ಕೆಜಿಎಫ್ 3 ಚಿತ್ರಕ್ಕೆ ನಟಿ ಶ್ರೀನಿಧಿ ಶೆಟ್ಟಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?
Updated:Friday, June 3, 2022, 14:44[IST]

ಕನ್ನಡದ ಕೆಜಿಎಫ್ ಚಿತ್ರ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಹೊರದೇಶದಲ್ಲೂ ಕೆಜಿಎಫ್ ಚಿತ್ರ ಸಕತ್ತಾಗಿಯೇ ಸದ್ದು ಮಾಡಿದೆ. ಚಿತ್ರದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಸಕತ್ತಾಗಿ ಅಭಿನಯ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಹಾಗೇನೆ ಇವರ ಅಭಿನಯಕ್ಕೂ ಸಹ ಫಿದಾ ಆಗಿ ಹೆಚ್ಚು ಅಭಿಮಾನಿಗಳು ಇವರಿಗೆ ಹಾಗೂ ಇವರ ನಟನೆಗೆ ಸೈ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರ ಮಾದಕ ಫೋಟೋಗಳು ವೈರಲ್ ಆಗಿವೆ.
ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಈಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದಾರೆ. ಪರಭಾಷೆಗಳಿಂದಲೂ ಶ್ರೀನಿಧಿ ಶೆಟ್ಟಿಗೆ ಆಫರ್ ಗಳು ಬರುತ್ತಿವೆ. ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀನಿಧಿ ಶೆಟ್ಟಿ, ಓದುವಾಗಲೇ ಮಾಡೆಲಿಂಗ್ ಮಾಡುತ್ತಿದ್ದರು. ಯಶ್ ಅವರ ಜೊತೆ ಅಭಿನಯಿಸಲು ಈಗಾಗಲೇ ಏಳು ಸಿನಿಮಾಗಳ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ.
7 ಸ್ಕ್ರೀನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಿಸುತ್ತಿರುವ ಕೋಬ್ರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆಗಸ್ಟ್ 11ರಂದು 'ಕೋಬ್ರಾ' ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಇನ್ನು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಇನ್ನು ಇದೀಗ ಕೆಜಿಎಫ್ ಚಾಪ್ಟರ್ 3 ಚಿತ್ರದಲ್ಲೂ ಶ್ರೀನಿಧಿ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿ ಅವರು ಕೇಳಿರುವ ಸಂಭಾವನೆ ಎಷ್ಟು ಗೊತ್ತಾ..? ಕೇಳಿದರೆ ನೀವೂ ಕೂಡ ಶಾಕ್ ಆಗುತ್ತಿರಾ. ಬರೋಬ್ಬರಿ 2ಕೋಟಿ ರೂಪಾಯಿಯನ್ನು ಶ್ರೀನಿಧಿ ಶೆಟ್ಟಿ ಅವರು ಕೇಳಿದ್ದಾರೆ. ಮೂಲಗಳ ಪ್ರಕಾರ, ಇದಕ್ಕೆ ಚಿತ್ರತಂಡ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.