ಕನ್ನಡ ಚಿತ್ರರಂಗಕ್ಕೆ ಮತ್ತೆ ಆಘಾತ ; ಖ್ಯಾತ ಯುವ ನಟ ಮತ್ತು ನಿರ್ಮಾಪಕ ಕೊರೊನಾಗೆ ಬಲಿ..

Updated: Monday, April 19, 2021, 11:44 [IST]

ಹೌದು ಸ್ನೇಹಿತರೆ ಈ ಕೊರೊನಾ ವೈರಸ್​ ಎರಡನೇ ಅಲೆಯು ಈ ವರ್ಷ ಜೋರಾಗಿದ್ದು ಮಿತಿಮೀರಿ ಹರಡುತ್ತಿದೆ. ಕರ್ನಾಟಕದಲ್ಲಿ ಮೊನ್ನೆ ಒಂದೇ ದಿನಕ್ಕೆ ಸುಮಾರು 19 ಸಾವಿರ ಹೊಸ ಕೊರೊನಾ ಪ್ರಕರಣಗಳು ಕಂಡು ಬಂದರೆ, ಭಾರತದಲ್ಲಿ ನಿನ್ನೆ 2.61 ಲಕ್ಷ ಕೊವಿಡ್​​ ಪ್ರಕರಣಗಳು ಪತ್ತೆಯಾಗಿವೆ. ಈ ವಿಷಯ ಕೇಳಿ ಇಡೀ ದೇಶದ ಜನತೆ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೆ ಆತಂಕಕ್ಕೆ ಕಾರಣವಾಗುತ್ತಿದೆ. ಇವೆಲ್ಲದರ ಜತೆ ನಮ್ಮ  ಸ್ಯಾಂಡಲ್​ವುಡ್​'ನ ಯುವ ನಟ ಹಾಗೂ ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ಅವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.   

"ಕೆಮಿಸ್ಟ್ರಿ ಆಫ್ ಕರಿಯಪ್ಪ", ಹಾಗೂ ''ಸಂಯುಕ್ತ-2'' ಚಿತ್ರಗಳಿಗೆ ಡಿ ಎಸ್ ಮಂಜುನಾಥ್​ ಅವ್ರೇ ಬಂಡವಾಳ ಹೂಡಿದ್ದರು. ಹಾಗೂ 2019ರಲ್ಲಿ ತೆರೆಕಂಡಿದ್ದ ಸಕತ್ ಹಾಸ್ಯವಾಗಿದ್ದ ಕೆಮಿಸ್ಟ್ರಿ ಆಫ್​ ಕರಿಯಪ್ಪ ಚಿತ್ರ ಮೆಚ್ಚುಗೆ ಸಹ ಪಡೆದುಕೊಂಡಿತ್ತು. ಹಾಗೆ ಇತ್ತೀಚಿಗೆ 0%ಲವ್ ಎನ್ನುವ ಸಿನಿಮಾವನ್ನು ನಿರ್ಮಿಸಿ, ಅದರ ಜೊತೆಗೆ ಇದೆ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದ್ರೆ ಕೊರೊನಾ ವೈರಸ್  ಹಿನ್ನೆಲೆಯಲ್ಲಿ ಸಿನಿಮಾ ಕೆಲಸವನ್ನ ಮುಂದೂಡಲಾಗಿತ್ತು. ಆದ್ರೆ ವಿಧಿಯ ಆಟವೇ ಬೆರೆಯಾಗಿತ್ತು, ಈ ಸಿನಿಮಾ ಸಂಪೂರ್ಣವಾಗಿ ಪೂರ್ಣಗೊಳ್ಳುವುದರೊಳಗೆನೆ, ಈ ಮಂಜುನಾಥ್ ಅವರು ಮೃತಪಟ್ಟಿದ್ದಾರೆ....   

ಹೌದು ಡಾ. ಡಿ. ಎಸ್. ಮಂಜುನಾಥ್​ ಅವರು ತುಂಬಾ ವಿಭಿನ್ನ ಆಲೋಚನೆ ವ್ಯಕ್ತಿ ಆಗಿದ್ದರು. ಕನ್ನಡದಲ್ಲಿ ಭಿನ್ನ ರೀತಿಯ ಸಿನಿಮಾಗಳನ್ನ ನಿರ್ಮಿಸಬೇಕೆಂಬುವ ಚಿಂತನೆ ಅಲ್ಲಿದ್ದು, ಇದರಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಜೊತೆಗೆ ಭವಿಷ್ಯದಲ್ಲೂ ಸಹ ಕನ್ನಡದ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದರು...