Sudeep : ಕಿಚ್ಚನ ಕನ್ನಡ ಪಾಠದ ವಿಡಿಯೋ ವೈರಲ್ ! ಜನಮೆಚ್ಚಿಕೊಂಡ ಈ ವಿಡಿಯೋದಲ್ಲಿ ಅಂತಹದ್ದೇನಿದೆ

By Infoflick Correspondent

Updated:Wednesday, August 3, 2022, 20:29[IST]

Sudeep : ಕಿಚ್ಚನ ಕನ್ನಡ ಪಾಠದ ವಿಡಿಯೋ ವೈರಲ್ !  ಜನಮೆಚ್ಚಿಕೊಂಡ  ಈ ವಿಡಿಯೋದಲ್ಲಿ ಅಂತಹದ್ದೇನಿದೆ

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿದೆ. ದೇಶದಾದ್ಯಂತ ಸಿನಿಮಾ ಅಬ್ಬರಿಸುತ್ತಿದೆ. ವಿಕ್ರಾಂತ್ ರೋಣ ಸಿನಿಮಾಗಾಗಿ ಸುದೀಪ್ ಸಾಕಷ್ಟು ಸಂದರ್ಶನ ನೀಡಿದ್ದಾರೆ. ಈ ವೇಳೆ ಸುದೀಪ್ ನಿರೂಪಕಿಯೊಬ್ಬರಿಗೆ ಕನ್ನಡದ ಪಾಠ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಬಾಲಿವುಡ್ ನಟ ಅಜಯ್ ದೇವಗನ್ ಗೆ ರಾಷ್ಟ್ರ ಭಾಷೆಯ ಪಾಠ ಮಾಡಿದ್ದ ಸುದೀಪ್ ಇದೀಗ ನಿರೂಪಕಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದೀಗ ಸುದೀಪ್ ನಿರೂಪಕಿಗೆ ಕನ್ನಡದ ಪಾಠ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸುದೀಪ್ ನಡೆಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಕನ್ನಡದವರೇ ಕನ್ನಡ ಮಾತಾಡಲು ಹಿಂದೂ ಮುಂದು ನೋಡುತ್ತಿರುವ ಸಂದರ್ಭದಲ್ಲಿ ಸುದೀಪ್ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಸಂದರ್ಶನದಲ್ಲಿ ನಿರೂಪಕಿ 'ಕನ್ನಡ್' ಎಂದು ಹೇಳಿದ ತಕ್ಷಣ ಅದು ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿದ್ದಾರೆ. ಸುದೀಪ್ ನಿರೂಪಕಿಗೆ ಹೇಳಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಿರೂಪಕಿ ಕನ್ನಡ್ ಎನ್ನುತ್ತಿದ್ದಂತೆ ಸುದೀಪ್ ಆಕೆಗೆ ಕನ್ನಡ ಪಾಠ ಮಾಡಿದ್ದಾರೆ. ನಿರೂಪಕಿ ತೆಲುಗು, ತಮಿಳು, ಮಲಯಾಳಂಮ ಕನ್ನಡ್ ಎನ್ನುತ್ತಿದ್ದಂತೆ ಸುದೀಪ್ ಕನ್ನಡ್ ಅಲ್ಲ ಮೇಡಂ ಕನ್ನಡ. ಹೇಗೆ ಹಿಂದಿ ಹಿಂದ್ ಆಗಲ್ವೋ ಅದೇ ರೀತಿ ಕನ್ನಡ ಕನ್ನಡ್ ಆಗಲ್ಲ. ನೀವು ನಮ್ಮ ಭಾಷೆ ಕಲಿಯಿರಿ. ಭಾಷೆ ಬಿಡಿ ಅದರ ಹೆಸರನ್ನಾದರೂ ಸರಿಯಾಗಿ ಹೇಳಿ. ತಮಿಳು ಸರಿಯಾಗಿ ಹೇಳ್ತಿರಿ. ತೆಲುಗು ಸರಿಯಾಗಿ ಹೇಳ್ತಿರಿ. ಆದರೆ ಕನ್ನಡವನ್ನು ಕನ್ನಡ್ ಅಂತೀರಾ. ಅದು ಕನ್ನಡ್ ಅಲ್ಲ ಕನ್ನಡ ಎಂದಿದ್ದಾರೆ.

ಕಿಚ್ಚ ಸುದೀಪ್ ಯಾವುದೇ ಮುಲಾಜಿಲ್ಲದೇ ಆ ನಿರೂಪಕಿಗೆ ಅದೇ ಸ್ಥಳದಲ್ಲೇ ಖಡಕ್ ಉತ್ತರ ನೀಡಿದ ಪರಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸುದೀಪ್ ಸಂದರ್ಶನದ ತುಣುಕನ್ನು ಕನ್ನಡ ಅಭಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.