Jaggesh : ರಾಯರ ದಯೆಯಿಂದ BMW ಕಾರು ಖರಿದಿಸಿದ ಜಗ್ಗೇಶ ಇದಕ್ಕೆ ಪ್ರೇರಣೆ ಯಾರು ಗೊತ್ತೆ ? ಇಲ್ಲಿದೆ ಒಂದು ಪತ್ರ

By Infoflick Correspondent

Updated:Monday, May 9, 2022, 07:07[IST]

Jaggesh :  ರಾಯರ ದಯೆಯಿಂದ BMW ಕಾರು ಖರಿದಿಸಿದ ಜಗ್ಗೇಶ ಇದಕ್ಕೆ ಪ್ರೇರಣೆ ಯಾರು ಗೊತ್ತೆ ? ಇಲ್ಲಿದೆ ಒಂದು ಪತ್ರ

ಬಹುಬೇಡಿಕೆಯ ನಟ ಜಗ್ಗೇಶ್​ ಅವರು ಹೊಸ BMW ಕಾರು ಖರೀದಿಸಿದ್ದಾರೆ. ಅದರ ಜೊತೆ ಗುರು ರಾಯರ ಪ್ರತಿಮೆ ಸಿಕ್ಕಿದ್ದು ವಿಶೇಷ. ನಟ ಜಗ್ಗೇಶ್​ ಅವರು ರಾಘವೇಂದ್ರ ಸ್ವಾಮಿಗಳ  ಭಕ್ತರು. ಜಗ್ಗೇಶ್ ಅವರಿಗೆ ಗುರು ರಾಯರ ಕೃಪೆ ಅಪಾರವಾಗಿದೆ. ಜಗ್ಗೇಶ್ ಇತ್ತಿಚಿಗೆ ಆಧ್ಯಾತ್ಮಿಕತೆಗೆ ಹೆಚ್ಚು ಒಲವು ನೀಡಿದ್ದಾರೆ. ಬದುಕಿನ ಅನೇಕ ತಿರುವುಗಳಲ್ಲಿ ತಮಗೆ ಸೂಕ್ತ ದಾರಿ ತೋರಿಸಿದ್ದೇ ರಾಘವೇಂದ್ರ ಸ್ವಾಮಿಗಳು ಎಂಬುದನ್ನು ಜಗ್ಗೇಶ್​ ಎಷ್ಟೋ ಬಾರಿ ಹೇಳಿದ್ದಾರೆ.   

ನಟ ಜಗ್ಗೇಶ್ ಅವರಿಗೆ ಇಂದಿಗೂ ಒಂದಿಲ್ಲೊಂದು ರೂಪದಲ್ಲಿ ರಾಘವೇಂದ್ರ ಸ್ವಾಮಿಗಳ ಇರುವಿಕೆ ಅರಿವಿಗೆ ಬರುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ 'ನವರಸ ನಾಯಕ' ಜಗ್ಗೇಶ್​ ಅವರು  ಆಯಕ್ಟೀವ್​ ಆಗಿದ್ದು ಆಧ್ಯಾತ್ಮಿಕ ವಿಚಾರಗಳನ್ನು ಆಗಾಗಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ‌.   

ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಜಗ್ಗೇಶ್ ಹೊಸ ಕಾರು ಖರೀದಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಈ ಸಿನಿಮಾ ಮುಗಿದ ತಕ್ಷಣ ಜಗ್ಗೇಶ್ ಅವರಿಗೆ ಹೊಸ ಕಾರು BMW-x5 ಕೊಳ್ಳಲು ಪ್ರೇರೇಪಿಸಿ ಸಂತೋಷ ಆನಂದ್ ಬುಕ್ ಮಾಡಿಸಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. 

ಈ ಕಾರಿನಲ್ಲಿ ಇಡಲು ರಾಘವೇಂದ್ರ ಸ್ವಾಮಿಗಳ ವಿಗ್ರಹ ಹುಡುಕುತ್ತಿದ್ದೆ ಆಗ ನನ್ನ ಗೆಳಯ ಡಾ. ಸುನೀಲ್ ಅಪರೂಪದ ವಿಗ್ರಹ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಘಟನೆ ಕುರಿತು ಸವಿಸ್ತಾರವಾದ ಪತ್ರವೊಂದು ಬರೆದಿದ್ದಾರೆ ಅದು ಇಲ್ಲಿದೆ ನೋಡಿ ಓದಿ 

ನೆನೆದವರ ಮನದಲ್ಲಿ ಗುರುರಾಯ. ಆತ್ಮೀಯ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ 'ರಾಘವೇಂದ್ರ ಸ್ಟೋರ್ಸ್' ಮುಗಿದ ತಕ್ಷಣ ನನಗೆ ಹೊಸ ಕಾರು BMW-x5 ಕೊಳ್ಳಲು ಪ್ರೇರೇಪಿಸಿ ಬುಕ್ ಮಾಡಿಸಿದ. ನನಗೆ ನನ್ನ ಕಾರಿನಲ್ಲಿ ರಾಯರ ಪ್ರತಿಮೆ ಕಡ್ಡಾಯ. ಹಾಗಾಗಿ ಮಂತ್ರಾಲಯದಲ್ಲಿ ರಾಯರ ಪಾದುಕೆ ಕೊಂಡು, ಬೃಂದಾವನದಲ್ಲಿ ಇರಿಸಿ ತಂದೆ. ಆದರೆ ನನಗೆ ರಾಯರ ಪ್ರತಿಮೆ ತೃಪ್ತಿಯಾಗಲಿಲ್ಲ. ಕಾರು ಡೆಲಿವರಿ ಸಮಯದಲ್ಲಿ ಕೊಳ್ಳುವ ಎಂದು ಮನದಲ್ಲಿ ಸಂಕಲ್ಪಿಸಿದೆ. ನೋಡಿದರೆ ನನ್ನ ಮಿತ್ರ ಸುನಿಲ್​ ಆಕಸ್ಮಿಕ ಮನೆಗೆ ಬಂದರು. ಅಪರೂಪದ ಈ ಹ್ಯಾಂಡ್​ಮೇಡ್​ ಬೆಳ್ಳಿ ರಾಯರ ಪ್ರತಿಮೆ ಕೊಟ್ಟರು. ರಾಯರು ಎಂಥ ಕರುಣಾಮಯಿ. ತಮ್ಮ ಭಕ್ತರು ಮನಸಲ್ಲಿ ಅಂದುಕೊಂಡದ್ದು ನೆರವೇರಿಸಿಬಿಡುತ್ತಾರೆ. ನಾನು ಧನ್ಯ ಅನ್ನಿಸಿತು. ಆಧ್ಯಾತ್ಮಿಕ ಮಾರ್ಗ ಅರಿವಿದ್ದವರಿಗೆ ಮಾತ್ರ ಅರಿವಾಗೋದು ರಾಯರ ಪವಾಡ. ರಾಯರ ಭಕ್ತರ ಹೃದಯಕ್ಕೆ ತಿಳಿಸುವ ಮನಸಾಯಿತು. ತಿಳಿಸಿ ಮನಸ್ಸು ಹಗುರ ಮಾಡಿಕೊಂಡೆ. ನಂಬಿಕೆ ಭಕ್ತಿಯಿಂದ ಕೂಗಿದರೆ ರಾಯರು ನಮ್ಮ ನಿಮ್ಮ ಗಮನಿಸುತ್ತಾರೆ. ನಮ್ಮ ಜೊತೆ ನಿಲ್ಲುತ್ತಾರೆ. ಶುಭಮಸ್ತು' ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.