Darshan : ಡಿಬಾಸ್ ಖರೀದಿಸಿದ ಹೊಸ ಕಾರು ಯಾವುದು ಬೆಲೆ ಎಷ್ಟು ? ದರ್ಶನ್ ಬಳಿ ಇರುವ ಕಾರುಗಳು ಇವು

By Infoflick Correspondent

Updated:Saturday, June 18, 2022, 10:08[IST]

Darshan : ಡಿಬಾಸ್ ಖರೀದಿಸಿದ ಹೊಸ ಕಾರು ಯಾವುದು ಬೆಲೆ ಎಷ್ಟು ? ದರ್ಶನ್ ಬಳಿ ಇರುವ ಕಾರುಗಳು ಇವು

ನಟ ದರ್ಶನ್ ಸದ್ಯ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ.ಇದು ಕೂಡ ದುಬಾರಿ ಐಷಾರಾಮಿ ಕಾರುಗಳಲ್ಲಿ ಒಂದು. ದರ್ಶನ್ ಯಾವ ಕಾರು ಖರೀದಿಸಿದ್ದಾರೆ ? ಅದರ ಬೆಲೆ ಎಷ್ಟು ? ದರ್ಶನ ಅವರು ಮುಂಚೆ ಖರೀದಿಸಿರುವ ಕಾರುಗಳು ಯಾವವು? ಇಲ್ಲಿದೆ ವಿವರ

ದರ್ಶನ್ ಬಳಿ ನೀಲಿ ಬಣ್ಣದ ಜಾಗ್ವಾರ್ ಕಾರ್ ಇದೆ. ಇದು ಪತ್ನಿ ವಿಜಯಲಕ್ಷ್ಮಿ,  ಪತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದರು. ಇನ್ನು ದುಬಾರಿ ಕಾರುಗಳಲ್ಲಿ ಒಂದಾದ ಪೋರ್ಶೆ ಕಾರು ಕೂಡ ದರ್ಶನ್ ಬಳಿ ಇದೆ. ಈ ಕಾರನ್ನು ನಿರ್ಮಾಪಕ ಸಂದೇಶ ನಾಗರಾಜ್ ದರ್ಶನ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರು.

ನಟ ದರ್ಶನ್ ಬಳಿ ಎರಡು ಆಡಿ ಕಾರುಗಳಿವೆ. ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣದ ಆಡಿ ಕಾರ್‌ಗಳು ಹಾಗು  i 20 ಕಾರ್ ಕೂಡ ಇದೆ. ಈ ಕಾರನ್ನು ದರ್ಶನ್ ಅವರ ಮಗ ವಿನೀಶ್ ಮಾತ್ರ ಬಳಸುತ್ತಾರೆ. ಫಾರ್ಚೂನರ್ ಮತ್ತು ಬೆಂಜ್ ಕಾರುಗಳು ಕೂಡ ದರ್ಶನ್ ಬಳಿ ಇವೆ. ದರ್ಶನ್ ಅವ್ರ ಬಳಿ ಇರುವ ಅತ್ಯಂತ ದುಬಾರಿ ಕಾರು ಎಂದರೆ ಅದು ಲಂಬೋರ್ಗಿನಿ. ದುಬಾರಿ ಮಿನಿ ಕಾರು 'ಮಿನಿಕೂಪರ್' ಕೂಡ ಇದೆ‌.

ನಟ ದರ್ಶನ್‌ಗೆ ಕಾರು ಕ್ರೇಜ್ ಇರುವುದರಿಂದ ಮಾರುಕಟ್ಟೆಗೆ ಬರುವ ಹೊಸ ಕಾರುಗಳನ್ನು ಆಗಾಗ ಖರೀದಿ ಮಾಡುತ್ತಾ ಇರುತ್ತಾರೆ.  ನಟ ದರ್ಶನ್ ಈಗ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ. ಮತ್ತೊಂದು ದುಬಾರಿ ಕಾರಿನ ಒಡೆಯ ಆಗಿದ್ದಾರೆ ದರ್ಶನ್.

ದರ್ಶನ್ ಖರೀದಿಸಿರುವ ಹೊಸ ಕಾರಿನ ಹೆಸರು 'ಲ್ಯಾಂಡ್ ರೋವರ್ ಡಿಫೆಂಡರ್'. ಇದು 2022ರ ಮಾಡಲ್. ಈ ಕಾರಿನ ಮೊತ್ತ 1.20 ಕೋಟಿ ರೂ. ಇದುವೇ ದರ್ಶನ್ ಅವರ ಕಾರುಗಳ ಲಿಸ್ಟ್ ಸೇರಿರುವ ಹೊಸ ಕಾರು. ಈ ಕಾರಿನಲ್ಲಿ ದರ್ಶನ್ ರೈಡ್ ಹೋಗಿದ್ದು, ಅ ಫೋಟೊಗಳು ಮತ್ತು ವಿಡಿಯೋ ವೈರಲ್ ಆಗಿವೆ.