ನಟ ಗೋವಿಂದೇಗೌಡ ಈಗ ಹೇಗಿದ್ದಾರೆ..? ಅವರ ಬಗ್ಗೆ ಜಗ್ಗೇಶ್ ಹೇಳೀದ್ದೇನು..? ಇಲ್ಲಿದೇ ನೋಡಿ ಫುಲ್ ಅಪ್‌ಡೇಟ್ಸ್..

Updated: Wednesday, July 28, 2021, 14:46 [IST]

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇ ಗೌಡ ಗಾಯಗೊಂಡಿದ್ದು, ಅವರನ್ನು ಬಿಜಿಎಸ್ ಆಸ್ಪತ್ರಗೆ ದಾಖಲಿಸಲಾಗಿದ್ದಾರೆೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇಗೌಡ ಅವರಿಗೆ ನಿನ್ನೆ ಸಂಜೆ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿತು. 

ಇನ್ನು ಗೋವಿಂದೇಗೌಡ ಅವರನ್ನು ನಿರ್ದೇಶಕ ಯೋಗರಾಜ್ ಭಟ್ ಹಾಗೂ ನವರಸ ನಾಯಕ ಜಗ್ಗೇಶ್ ಭೇಟಿ ಮಾಡಿ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ನಾನು ಈಗ ತಾನೇ ಗೋವಿಂದೇಗೌಡನನ್ನ ಭೇಟಿ ಮಾಡಿದ್ದೆ. ರಾಯರ ಆರ್ಶೀವಾದ ದಿಂದ ಕ್ಷೇಮವಾಗಿದ್ದಾನೆ. ನಾನು, ಭಟ್ರು ಹಾಗೂ ಶರಣ ಜೊತೆಗಿದ್ದೇವೆ. ನಿಮ್ಮ ಹಾರೈಕೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.  

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ದಿಂದ ಖ್ಯಾತರಾಗಿರುವ ಗೋವಿಂದೇಗೌಡ ಕೆಜೆಎಫ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಪ್ರಶಸ್ತಿಗೆ ಭಾಜನವಾದ ಅಕ್ಷಿ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, ಯೋಗರಾಜ್ ಭಟ್ಟರ ನಿರ್ದೇಶನದ ಆದ್ದರಿಂದ ಎಂಬ ಸಿನಿಮಾದಲ್ಲಿ ನಾಯಕರಾಗಿದ್ದರು.