜೊತೆ ಕರಣ್ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದು, ಶಾರುಖ್ ಖಾನ್ ಜೊತೆ ಶಾರೀರಿಕ ಸಂಬಂಧವನ್ನೂ ಹೊಂದಿದ್ದರು ಎಂಬ ಅಂಶಕ್ಕೆ ಇದೀಗ ‘ಅ ಅನ್​ಸುಟೇಬಲ್ ಬಾಯ್‘ ಪುಸ್ತಕ ಬಹಿರಂಗಪಡಿಸಿದೆ.

ಇತ್ತೀಚೆಗಷ್ಟೇ ಕರಣ್ ಜೋಹರ್ ತಮ್ಮ ‘ಅ ಅನ್ ಸೂಟಬಲ್ ಬಾಯ್' ಎಂಬ ಪುಸ್ತಕ ಹೊರತಂದಿದ್ದಾರೆ. ಅದರಲ್ಲಿ ಶಾರುಖ್ ಜೊತೆಗಿನ ಸಂಬಂಧದ ಬಗ್ಗೆ ಉತ್ತರ ನೀಡಿದ್ದಾರೆ. "ನನ್ನ ಜೀವನದಲ್ಲಿ ನಾನು ಅನೇಕ ನಿಂದೆಗಳನ್ನು ಸಹಿಸಿಕೊಂಡಿದ್ದೇನೆ, ಆದರೆ ಯಾವುದೂ ನನ್ನನ್ನು ತುಂಬಾ ಕಾಡಲಿಲ್ಲ. ಕರಣ್ ಶಾರುಖ್ ಖಾನ್ ಜೊತೆ ಸಂಬಂಧವಿದೆ ಎಂಬ ಸುದ್ದಿ ಕೇಳಿ ನನ್ನ ಹೃದಯ ಒಡೆದುಹೋಯಿತು. ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ. ಶಾರುಖ್ ನನಗೆ ತಂದೆಯಂತೆ‘ ಎಂದು ಕರಣ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಕರಣ್ ಜೋಹರ್ ಆಟೋಬಯೋಗ್ರಫಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಒಂದಷ್ಟು ಸಾಲುಗಳನ್ನು ಅವರು ಈ ವಿಚಾರದ ಬಗ್ಗೆ ಬರೆಯಲು ಮೀಸಲಿಟ್ಟಿದ್ದಾರೆ. 'ಇಂದು ಪ್ರಪಂಚದಲ್ಲಿರುವ ಎಲ್ಲ ಲೈಂಗಿಕತೆಯನ್ನು ಹೊಂದಲು ನನ್ನ ಬಳಿ ಮಾರ್ಗಗಳಿವೆ ಎಂದು ಜನರು ಭಾವಿಸುತ್ತಾರೆ. ಆದರೆ ಹಾಗಲ್ಲ. ನನಗೆ ಸೆಕ್ಸ್ ಎಂಬುದು ತುಂಬಾ ವೈಯಕ್ತಿಕ ಭಾವನೆ. ಇದು ಕ್ಯಾಶ್ಯುವಲ್ ಆಗಿ ಮಾಡುವ ವಿಷಯವಲ್ಲ. ನನ್ನ ಬಗ್ಗೆ ಕೇಳಿ ಬಂದ ವದಂತಿಗಳನ್ನು ನಾನು ಯಾವಾಗಲೂ ನಿಭಾಯಿಸಿದ್ದೇನೆ' ಎನ್ನುವ ಮೂಲಕ ಪರೋಕ್ಷವಾಗಿ ಎಲ್ಲದಕ್ಕೂ ಅವರು ತೆರೆ ಎಳೆದಿದ್ದಾರೆ.

ನನ್ನ ಲೈಂಗಿಕತೆಯ ಬಗ್ಗೆ ತುಂಬಾ ಊಹಾಪೋಹಗಳಿವೆ. ಶಾರುಖ್ ಮತ್ತು ನನ್ನ ಬಗ್ಗೆಯೂ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ನಾನು ಅದರಿಂದ ಆಘಾತಕ್ಕೊಳಗಾಗಿದ್ದೆ. ಹಿಂದಿ ವಾಹಿನಿಯೊಂದರ ಶೋನಲ್ಲಿ ಶಾರುಖ್ ಬಗ್ಗೆ ನನ್ನಲ್ಲಿ ಕೇಳಲಾಯಿತು. 'ನಿಮ್ಮಿಬ್ಬರ ಸಂಬಂಧ ಹೇಗಿದೆ' ಎಂದು ಅವರು ಪ್ರಶ್ನೆ ಮಾಡಿದರು. ನನಗೆ ಕೋಪ ಬಂತು. 'ನೀವು ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿದರೆ ನಿಮಗೆ ಹೇಗೆ ಅನಿಸುತ್ತದೆ?’ ಎಂದು ಅವರನ್ನು ಪ್ರಶ್ನಿಸಿದೆ. ಶಾರುಖ್​ ನನಗೆ ಓರ್ವ ತಂದೆ, ಓರ್ವ ಅಣ್ಣ ಇದ್ದ ಹಾಗೆ' ಎಂದು ಬರೆದುಕೊಂಡಿದ್ದಾರೆ ಕರಣ್.