Ramya : ಆರ್ಕೆಸ್ಟ್ರಾ ಮೈಸೂರು ಟ್ರೈಲರ್ ನೋಡಿ ಎಂದು ಮೋದಿ ಬಳಿ ಮನವಿ ಮಾಡಿದ ರಮ್ಯಾ...! ಇಲ್ಲಿದೆ ವಿಡಿಯೋ

By Infoflick Correspondent

Updated:Thursday, June 23, 2022, 10:45[IST]

Ramya :  ಆರ್ಕೆಸ್ಟ್ರಾ ಮೈಸೂರು ಟ್ರೈಲರ್ ನೋಡಿ ಎಂದು ಮೋದಿ ಬಳಿ ಮನವಿ ಮಾಡಿದ ರಮ್ಯಾ...! ಇಲ್ಲಿದೆ ವಿಡಿಯೋ

ಸ್ಯಾಂಡಲ್ ವುಡ್ ನಟಿ ರಮ್ಯಾ ನರೇಂದ್ರ ಮೋದಿ ಅವರು ಮೈಸೂರಿಗೆ ಬರುವ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರುವ ಮೂಲಕ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿ ಇಟ್ಟುಕೊಂಡು ಕಥೆ ಮಾಡಿರುವ ನಟ ಸುನಿಲ್ ಅಭಿನಯದ ಟ್ರೈಲರ್ ಇದೀಗ ಮೋಡಿ ಮಾಡುವ ಮೂಲಕ ಸೂಚನೆ ನೀಡಿರುವುದು ಹೆಮ್ಮೆಯ ವಿಚಾರ. ನಿನ್ನೆಯಷ್ಟೇ ವಿಶ್ವ ಯೋಗ ದಿನ ನಡೆದಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಭೇಟಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಹೌದು ಬೇರೆ ಬೇರೆ ಕಾರ್ಯಕ್ರಮಗಳ ಕುರಿತಾಗಿ ನಮ್ಮ ಕರ್ನಾಟಕದ ಪ್ರವಾಸ ಕೈಗೊಂಡಿರುವ ಭಾರತದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸುನಿಲ್ ಅಭಿನಯ ಮಾಡಿರುವ ಆರ್ಕೆಸ್ಟ್ರ ಮೈಸೂರು ಚಿತ್ರದ ಟ್ರೈಲರ್ ವೀಕ್ಷಣೆ ಮಾಡುವಂತೆ ನಟಿ ರಮ್ಯಾ ಅವರು ಮನವಿ ಮಾಡಿರುವುದು ವಿಶೇಷ .ಜೊತೆಗೆ ಅಷ್ಟೇ ವಿಷಯ ಚರ್ಚೆ ಕೂಡ ಆಗಿದ್ದು, ಇನ್ನೊಂದು ಕಡೆ ಬಾರಿ ವೈರಲ್ ಆಗುತ್ತಿದೆ. ಟ್ವಿಟರ್ ಮೂಲಕ ಮೋದಿ ಅವರನ್ನು ಮೈಸೂರಿಗೆ ಸ್ವಾಗತ ಮಾಡಿದ ರಮ್ಯಾ ಅವರು ಈ ಮೂಲಕ ಕೆಲ ಸಲಹೆಗಳನ್ನು ಸಹ ಕೊಟ್ಟಿದ್ದಾರೆ. ಹೌದು ಅವುಗಳು ಈ ಕೆಳಗಿನಂತಿವೆ.    

ನಮ್ಮ ಮೈಸೂರಿಗೆ ಸುಸ್ವಾಗತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ನಿಮಗೆ ಸಮಯ ಇದ್ದಲ್ಲಿ ಮೈಸೂರಿನಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಹೀಗಿದೆ. ರಸ್ತೆಗಳನ್ನು ಉದ್ಘಾಟನೆ ಮಾಡಿ, ನಮಗೆ ಖಂಡಿತ ಅದರ ಅವಶ್ಯಕತೆ ಹೆಚ್ಚಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಆಗಿರುವ ನಿತಿನ್ ಗಡ್ಕರಿ ಅವರಿಗೆ ನಮ್ಮ ಧನ್ಯವಾದಗಳು. ಹಾಗೇನೇ ಮೈಸೂರಿನಲ್ಲಿ ನಮ್ಮ ಪ್ರಸಿದ್ಧ ಮೈಲಾರಿ ಬೆಣ್ಣೆದೋಸೆ ಅನ್ನು ಒಮ್ಮೆ ಸವಿಯಿರಿ. ಇಂತಹ ಮೃದುವಾದ ದೋಸೆಯನ್ನು ನೀವು ತಿಂದಿರುವುದಕ್ಕೆ ಸಾಧ್ಯವಿರುವುದಿಲ್ಲವೆಂದು ಹಾಗಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ನಮ್ಮ ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಸುನಿಲ್ ಅವರ ಆರ್ಕೆಸ್ಟ್ರ ಮೈಸೂರು ಚಿತ್ರದ ಟ್ರೈಲರ್ ಅನ್ನು ಒಮ್ಮೆ ನೋಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ ನಟಿ ರಮ್ಯಾ....

ರಮ್ಯಾ ಅವರ ಈ ಮನವಿ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ರಮ್ಯಾ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆ, ಕೆಲವರು ಚಿತ್ರದ ಟ್ರೈಲರ್ ಅನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಿದ್ದಾರೆ. ಅಂತಹದು ಈ ಸಿನಿಮಾದ ಟ್ರೈಲರ್ ನಲ್ಲಿ ಏನಿರಬಹುದು ಎಂದು ಹೆಚ್ಚು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಹೌದು ಕನ್ನಡ ಚಿತ್ರರಂಗದ ಹೊಸ ಸಿನಿಮಾ ಈ ಮೈಸೂರು ಆರ್ಕೆಸ್ಟ್ರಾ ಆಗಿದ್ದು, ಈ ಚಿತ್ರಕ್ಕೆ ನಟ ಡಾಲಿ ಧನಂಜಯ್ ಅವರು ಹಣ ಹಾಕಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ ಪೂರ್ಣಚಂದ್ರ ಮೈಸೂರು, ದಿಲೀಪ್ ರಾಜ್ ಇನ್ನೂ ಕೂಡ ಕೆಲವರು ನಟನೆ ಮಾಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಸುನಿಲ್ ಎಂಬ ಹೊಸ ನಿರ್ದೇಶಕ...