Ramya : ನಟಿ ಸಾಯಿಪಲ್ಲವಿ ಪರ ನಿಂತ್ರ ರಮ್ಯಾ ಹೇಳಿದ್ದೇನು ? ಮೋಹಕತಾರೆಯ ಅಭಿಪ್ರಯಾವೇನು

By Infoflick Correspondent

Updated:Friday, June 17, 2022, 11:02[IST]

Ramya : ನಟಿ ಸಾಯಿಪಲ್ಲವಿ ಪರ ನಿಂತ್ರ  ರಮ್ಯಾ ಹೇಳಿದ್ದೇನು ? ಮೋಹಕತಾರೆಯ ಅಭಿಪ್ರಯಾವೇನು

ಕಾಶ್ಮೀರಿ ಪಂಡಿತರ ಕುರಿತು ಹೇಳಿಕೆ ನೀಡಿ ವಿವಾದಕ್ಕೊಳಗಾದ ನಟಿ ಸಾಯಿಪಲ್ಲವಿ ಪರ ಸ್ಯಾಂಡಲ್‌ವುಡ್‌ ನಟಿ ರಮ್ಯಾ ನಿಂತಿದ್ದಾರೆ . ಈ ಕುರಿತು ಟ್ವೀಟ್‌ ನಟಿ ರಮ್ಯಾ, 'ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ನಟಿ ಸಾಯಿ ಪಲ್ಲವಿ ಹೇಳಿದ ಮಾತಿಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ರಮ್ಯಾ ಅವರು ಸಾಯಿ ಪಲ್ಲವಿಯ ಪರವಾಗಿ ನಿಂತಿದ್ದಾರೆ.

ಈ ಕುರಿತು ಟ್ವೀಟ್‌ ನಟಿ ರಮ್ಯಾ, 'ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ. ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ. ಸತ್ಯ ನುಡಿಯುವ ಧೈರ್ಯ ತೋರಿದ್ದಕ್ಕೆ ತಮ್ಮ ಪ್ರಶಂಸೆ ಇದೆ ಎಂಬರ್ಥದಲ್ಲಿ ಅವರು ಟ್ವೀಟ್​ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ 'ಒಳ್ಳೆಯ ಮನುಷ್ಯರಾಗಿರಿ', 'ನ್ಯಾಯದ ಪರವಾಗಿರಿ', 'ಇನ್ನೊಬ್ಬ ಮನುಷ್ಯನನ್ನು ನೋಯಿಸಬೇಡಿ', 'ನೀವು ನ್ಯಾಯಯುತವಾಗಿರುವಾಗ ಬಲ ಅಥವಾ ಎಡಪಂಥೀಯರು ಮುಖ್ಯವಲ್ಲ' ಎಂದು ಸಾಯಿಪಲ್ಲವಿ ಹೇಳಿದರು. ಯಾವುದೇ ವಿವೇಕಿ ಮತ್ತು ಸಭ್ಯ ಮನುಷ್ಯನು ತಿಳಿದುಕೊಳ್ಳಬೇಕಾದ ವಿಷಯವಿದು' ಎಂದಿದ್ದಾರೆ.

ಗುರುವಾರ ಸರಣಿ ಟ್ವೀಟ್‌ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ರಮ್ಯಾ, ‘ಸಾಯಿ ಪಲ್ಲವಿ ಅವರನ್ನು ಟ್ರೋಲ್‌ ಮಾಡುವುದು ಹಾಗೂ ಅವರಿಗೆ ಬೆದರಿಕೆಯೊಡ್ಡುವುದು ನಿಲ್ಲಬೇಕು. ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅಥವಾ ಮಹಿಳೆಯರಿಗೆ ಈ ಅಧಿಕಾರ ಇಲ್ಲ ಎಂಬುವುದು ಈ ವಿರೋಧದ ಅರ್ಥವೇ? ನಿಂದನೆ ಮಾಡದೇ ವಿಷಯವೊಂದರ ಕುರಿತು ವಿರೋಧ ವ್ಯಕ್ತಪಡಿಸಬಹುದು. ಪ್ರಸ್ತುತ ಯಾರಾದರೂ ‘ನೀವು ಒಳ್ಳೆಯ ಮನುಷ್ಯರಾಗಿ’ ಅಥವಾ ‘ದಯಾಳುವಾಗಿ’ ಎಂದರೆ ಅವರಿಗೆ ರಾಷ್ಟ್ರ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತದೆ. ಅದೇ ‘ಗೋಲಿ ಮಾರೊ’ ಎಂಬುವವರು ನಿಜವಾದ ನಾಯಕರಾಗುತ್ತಾರೆ. ನಾವೆಂಥ ಲೋಕದಲ್ಲಿ ಬದುಕುತ್ತಿದ್ದೇವೆ’ ಎಂದು ರಮ್ಯಾ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.