Sudeep : ಗರುಡಗಮನ ವೃಷಭವಾಹನ ಸಿನಿಮಾ ಬಗ್ಗೆ ದೀರ್ಘ ಪತ್ರ ಬರೆದ ಸುದೀಪ! ಕಿಚ್ಚ ಬರೆದ ಸಾಲು ಇಲ್ಲಿದೆ
Updated:Saturday, May 7, 2022, 08:16[IST]

ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್ನ 'ಗರುಡಗಮನ ವೃಷಭವಾಹನ' ಚಿತ್ರವು ಚಿತ್ರಮಂದಿರದಲ್ಲಿ ಮಾತ್ರವಲ್ಲದೇ 'ಜೀ5' ಒಟಿಟಿಯಲ್ಲೂ ಧೂಳೆಬ್ಬಿಸಿದೆ. ಗರುಡಗಮನ ವೃಷಭವಾಹನ' ಚಿತ್ರವು ಸಿನಿರಸಿಕರಿಗೂ ಮಾತ್ರವಲ್ಲದೇ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಇಷ್ಟವಾಗಿದೆ.
ಸ್ಯಾಂಡಲ್ವುಡ್ನ ಕರುನಾಡ ಚಕ್ರವರ್ತಿ ಶಿವಣ್ಣ 'ಗರುಡ ಗಮನ ವೃಷಭ ವಾಹನ' ಸಿನಿಮಾಗೆ ಸಂಬಂಧಪಟ್ಟಂತೆ ಚಿತ್ರದ ನಾಯಕ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಗಳಿ ಟ್ವೀಟ್ ಮಾಡಿದ್ದರು. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗರುಡಗಮನ ವೃಷಭ ವಾಹನ ಸಿನಿಮಾ ಬಗ್ಗೆ ದೀರ್ಘ ಪತ್ರ ಬರೆಯುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ಪ್ರಯತ್ನಗಳಿಗೆ ಸದಾ ಮೆಚ್ಚುಗೆ ಪ್ರೋತ್ಸಾಹ ನೀಡುವ ಕಿಚ್ಚ ಈಗ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಗ್ಗೆ ಒಂದು ದೀರ್ಘ ಪತ್ರ ಬರೆದಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡು ರಾಜ್ ಬಿ. ಶೆಟ್ಟಿ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಕಿಚ್ಚನ ಈ ಪತ್ರದಲ್ಲಿ ಏನಿದೆ? ಇಲ್ಲಿದೆ ಪೂರ್ತಿ ವಿವರ..
ಸ್ಕ್ರಿಪ್ಟ್ ಮಾಡಲು ಕಂಟೆಂಟ್ ಹುಡುಕಾಟ ಮಾಡುವುದು ಪ್ರತಿಯೊಬ್ಬ ಕ್ರೇಯಟರ್ ನ ಭಾಗವಾಗಿದೆ. ಸ್ಕ್ರಿಪ್ಟ್, ಮೇಕಿಂಗ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಎಲ್ಲರನ್ನು ಮತ್ತು ಪ್ರೇಕ್ಷಕರನ್ನು ಎಕ್ಸಾಯಿಟ್ ಆಗುವಂತೆ ಮಾಡಬೇಕು. ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ. ಈ ರೀತಿಯ ಸಿನಿಮಾ ಮಾಡಿದ ಇಡೀ ತಂಡಕ್ಕೆ ನನ್ನ ಮೆಚ್ಚುಗೆ ಕೂಡ ಹೌದು. ನನಗೆ ಸಿನಿಮಾ ನೋಡಲು ಅವಕಾಶ ಸಿಗುವುದು ಕಡಿಮೆ. ನಿನ್ನೆ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ಬಳಿಕ ಪ್ರಾಮಾಣಿಕವಾಗಿ ನನ್ನ ಮನಸ್ಸಿನಿಂದ ಬಂದ ಪದ; ವಾವ್.! ಬರವಣಿಗೆ ಬ್ರಿಲಿಯಂಟ್, ತಾಂತ್ರಿಕವಾಗಿ ಈ ಸಿನಿಮಾ ಇದೊಂದು ಪಾಠ, ಮ್ಯೂಸಿಕ್ ಅತ್ಯುತ್ತಮ, ಎಲ್ಲ ಕಲಾವಿದರ ನಟನೆ ಸೂಪರ್' ಎಂದು ಸುದೀಪ್ ಹೊಗಳಿದ್ದಾರೆ.
ಈ ಸಿನಿಮಾಕ್ಕೆ ಸರಳತೆಯೇ ದೊಡ್ಡ ಪ್ಲಸ್ ಪಾಯಂಟ್. ಇದರಲ್ಲಿ ಯಾವುದೇ ನಟ ಅಥವಾ ದೃಶ್ಯ ತುರುಕಿದಂತಿಲ್ಲ. ಇ ಸಿನಿಮಾ ಪರ್ಫೆಕ್ಟ್ ಆಗಿದೆ. ಸಿನಿಮಾದ ತೀವ್ರತೆಯನ್ನು ಸಂಗೀತ ಹೆಚ್ಚಿಸುತ್ತದೆ' ಎಂದು ಸುದೀಪ್ ಕೊಂಡಾಡಿದ್ದಾರೆ.
ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಅವರ ನಟನೆಯನ್ನು ಸುದೀಪ್ ಅಪಾರವಾಗಿ ಇಷ್ಟಪಟ್ಟಿದ್ದಾರೆ . ಇದು ನಾನು ನೋಡಿದ ರಾಜ್ ಅವರ ಮೊದಲ ಸಿನಿಮಾ. ಕ್ಯಾಮರಾ ಹಿಂದೆ ಮತ್ತು ಮುಂಭಾಗದಲ್ಲಿ ಅದ್ಭುತ. ಅತ್ಯುತ್ತಮ ಬರವಣಿಗೆ. ಶಿವ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಪ್ರತಿ ಫ್ರೇಮಿನಲ್ಲೂ ಅದ್ಭುತವಾಗಿದೆ. ನಿಜವಾಗಿಯೂ ಪ್ರತಿಭಾವಂತ ನಟ' ಎಂದು ಹೇಳಿದ್ದಾರೆ. ನನಗೆ ಕೊನೆಗೂ ಈ ಸಿನಿಮಾ ನೋಡಲು ಸಾಧ್ಯವಾಯ್ತು ಎಂಬುದಕ್ಕೆ ಖುಷಿ ಇದೆ. ಈ ತಂಡದ ಬಗ್ಗೆ ಬರೆಯುತ್ತಿರುವುದಕ್ಕೆ ಇನ್ನೂ ಹೆಚ್ಚಿನ ಸಂತಸ ಆಗುತ್ತಿದೆ' ಎಂದಿದ್ದಾರೆ ಕಿಚ್ಚ ಸುದೀಪ್.