Abhijit : ಬದುಕಿನಲ್ಲಿ ಪಡಬಾರದ ಕಷ್ಟ ಅನುಭವಿಸಿರುವ ನಟ ಅಭಿಜಿತ್ ಹೇಳಿದ್ದ್ಯೇನು ?

By Infoflick Correspondent

Updated:Tuesday, July 19, 2022, 16:32[IST]

Abhijit :  ಬದುಕಿನಲ್ಲಿ ಪಡಬಾರದ ಕಷ್ಟ ಅನುಭವಿಸಿರುವ ನಟ ಅಭಿಜಿತ್  ಹೇಳಿದ್ದ್ಯೇನು ?

ನಟ ಅಭಿಜಿತ್ ಅವರು ಕನ್ನಡ ಸಿನಿಮಾ ರಂಗದಲ್ಲಿ 80 ರ ದಶಕದಲ್ಲಿ ಮಿಂಚಿದವರು. ನಟನೆಗಷ್ಟೇ ಸೀಮಿತವಾಗಿರದೇ ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಹಾಗೂ ನಿರೂಪಣೆಯನ್ನೂ ಮಾಡಿದ್ದಾರೆ. ಮೂಲತಃ ಚಿತ್ರದುರ್ಗದವರಾಗಿರುವ ಅಭಿಜಿತ್‌ ಅವರು ಸಂಸಾರದ ಗುಟ್ಟು, ಶಾಂತಿ ನಿವಾಸ, ಜನ ನಾಯಕ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆಕಂಡ ಕಾಲೇಜ್ ಹೀರೋ ಹಾಗೂ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದರು. 

ರಂಜಿತಾ ಚಿತ್ರದ ಮೂಲಕ ನಾಯಕ ಪಾತ್ರದಲ್ಲೂ ಮಿಂಚಿದ ಅಭಿಜಿತ್‌ ಅವರು ತುಂಬಿದ ಮನೆ ಹಾಗೂ ಯಜಮಾನ ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್‌ ಅವರ ಜೊತೆಗೆ ನಟಿಸಿದ್ದಾರೆ. ಯಜಮಾನ ಚಿತ್ರದಲ್ಲಿ ವಿಷ್ಣು ಅವರ ಸಹೋದರನಾಗಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಬಳಿಕ ಸಮರ ಸಿಂಹ ನಾಯಕ ಚಿತ್ರವನ್ನು ನಿರ್ಮಿಸಿದರು. ಬಳಿಕ ಜೋಡಿ ನಂ 1 ಚಿತ್ರದ ಕಥೆ ಬರೆದು ನಿರ್ದೇಶಿಸಿ ನಿರ್ಮಿಸಿದರು. ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಅಕ್ಷರಮಾಲೆ ಕಾರ್ಯಕ್ರಮವನ್ನು ಬರೋಬ್ಬರಿ ೧೭ ವರ್ಷಗಳ ಕಾಲ ನಿರೂಪಣೆ ಮಾಡಿದ್ದರು. 

ಸಿನಿಮಾ ಮಾಡಿದ ಅಭಿಜಿತ್‌ ಅವರು, ಚಿತ್ರ ಯಶಸ್ಸು ಕಾಣದೇ, ನಷ್ಟ ಅನುಭವಿಸಿದ್ದರು. ಇದೇ ಸಂದರ್ಭದಲ್ಲಿ ನಟಿಸುವ ಅವಕಾಶಗಳು ಕೈ ತಪ್ಪಿದವು. ಸುಮಾರು ೭ ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಅಭಿಜಿತ್‌ ಅವರ ಮನೆಯಲ್ಲಿ ತುಂಬಾ ಕಷ್ಟವಾಗಿತ್ತು. ಕೆಲ ಆಸ್ತಿ, ಒಡವೆಗಳನ್ನು ಕೂಡ ಅಭಿಜಿತ್‌ ಅವರು ಈ ಸಂದರ್ಭದಲ್ಲಿ ಕಳೆದುಕೊಳ್ಳಬೇಕಾಯ್ತು. ಆದರೆ ಈಗ ಕಳೆದೆರಡು ವರ್ಷದಿಂದ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಕೊಂಚ ಆರ್ಥಿಕ ಪರೀಸ್ಥಿತಿ ಸುಧಾರಿಸಿದೆ ಎಂದು. ಜೋಡಿ ನಂ.೧ ಕಾರ್ಯಕ್ರಮದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ