ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ಗಾರ್ಗಿಗಾಗಿ ಕನ್ನಡಕ್ಕೆ ತಮ್ಮದೇ ಆದ ಸಾಲುಗಳನ್ನು ಡಬ್ ಮಾಡಿದ್ದಾರೆ

By Infoflick Correspondent

Updated:Wednesday, May 11, 2022, 07:41[IST]

ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ಗಾರ್ಗಿಗಾಗಿ ಕನ್ನಡಕ್ಕೆ ತಮ್ಮದೇ ಆದ ಸಾಲುಗಳನ್ನು ಡಬ್ ಮಾಡಿದ್ದಾರೆ

ಸಹಜ ಸೌಂದರ್ಯ ಹಾಗೂ ಸಹಜ ನಟನೆಯ ಮೂಲಕವೇ ಜನಮಾನಸವನ್ನು ಗೆದ್ದಿರುವ ಸಾಯಿ ಪಲ್ಲವಿ ಎಲ್ಲರ ನೆಚ್ಚಿ ನಟಿ. ಇಂದು ಹುಟ್ಟುಹಬ್ಬದ ಹಿನ್ನೆಲೆ ಸಾಯಿ ಪಲ್ಲವಿ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಜನ್ಮದಿನದಂದು ಸಾಯಿ ಪಲ್ಲವಿ ಅವರು ಅಭಿಮಾನಿಗಳಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ.? ಕೇಳಿದರೆ ಎಲ್ಲರೂ ಖುಷಿ ಪಡುತ್ತೀರಾ.  

ಸಾಯಿ ಪಲ್ಲವಿ ಅವರು ಸದ್ಯ ಮುಂಬರುವ ಗಾರ್ಗಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟುದಿನ ಈ ಚಿತ್ರದ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಕೂಡ ನೀಡಿರಲಿಲ್ಲ. ಸದ್ದಿಲ್ಲದೆ ಈ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಅನ್ನು ಕೂಡ ಮುಗಿಸಿದ್ದಾರೆ. ಗಾರ್ಗಿ ಎಂದರೆ ಪುರಾಣ ಕಾಲದಲ್ಲಿ ಬರುವ ದಿಟ್ಟ ಮಹಿಳೆ ವಿದ್ವಾಂಸೆ. ಈ ಸಿನಿಮಾ ಕಥೆಯನ್ನು ಗೌತಮ್ ಚಂದ್ರನ್ ಅವರು ಬರೆದು ನಿರ್ದೇಶನ ಮಾಡಿದ್ದಾರೆ. ಆದರೆ ಈ ಚಿತ್ರದ ಬಗ್ಗೆ ಇದುವರೆಗೂ ಯಾರೂ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಗಾರ್ಗಿ ಚಿತ್ರ ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ಇನ್ನು ಇದೀಗ ಈ ಚಿತ್ರದ ಬಗ್ಗೆ ಮೊದಲ ಬಾರಿಗೆ ಹೇಳಿಕೊಂಡಿರುವ ಸಾಯಿ ಪಲ್ಲವಿ ಅವರು, ಕನ್ನಡಿಗರಿಗೆ ಉಡುಗೊರೆ ಜೊತೆಗೆ ಶಾಕ್ ಕೂಡ ಕೊಟ್ಟಿದ್ದಾರೆ. ಚಿತ್ರದ ಮೆಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಅವರೇ ಹಂಚಿಕೊಂಡಿದ್ದಾರೆ. ಅಲ್ಲದೇ, ಮೂರು ಭಾಷೆಗಳಲ್ಲೂ ಸಾಯಿ ಪಲ್ಲವಿ ಅವರೇ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ ಭಾಷೆ ಬರದಿದ್ದರೂ ಕನ್ನಡ ಕಲಿತು ಡಬ್ಬಿಂಗ್ ಮಾಡಿದ್ದಾರೆ. ಪ್ರತಿಯೊಂದು ಪದವನ್ನು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಡಬ್ಬಿಂಗ್ ಮಾಡಿದ್ದಾರೆಎ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.