ಧೈಲ್ಯಾಂಡ್ ನಲ್ಲಿ ಚುಟುಚುಟು ಬೆಡಗಿಯ ವೈರಲ್ ಫೋಟೊಸ್ ! ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ

By Infoflick Correspondent

Updated:Thursday, July 14, 2022, 15:33[IST]

ಧೈಲ್ಯಾಂಡ್ ನಲ್ಲಿ ಚುಟುಚುಟು ಬೆಡಗಿಯ ವೈರಲ್ ಫೋಟೊಸ್ ! ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ

ಆಶಿಕಾ ಸ್ಯಾಂಡಲ್​ವುಡ್​ನಲ್ಲಿ ಚುಟು ಚುಟು ಬೆಡಗಿ ಎಂದೇ ಫೇಮಸ್​. ಮದಗಜ ಬೆಡಗಿ ಸದ್ಯ ಥೈಲ್ಯಾಂಡ್​ ಟ್ರಿಪ್​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಆಶಿಕಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಫುಲ್ ಮಸ್ತಿ ಮಾಡುತ್ತಿದ್ದು, ಈಗಾಗಲೇ ಅಲ್ಲಿನ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಆಶಿಕಾ ಥೈಲ್ಯಾಂಡ್​ ಪ್ರವಾಸದಿಂದ ಮರಳಿ ಬಂದಿದ್ದು, ಅದರ ಫೋಟೋಗಳನ್ನು ಒಂದೊಂದಾಗಿ ಅಭಿಮಾನಿಗಳ ಜೊತೆಗ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಶಿಕಾ ಫೋಟೋಗಳು ವೈರಲ್ ಆಗುತ್ತಿದೆ. ಕಡಲ ತೀರದಿಂದ ಮತ್ತೊಂದಿಷ್ಟು ಫೋಟೋಗಳನ್ನು ಆಶಿಕಾ ಶೇರ್​ ಮಾಡಿಕೊಂಡಿದ್ದು, ಪಡ್ಡೆ ಹುಡುಗರ ಮೈ ಮನ ಕದ್ದಿದ್ದಾರೆ.

ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡಿ ಬಂದಿರುವ ಆಶಿಕಾ ಇದೀಗ ಸುಂದರ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ. ಕಡಲ ತೀರದಲ್ಲಿನ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಶಿಕಾ ರಂಗನಾಥ್ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದು ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ.

 

ಆಶಿಕಾ ಅಭಿನಯದ ಅವತಾರ ಪುರುಷ ಸಿನಿಮಾ ಕೂಡ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಸದ್ಯ ಆಶಿಕಾ ಬಳಿ ರ್ಯಾಂಬೋ, ಓ2, ಇನ್ನು ಹೆಸರಿಡದ ಸಿನಿಮಾವಿದೆ. ಸಿನಿಮಾಗಿಂತ ಹೆಚ್ಚಾಗಿ ಆಶಿಕಾ ಇತ್ತೀಚಿಗೆ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ.