ಮಗಳ ಹೆಸರನ್ನು ವಿಶಿಷ್ಟರೀತಿಯಲ್ಲಿ ಹೇಳಿದ ದಿಶಾ ಮದನ್ ! ; ಇಲ್ಲಿ ನೋಡಿ ಈ ಮುದ್ದಾದ ವಿಡಿಯೋ
Updated:Monday, April 18, 2022, 09:02[IST]

ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿ ದಿಶಾ ಮದನ್ ಹೆಣ್ಣುಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ. 2022 ಮಾರ್ಚ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈಗ ಮಗುವಿನ ನಾಮಕರಣದ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ದಿಶಾ ಮದನ್ ಮನೆಯಲ್ಲಿಗ ನಾಮಕರಣದ ಸಡಗರ ಮನೆಮಾಡಿದೆ.
ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಸುನಾಮಿ ಕಿಟ್ಟಿಗೆ ಜೊತೆಯಾಗಿ ದಿಶಾ ಮದನ್ ಭಾಗವಹಿಸಿದ್ದರು. ಆ ನಂತರ ಅವರು 'ಕುಲವಧು' ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿದ್ದರು. ಫ್ರೆಂಚ್ ಬಿರಿಯಾನಿ' , 'ಒನ್ ಕಟ್ ಟು ಕಟ್' ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.
ತುಂಬು ಗರ್ಭಿಣಿಯಾಗಿದ್ದರೂ ಕೂಡ ಸ್ವತಃ ಕಾರ್ನ್ನು ಡ್ರೈವ್ ಮಾಡಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದು ವಿಶೇಷ. ದಿಶಾ ಮದನ್ 2019ರಲ್ಲಿ ಮೊದಲು ಗಂಡು ಮಗುವಿಗೆ ಜನ್ಮ ನೀಡಿದ್ದು, ವಿಯಾನ್ ಎಂದು ಪುತ್ರನಿಗೆ ನಾಮಕರಣ ಮಾಡಿದ್ದರು ಈಗ ಎರಡನೇ ಮಗುವಿನ ಜೊತೆ ಸಂತಸದ ಕ್ಷಣ ಕಳೆಯುತ್ತಿದ್ದಾರೆ.
ಈಗ ಎರಡನೇಯ ಮಗುವಿಗೆ ಮುದ್ದಾದ ಹೆಣ್ಣುಪಾಪುವಿಗೆ "ಅವೀರಾ" ಎಂದು ಹೆಸರಿಟ್ಟಿದ್ದಾರೆ. ತಮ್ಮ ಮುದ್ದು ಹೆಣ್ಣು ಮಗುವಿನ ಮುಖವನ್ನು ತೋರಿಸಿದ್ದು, ಫುಲ್ ಸ್ಪೆಷಲ್ ಮತ್ತು ಕ್ರಿಯೇಟಿವ್ ಆಗಿ ವೀಡಿಯೋ ಮಾಡಲಾಗಿದೆ. ಮಗಳ ಮುಖ ತೋರಿಸುವುದು ಅಲ್ಲದೇ ಮಗಳ ಹೆಸರು ‘ಅವಿರಾ’ ಎಂದು ರಿವೀಲ್ ಮಾಡಿದ್ದಾರೆ.