ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಹುಭಾಷಾ ತಾರೆ ನಮೀತಾ

By Infoflick Correspondent

Updated:Tuesday, May 10, 2022, 18:11[IST]

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಹುಭಾಷಾ ತಾರೆ ನಮೀತಾ

ವಿ ರವಿಚಂದ್ರನ್ ಅವರ 'ನೀಲಕಂಠ', ಹೂ' ಹಾಗೂ 'ಇಂದ್ರ' ಸಿನಿಮಾ ನಟಿ ನಮಿತಾ ಅವರು ತಾಯಿಯಾಗುತ್ತಿದ್ದಾರೆ. ತಮಿಳು, ತೆಲುಗು, ಕನ್ನಡ ಭಾಷೆಯ ಚಿತ್ರರಂಗದಲ್ಲಿ ನಮಿತಾ ನಟಿಸಿದ್ದಾರೆ. ನಟಿ ನಮಿತಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  ಈ ವೇಳೆ ತಾನು ಗರ್ಭಿಣಿ ಎಂಬ ಸಂತಸವನ್ನು ಹಂಚಿಕೊಂಡಿದ್ದಾಳೆ. ಕಪ್ಪು ಒಳಉಡುಪು ಮತ್ತು ಪ್ಯಾಂಟ್ ಧರಿಸಿ, ಬೇಬಿ ಪಂಪ್ ಫೋಟೋಶೂಟ್ ನಡೆಸುತ್ತಾಳೆ. 

ಖ್ಯಾತ ನಟಿ ನಮಿತಾ ಅವರಿಗೆ ಇಂದು (ಮೇ 10) ಹುಟ್ಟುಹಬ್ಬದ ಸಡಗರ. ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದ ನಮಿತಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 41ನೇ ವರ್ಷಕ್ಕೆ ನಮಿತಾ ಕಾಲಿಟ್ಟಿದ್ದಾರೆ. 

2017ರಲ್ಲಿ ವೀರೇಂದ್ರ ಎಂಬುವವರ ಜೊತೆ ತಿರುಪತಿಯ ಇಸ್ಕಾನ್ ಲೋಟಸ್ ದೇಗುಲದಲ್ಲಿ ಮದುವೆಯಾದರು‌. ತಮಿಳು ಸಿನಿಮಾವೊಂದರಲ್ಲಿ ನಮಿತಾ ವೀರೇಂದ್ರ ಆತ್ಮೀಯರಾಗಿದ್ದರು, ಆಮೇಲೆ ಈ ಜೋಡಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾದರು. ಮದುಎಯ ನಂತರು ಪತಿಯ ಪ್ರೋತ್ಸಾಹದಿಂದ ಬಣ್ಣದ ಲೋಕದಲ್ಲೇ ಕೆಲಸ ಮಾಡುತ್ತಿದ್ದಾರೆ.  ಕೊನೆಯದಾಗಿ ಕನ್ನಡದಲ್ಲಿ 'ಬೆಂಕಿ ಬಿರುಗಾಳಿ' ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದರು.ತಮಿಳಿನ ಬಿಗ್ ಬಾಸ್ ಶೋನಲ್ಲಿಯೂ ಭಾಗವಹಿಸಿದ್ದರು, ಡ್ಯಾನ್ಸ್ ಶೋನ ಜಡ್ಜ್ ಕೂಡ ಆಗಿದ್ದರು. ಸಿನಿಮಾ ಜೊತೆಗೆ ತಮಿಳುನಾಡಿನ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ನಮಿತಾ ಕಾರ್ಯನಿರ್ವಹಿಸುತ್ತಿದ್ದಾರೆ. 

ಮಗು ಬಗ್ಗೆ ಗರ್ಭಿಣಿಯ ಅನುಭವದ ಬಗ್ಗೆ ನಮೀತಾ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಹೊಸ ಅಧ್ಯಾಯ ಶುರುವಾದಾಗ, ನಾನೂ ಬದಲಾದೆ, ಏನೋ ಒಂದು ನನ್ನೊಳಗೆ ವರ್ಗಾವಣೆಯಾಯಿತು. ಪ್ರಕಾಶಮಾನವಾದ ಹಳದಿ ಸೂರ್ಯ ನನ್ನ ಮೇಲೆ ಬೆಳಗುತ್ತಿದ್ದಂತೆ, ಹೊಸ ಜೀವನ, ಹೊಸ ಜೀವಿಗಳು ನನ್ನನ್ನು ಕರೆಯುತ್ತಿದೆ. ನಾನು ಸಾಕಷ್ಟು ದಿನಗಳಿಂದ ನಿನಗೋಸ್ಕರ ಪ್ರಾರ್ಥಿಸಿದ್ದೆ. ನೀನು ಒದೆಯುವುದು, ಅಲ್ಲಾಡುವುದನ್ನು ನಾನು ಫೀಲ್ ಮಾಡಬಲ್ಲೆ. ನಾನು ಎಂದಿಗೂ ಅನುಭವಿಸದ, ಅನುಭವಿಸಲಾರದ ಅನುಭವವನ್ನು ನೀನು ನೀಡುತ್ತಿರುವೆ" ಎಂದು ನಮಿತಾ ಹೇಳಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಹುಭಾಷಾ ತಾರೆ ನಮೀತಾ

ಮಗು ಬಗ್ಗೆ ಗರ್ಭಿಣಿಯ ಅನುಭವದ ಬಗ್ಗೆ ನಮೀತಾ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಹೊಸ ಅಧ್ಯಾಯ ಶುರುವಾದಾಗ, ನಾನೂ ಬದಲಾದೆ, ಏನೋ ಒಂದು ನನ್ನೊಳಗೆ ವರ್ಗಾವಣೆಯಾಯಿತು. ಪ್ರಕಾಶಮಾನವಾದ ಹಳದಿ ಸೂರ್ಯ ನನ್ನ ಮೇಲೆ ಬೆಳಗುತ್ತಿದ್ದಂತೆ, ಹೊಸ ಜೀವನ, ಹೊಸ ಜೀವಿಗಳು ನನ್ನನ್ನು ಕರೆಯುತ್ತಿದೆ.

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಹುಭಾಷಾ ತಾರೆ ನಮೀತಾ

ಖ್ಯಾತ ನಟಿ ನಮಿತಾ ಅವರಿಗೆ ಇಂದು (ಮೇ 10) ಹುಟ್ಟುಹಬ್ಬದ ಸಡಗರ. ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. 

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಹುಭಾಷಾ ತಾರೆ ನಮೀತಾ

ವಿ ರವಿಚಂದ್ರನ್ ಅವರ 'ನೀಲಕಂಠ', ಹೂ' ಹಾಗೂ 'ಇಂದ್ರ' ಸಿನಿಮಾ ನಟಿ ನಮಿತಾ ಅವರು ತಾಯಿಯಾಗುತ್ತಿದ್ದಾರೆ. ತಮಿಳು, ತೆಲುಗು, ಕನ್ನಡ ಭಾಷೆಯ ಚಿತ್ರರಂಗದಲ್ಲಿ ನಮಿತಾ ನಟಿಸಿದ್ದಾರೆ.