Pavithra Lokesh & Naresh : ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಮದುವೆ ವಿಚಾರವಾಗಿ ಆಪ್ತ ವ್ಯಕ್ತಿಗಳಿಂದ ಹೊರಬಿತ್ತು ಸ್ಪಸ್ಟನೆ

By Infoflick Correspondent

Updated:Wednesday, June 22, 2022, 08:36[IST]

Pavithra Lokesh & Naresh : ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಮದುವೆ ವಿಚಾರವಾಗಿ ಆಪ್ತ ವ್ಯಕ್ತಿಗಳಿಂದ ಹೊರಬಿತ್ತು ಸ್ಪಸ್ಟನೆ

ಎಲ್ಲಿ ನೋಡಿದರೂ ಈಗ ಪವಿತ್ರ ಲೋಕೇಶ್  (Pavithra Lokesh) ಅವರು ಮದುವೆ ಆಗಿದ್ದಾರೆ ಎಂಬ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ನಟಿ ಪವಿತ್ರ ಲೋಕೇಶ್​ ತೆಲುಗು ಚಿತ್ರರಂಗದ ಸೂಪರ್​​ ಸ್ಟಾರ್​ ಮಹೇಶ್​ ಬಾಬು  ಅವರ ಅಣ್ಣನ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನರೇಶ್  ಹಾಗೂ ಪವಿತ್ರ ಲೋಕೇಶ್​ ಮದುವೆಯ ಸುದ್ದಿ ವೈರಲ್ ಆಗುತ್ತಿರುವಾಗ ಈ ಕುರಿತು ಇವರಿಬ್ಬರೂ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಇದೀಗ ಮುಖ್ಯ ವ್ಯಕ್ತಿಗಳಿಂದ ಸುದ್ದಿಗೆ ಸ್ಪಷ್ಟನೆ ದೊರೆತಿದೆ.

ಸಹೋದರಿ ಪವಿತ್ರಾ ಮದುವೆ ವಿಚಾವನ್ನು ಆದಿ ಲೋಕೇಶ್  (Adi Lokesh) ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸುವ ಆದಿ ಲೋಕೇಶ್ ಇದು ಸುಳ್ಳು, ಈ ಎಲ್ಲಾ ನಾನ್‌ಸೆನ್ಸ್‌ನಿಂದ ಹೊರಬರಲು ಬಯಸುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ.

ಈ ಕುರಿತಾಗಿ ನರೇಶ್ ಬಾಬು (Naresh Babu) ಅವರ ಪಿಆರ್‌ಓ ಇದು ಪೂರ್ತಿ ಸುಳ್ಳು. ನರೇಶ್ ಬಾಬು ಅವರ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.

ಮದುವೆ ವಿಷಯ ಹೊರಬೀಳುತ್ತಿದ್ದಂತೆ ಪವಿತ್ರಾ ಲೋಕೇಶ್ ಅವರನ್ನು ಮಾಧ್ಯಮಗಳು ಸಂಪರ್ಕಿಸಲು ಯತ್ನಿಸಿವೆ. ಆದರೆ, ಅವರು ಪೋನ್ ರಿಸೀವ್ ಮಾಡಿಲ್ಲ. ಬದಲಾಗಿ ಮದುವೆ ವಿಚಾರವಾಗಿ ಎದ್ದಿರುವ ಸುದ್ದಿ ಸುಳ್ಳು ಎಂಬುದಾಗಿ ಮಾದ್ಯಮದವರಿಗೆ ಮೆಸೇಜ್ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.