ವೈದ್ಯೆಯ ಎಡವಟ್ಟಿನಿಂದ ಕನ್ನಡದ ಯುವ ನಟಿಯ ಮುಖ ವಿಕಾರ..! ಅಸಲಿಗೆ ಆಗಿರೋದೇನು ಗೊತ್ತಾ..?

By Infoflick Correspondent

Updated:Friday, June 17, 2022, 22:43[IST]

ವೈದ್ಯೆಯ ಎಡವಟ್ಟಿನಿಂದ ಕನ್ನಡದ ಯುವ ನಟಿಯ ಮುಖ ವಿಕಾರ..! ಅಸಲಿಗೆ ಆಗಿರೋದೇನು ಗೊತ್ತಾ..?

ಕನ್ನಡ ಚಿತ್ರರಂಗದ ಯುವನಟಿ ಯಾರೋ ಮಾಡಿದ ತಪ್ಪಿಗೆ ಇದೀಗ ಒಂದು ಪೇಚಿಗೆ ಸಿಲುಕಿದ್ದಾರೆ. ಹೌದು ಸ್ಯಾಂಡಲ್ವುಡ್ ನಟಿಯ ಹೆಸರು ಸ್ವಾತಿ ಎನ್ನಲಾಗಿದ್ದು, ಕನ್ನಡ ಕಿರುತೆರೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಯುವನಟಿ ಸ್ವಾತಿ ಅವರು. ಹೌದು ನಟಿ ಸ್ವಾತಿ ಅವರು ಇತ್ತೀಚೆಗೆ ಜೆಪಿ ನಗರದ ಒರಿಕ್ಸ್ ಡೆಂಟಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ರೂಟ್ ಕ್ಯಾನಲ್ ಚಿಕಿತ್ಸೆಗೆಂದು ತೆರಳಿದ್ದರು. ಆಗ ಚಿಕಿತ್ಸೆ ಪಡೆದ ಎರಡು ದಿನದಲ್ಲಿ ನಟಿಯ ಮುಖದಲ್ಲಿ ಭಾರಿ ಬದಲಾವಣೆಯಾಗಿದೆ. ತದನಂತರ ಇದಕ್ಕೆ ಭಯಬಿದ್ದು ಮುಖವು ಊತವಾದ ಕಾರಣಕ್ಕೆ ವೈದ್ಯೆಯನ್ನು ಸಂಪರ್ಕಿಸಿದರೆ ಎರಡು ದಿನದಲ್ಲಿ ನಿಮ್ಮ ಮುಖದ ಊತ ಕಡಿಮೆಯಾಗುವುದು ಎಂದಿದ್ದರಂತೆ.    

ಆದರೆ ಚಿಕಿತ್ಸೆ ಪಡೆದು ಇಪ್ಪತ್ತು ದಿನಗಳಾದರೂ ನಟಿಯ ಮುಖದಲ್ಲಿ ಊತ ಕಡಿಮೆ ಆಗಿಲ್ಲವಂತೆ. ಹೌದು ನಟಿ ಸ್ವಾತಿ ರೂಟ್ ಕ್ಯಾನಲ್ ಚಿಕಿತ್ಸೆಗೆ ತೆರಳಿದಾಗ ಒರಿಕ್ಸ್ ಡೆಂಟಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವೈದ್ಯೇ ಚಿಕಿತ್ಸೆಗೂ ಮುನ್ನ ಹಲ್ಲಿಗೆ ಅನಸ್ತೇಶಿಯಾ ಟ್ರೀಟ್ಮೆಂಟ್ ಕೊಡಬೇಕಿತ್ತಂತೆ. ಆದರೆ ಅದರ ಬದಲಿಗೆ ಸಾಲಿಸೈಲಿಕ್ ಆಸಿಡ್ ಬಳಸಿದ್ದಾರೆ ಹಾಗಾಗಿಯೇ ನನ್ನ ಮುಖದಲ್ಲಿ ಊತ ಬಂದಿದೆ ಎಂದು ನಟಿ ಸ್ವಾತಿ ವೈದ್ಯೇ ವಿರುದ್ಧ ಇದೀಗ ಆರೋಪ ಮಾಡಿದ್ದಾರೆ. ಹೀಗೆ ಊತವೂ ಕಡಿಮೆಯಾಗುವುದು, ಆಗುವುದು ಎಂದು ಹೇಳುತ್ತ ಈಗ ಇಪ್ಪತ್ತು ದಿನಗಳಾಗಿವೆ. ಆ ವೈದ್ಯ ಮುಂಬೈನಲ್ಲಿ ಇದ್ದೇನೆ ಕಡಿಮೆಯಾಗುತ್ತದೆ ಎಂದಿದ್ದರಂತೆ. ಆದರೆ ಕೊಂಚವೂ ನಟಿಯ ಮುಖದ ಊತ ಕಡಿಮೆಯಾಗಿಲ್ಲ ಎಂದು ಇದೀಗ ನಟಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ನಟಿ ಮುಖದಲ್ಲಿ ಬದಲಾವಣೆ ಕಂಡ ಬಳಿಕ ಸ್ವಲ್ಪವೂ ಕಡಿಮೆಯಾಗದ ಕಾರಣಕ್ಕೆ ಇನ್ನೊಂದು ಆಸ್ಪತ್ರೆಗೆ ಹೋಗಿ ವಿಚಾರ ಮಾಡಿದ ಮೇಲೆ ಜೆಪಿ ನಗರದ ಒರಿಕ್ಸ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವೈದ್ಯೆಯ ಮುಖವಾಡ ಬಯಲಾಗಿದೆ.

ನಟಿ ಇದನ್ನ ಅವರಿಗೆ ಪ್ರಶ್ನಿಸಿದಾಗ ನಿಮ್ಮ ತ್ವಚೆ ತುಂಬಾ ಸೂಕ್ಷ್ಮ ಆಗಿದ್ದು, ಆ ರೀತಿ ಆಗಿದೆ, ನಮ್ಮದೇನೂ ತಪ್ಪಿಲ್ಲ ಎಂದು ವೈದ್ಯ ಜಾರಿಕೊಂಡಿದ್ದಾರಂತೆ. ಇದಕ್ಕೆ ನ್ಯಾಯವೂ ಸಿಗಲೇಬೇಕು ಎಂದು ಇದೀಗ ನಟಿ ಸ್ವಾತಿ ತಮ್ಮ ಆರೋಪ ಮಂಡಿಸಿದ್ದು ಇಂತಹ ವೈದ್ಯರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ವೈದ್ಯೆಯ ಎಡವಟ್ಟಿನ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಹೇಳಿ. ಹಾಗೇನೇ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...