ಕೆಜಿಎಫ್ 2 ಅಬ್ಬರಕ್ಕೆ ನಾವು ಹೆದರಿದ್ದು ನಿಜ ಎಂದು ಒಪ್ಪಿಕೊಂಡ ಅಮೀರ್ ಖಾನ್..! ಸ್ಟೇಟ್ಮೆಂಟ್ ವೈರಲ್

By Infoflick Correspondent

Updated:Monday, May 2, 2022, 19:39[IST]

ಕೆಜಿಎಫ್ 2 ಅಬ್ಬರಕ್ಕೆ ನಾವು ಹೆದರಿದ್ದು ನಿಜ ಎಂದು ಒಪ್ಪಿಕೊಂಡ ಅಮೀರ್ ಖಾನ್..! ಸ್ಟೇಟ್ಮೆಂಟ್ ವೈರಲ್

ಕನ್ನಡದ ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಕೆಜಿಎಫ್ ಭಾಗ-1 ಕನ್ನಡ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಪ್ಯಾನ್ ಇಂಡಿಯಾಕ್ಕೆ ದಾಪುಗಾಲಿಟ್ಟು ಅಂದು ಇಡೀ ಭಾರತವೇ ಬೆಚ್ಚಿ ಬೆರಗಾಗಿದ್ದು, ಸಿನಿಪ್ರಿಯರು ಕೆಜಿಎಫ್ ಒಂದು ನೋಡಿ ಸಿನಿಮಾವನ್ನು ಒಪ್ಪಿಕೊಂಡಿದ್ದರು.  

ಹಾಗೆ ವಿದೇಶದಲ್ಲಿಯೂ ಕೂಡ ಕೆಜಿಎಫ್ ಭಾಗ ಒಂದು ದೊಡ್ಡದಾಗಿ ಸದ್ದು ಮಾಡಿತ್ತು. ಕೆಜಿಎಫ್ ಭಾಗ-1 ಚಿತ್ರ ವೀಕ್ಷಿಸಿದ ಎಲ್ಲರೂ ಕೂಡ ಕೆಜಿಎಫ್ ಭಾಗ-2 ಹೇಗಿರಲಿದೆ, ಇದರ ಸಿಕ್ವೆನ್ಸ್ ತಿಳಿದುಕೊಳ್ಳಲೇಬೇಕು ಹಾಗೆ ಸಿನಿಮಾದ ಎಲಿವೇಶನ್ ಹಾಲಿವುಡ್ ರೇಂಜಿನಲ್ಲಿ ಇದೆ ಎಂದು ಅಂದೇ ಡಿಸೆಂಬರ್ 21ನೇ ತಾರೀಕು ಸಿನಿಮಾ ಬಿಡುಗಡೆಯಾದ ಬಳಿಕ ಸಿನಿ ಪ್ರಿಯರು ಮಾತನಾಡಿಕೊಂಡಿದ್ದರು.

ಇದಕ್ಕೆಲ್ಲಾ ಉತ್ತರ ಎಂಬಂತೆ ಕೆಜಿಎಫ್ ಚಿತ್ರತಂಡ ತುಂಬಾ ಹಾರ್ಡ್ ವರ್ಕ್ ಮಾಡಿ ಸಿನಿಮಾವನ್ನ ತೆರೆಮೇಲೆ ತಂದಿದೆ. ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 2 ಬಿಡುಗಡೆಯಾದ 15 ದಿನಕ್ಕೆ ಸಾವಿರ ಕೋಟಿಗೂ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದ್ದು, ಇನ್ನು ಕೂಡ ರಾಕಿ ಬಾಯ್ ಅಬ್ಬರಕ್ಕೆ ಕಲೆಕ್ಷನ್ ಮುನ್ನುಗ್ಗುತ್ತಲೇ ಇದೆ ಎನ್ನಬಹುದು. ಹೀಗಿರುವಾಗ ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಅವರು ನಮ್ಮ ಕೆಜಿಎಫ್ ಸಿನಿಮಾ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಖಾಸಗಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೌದು  ಕೆಜಿಎಫ್ ಸಿನಿಮಾಗೆ ನೀವು ಹೆದರಿದ್ದು ನಿಜಾನಾ ಎನ್ನುವ ಪ್ರಶ್ನೆಗೆ, ನಟ ಅಮೀರ್ ಖಾನ್ ಹೌದು ಖಂಡಿತ ಹೆದರಲೇ ಬೇಕು. ಹೆದರಿದ್ದು ನಿಜ. ಕೆಜಿಎಫ್ ಭಾಗ-1 ತುಂಬಾನೇ ಹಿಟ್ ಆಗಿತ್ತು.

ಆನಂತರ ಅದರ ಕೆಜಿಎಫ್ ಬಾಗ2 ನೋಡಲು ಇಡಿ ವಿಶ್ವವೇ ಕಾದು ಕುಳಿತಿತ್ತು. ಹೀಗಿರುವಾಗ ನಾವು ಹೆದರದೆ ಇನ್ನೇನು ಮಾಡಲು ಆಗುತ್ತದೆ. ಎಲ್ಲರೂ ಕೂಡ ಹೆದರಲೇಬೇಕು. ಆ ಇಡೀ ಕೆಜಿಎಫ್ ಚಿತ್ರತಂಡದ ಹಾರ್ಡ್ ವರ್ಕ್ ತೆರೆಯ ಮೇಲೆ ಎದ್ದು ಕಾಣುತ್ತದೆ. ಪ್ರತಿಯೊಂದು ದೃಶ್ಯ ಅದ್ಭುತವಾಗಿ ಸಕತ್ ಆಗಿ ಮೂಡಿಬಂದಿದೆ ಎಂದು ಹೇಳಿದ್ದು, ನಮ್ಮ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ಸಿನಿಮಾವನ್ನ ಹಾಡಿಹೊಗಳಿದ್ದಾರೆ ಅಮೀರ್ ಖಾನ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳ ಕಮೆಂಟ್ ಮಾಡಿ. ತಪ್ಪದೇ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು...