ಕೆಜಿಎಫ್ ಚಾಪ್ಟರ್ 2 ಯಶಸ್ವಿಯಾಗಲು ಯಶ್ ದೇವಸ್ಥಾನ ಭೇಟಿ ; ದರ್ಶನಪೆಡದ ರಾಕಿ ಭಾಯ್ ಹೇಳಿದ್ದೇನು ?

By Infoflick Correspondent

Updated:Monday, April 11, 2022, 19:42[IST]

ಕೆಜಿಎಫ್ ಚಾಪ್ಟರ್ 2 ಯಶಸ್ವಿಯಾಗಲು ಯಶ್ ದೇವಸ್ಥಾನ ಭೇಟಿ ; ದರ್ಶನಪೆಡದ ರಾಕಿ ಭಾಯ್ ಹೇಳಿದ್ದೇನು ?

ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಸಜ್ಜಾಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇಗುಲಗಳಿಗೆ ರಾಕಿಂಕ್ ಸ್ಟಾರ್ ಯಶ್ ಭೇಟಿ ನೀಡಿದ್ದಾರೆ. ರಾಕಿ ಭಾಯ್ ಗೆ ದೇವರೆಂದರೆ ಅಪಾರ ಭಕ್ತಿ. ಹಲವು ಬಾರಿ ಸಮಯ ಸಿಕ್ಕಾಗೆಲ್ಲ ಹಲವಾರು ದೇವಸ್ಥಾನಕ್ಕೆ ಹೋಗಿ ದರ್ಶನಪಡೆದು ಭಕ್ತಿಯಿಂದ ಬಂದಿರುತ್ತಾರೆ ಯಶ್. ದರ್ಮಸ್ಥಳದ ಸಾಮೂಹಿಕ ವಿವಾಹದಲ್ಲೂ ಭಾಗಿಯಾಗಿದ್ದರು ಯಶ್ ದಂಪತಿ. 

ಇದೀಗ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲಿಗೆ ಯಶ್  ಭೇಟಿ ನೀಡಿದ್ದು, ನಂತರ ಧರ್ಮಸ್ಥಳಕ್ಕೆ ತೆರಳಿದರು. ಯಶ್ ಜೊತೆಗೆ ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಇದ್ದರು. ಶುಭಾರಂಭಕ್ಕೂ ಮುನ್ನ ದೇವರ ಆಶೀರ್ವಾದ ಪಡೆಯುವುದು ಯಶ್ ವಾಡಿಕೆ.  

ಹೆಲಿಕಾಪ್ಟರ್ ಮೂಲಕ ಆಗಮಿಸಿದ ಯಶ್  ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ದೇವರ ದರ್ಶನಕ್ಕೂ ಮೊದಲು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಬೇಡಿದ್ದಾರೆ. ಯಶ್ ಕುಟುಂಬದ ಬಗ್ಗೆಯೂ ವೀರೇಂದ್ರ ಹೆಗ್ಗಡೆ ವಿಚಾರಿಸಿದ್ದಾರೆ. ಮಗಳು ಮತ್ತು ಮಗನ ವಯಸ್ಸಿನ ಬಗ್ಗೆ ವಿಚಾರಿಸಿ ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಬರುವಂತೆ ಹೇಳಿದ್ದಾರೆ.  

ಧರ್ಮಸ್ಥಳ ದಿಂದ ಉಜಿರೆ ಸೂರ್ಯ ದೇವಸ್ಥಾನ ಕ್ಕೆ ಹೋಗೋದಾಗಿ ಯಶ್ ತಿಳಿಸಿದಾಗ,ಕ್ಷೇತ್ರ ದಲ್ಲಿ ದರ್ಶನ ಮುಗಿಸಿ ಊಟ ಮಾಡಿಯೇ ತೆರಳಬೇಕಾಗಿ ವಿನಂತಿ ಮಾಡಿದ್ದಾರೆ ಧರ್ಮಾಧಿಕಾರಿಗಳು. 

ಮಣ್ಣಿನ ಹರಕೆ'ಯ ಕ್ಷೇತ್ರವೆಂದೇ ಪ್ರಸಿದ್ಧಿಯಾದ ಸುರ್ಯ ದೇವಸ್ಥಾನಕ್ಕೂ ಭೇಟಿ ನೀಡಿ, ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದ್ದಾರೆ.‌ಇದರ ಜೊತೆ ಕೊಲ್ಲೂರಿಗೆ ಬಂದು ನೇರವಾಗಿ ಮೂಕಾಂಬಿಕಾ ದೇವಸ್ಥಾನಕ್ಕೆ ಹಾಗು ತಿರುಪತಿ ದೇವಸ್ಥಾನಕ್ಕೂ ಹೋಗಿ ದರ್ಶನ ಪಡೆದಿದೆ ಚಿತ್ರತಂಡ.  (Video credit : public tv )

ಸಿನಿಮಾ ರಿಲೀಸ್ ಹತ್ತಿರ ಬರುತ್ತಿದೆ. ಹಾಗಾಗಿ ದೇವಸ್ಥಾನ ಭೇಟಿ ನೀಡಿದ್ದೇವೆ. ‌ನಾನು ಮತ್ತು ನಿರ್ಮಾಪಕರು ಒಳ್ಳೆ ಕೆಲಸ ಶುರು ಮಾಡುವಾಗ ದೇವರ ದರ್ಶನ ಮಾಡುತ್ತೇವೆ‌. ಎಂದು ಮಾಧ್ಯಮಗಳಿಗೆ ಯಶ್ ಹೇಳಿದ್ದಾರೆ.