ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ ಬಹುಭಾಷಾ ನಟಿ ಮೀನಾಗೆ ಪತಿವಿಯೋಗ!

By Infoflick Correspondent

Updated:Tuesday, June 28, 2022, 23:53[IST]

ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ ಬಹುಭಾಷಾ ನಟಿ ಮೀನಾಗೆ ಪತಿವಿಯೋಗ!

ಬಹುಭಾಷಾ ನಟಿ ಮೀನಾ ದಕ್ಷಿಣ ಭಾರತದಲ್ಲಿ ಬೇಡಿಕೆಯ ನಟಿಯಾಗಿದ್ದು  ಕನ್ನಡದಲ್ಲಿ ರವಿಚಂದ್ರನ್ ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ವಾತಿಮುತ್ತು, ಮೈ ಆಟೋಗ್ರಾಫ್' ಸಿನಿಮಾದಲ್ಲಿ ಸುದೀಪ್‌ ಜೊತೆ ತೆರೆ ಹಂಚಿಕೊಂಡಿರುವ ಮೀನಾ ಈಗಲೂ ಸಹ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ವೆಬ್ ಸರಣಿ, ಕಿರುತೆರೆ ಹಾಗೂ ಮಾಲಿವುಡ್​ನಲ್ಲಿ ಸಾಕಷ್ಟು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ.ಮೋಹನ್​ ಲಾಲ್​ ಅವರ ಜತೆ ಮೀನಾ ನಟಿಸಿರುವ ದೃಶ್ಯಂ 2 ಸಿನಿಮಾ ಲಾಕ್​ಡೌನ್​ನಲ್ಲೇ ಒಟಿಟಿ ಮೂಲಕ ರಿಲೀಸ್ ಆಗಿ, ಹಿಟ್​ ಆಗಿದೆ.

2009ರಲ್ಲಿ ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರೊಡನೆ ಮದುವೆಯಾಗಿದ್ದಾರೆ ನಟಿ ಮೀನಾ. ಈ ದಂಪತಿಗೆ ನೈನಿಕಾ ಹೆಸರಿನ ಮುದ್ದಾದ ಹೆಣ್ಣುಮಗುವಿದೆ. ನಟಿ ಮೀನಾ ಅವರ ಮಗಳು ತಮಿಳಿನ ಥೆರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.

ಮೀನಾ ಅವರ ಪತಿ ವಿದ್ಯಾಸಾಗರ್​ ಅವರು ಬೆಂಗಳೂರು ಮೂಲದ ಸಾಫ್ಟವೇರ್ ಇಂಜಿನಿಯರ್. ಸದ್ಯ ಮೀನಾ ಹಾಗೂ ಅವರ ಕುಟುಂಬ ಚೆನ್ನೈನಲ್ಲೇ ನೆಲೆಸಿದ್ದಾರೆ. ಈ ಸುಂದರ ಕುಟುಂಬಕ್ಕೆ ವಿಧಿಯ ವಕ್ರಕಣ್ಣು ಬಿದ್ದಿದೆ.

ನಟಿ ಮೀನಾ ಪತಿ ವಿದ್ಯಾಸಾಗರ್ ಇಂದು ನಿಧನರಾಗಿದ್ದಾರೆ. ಚೈನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಸಿನಿಮಾ ರಂಗದವರಿಗೆ ಜನತೆಗೆ ಇದು ಆಘಾತಕಾರಿ ಸುದ್ದಿಯಾಗಿದೆ. ಕೊರೊನಾದಿಂದ ಆಸ್ಪತ್ರೆ ಸೇರಿದ ವಿದ್ಯಾ ಸಾಗರ್ ಶ್ವಾಸಕೋಶ ಸಮಸ್ಯೆಯುಂಟಾಗಿ ಇಂದು ನಿಧನರಾಗಿದ್ದಾರೆ.
ನಗುಮೊಗದ ನಟಿ ಮೀನಾ ಆಕಸ್ಮಿಕ ಪತಿವಿಯೋಗದಿಂದ ದುಃಖದ ಕಡಲಲ್ಲಿ ಮುಳುಗಿದ್ದಾರೆ. ಈ ಶಾಕಿಂಗ್ ಸುದ್ದಿಯಿಂದ ಚಿತ್ರರಂಗ ಬೆಚ್ಚಿಬಿದ್ದಿದ್ದು ಸಂತಾಪ ಸೂಚಿಸುತ್ತಿದೆ.