ಮತ್ತೆ ವೀಡಿಯೋ ಮಾಡಿದ ನಟಿ ವಿಜಯ್ ಲಕ್ಷ್ಮೀ: ಮನ ಬಂದಂತೆ ಮಾತನಾಡಿದ ನಟಿ
Updated:Thursday, April 21, 2022, 20:52[IST]

ಕಳೆದ ಒಂದು ವರ್ಷದಿಂದ ನಟಿ ವಿಜಯ್ ಲಕ್ಷ್ಮೀ ಪ್ರತಿಯೊಬ್ಬರ ಮೇಲೂ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಈಗ ಮತ್ತೊಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಜಯ್ ಲಕ್ಷ್ಮೀ ಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡೋಣ ಎಂದು ಹಲವರು ಯೋಗೇಶ್ ಹಾಗೂ ವಿಘ್ನೇಶ್ ಎಂಬುವರ ಖಾತೆಗೆ ಹಣ ಹಾಕಿದ್ದರು. ಆದರೆ ಆ ಹಣವನ್ನು ವಿಜಯ್ ಲಕ್ಷ್ಮೀ ಮುಟ್ಟೊಲ್ಲ ಎಂದಿದ್ದರು. ಅಲ್ಲದೇ, ಬೆಂಗಳೂರು ಬಿಟ್ಟು ಅಕ್ಕನೊಂದಿಗೆ ಹೋಗೋದಾಗು ಮಾತನಾಡಿದ್ದರು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಎಲ್ಲಾ ಮುಗೀತು. ವಿಜಯ್ ಲಕ್ಷ್ಮೀ ಅವರಿಗೆ ಸ್ಯಾಂಡಲ್ ವುಡ್ ನಿಂದ ನೆಲೆಯಾಯ್ತು. ಇನ್ನು ಎಂದಿಗೂ ಅವರು ವೀಡಿಯೋ ಮಾಡೋದಿಲ್ಲ ಎಂದು ಕೊಂಡಿದ್ವಿ. ಆದರೆ, ಇದೀಗ ಮತ್ತೆ ವೀಡಿಯೋ ಮಾಡಿ ಜನರಿಗೆ ಬೇಸರ ಮೂಡಿಸಿದ್ದಾರೆ. ವಿಜಯ್ ಲಕ್ಷ್ಮೀ ಅವರ ತಾಯಿ ತೀರಿಕೊಂಡಾಗ ವೀಡಿಯೋ ಮಾಡಿ ಅಂತ್ಯ ಸಂಸ್ಕಾರಕ್ಕಾಗಿ ಸಹಾಯ ಕೇಳಿದ್ದರು. ಈ ವೇಳೆ, ಜನಸ್ನೇಹಿ ಆಶ್ರಮ ನಡೆಸುತ್ತಿರುವ ಯೋಗೇಶ್ ಎಂಬುವರು ಮುಂದೆ ಬಂದು ವಿಜಯ್ ಲಕ್ಷ್ಮೀ ಅವರ ತಾಯಿಯ ಅಂತ್ಯಸಂಸ್ಕಾರ ನಡೆಸಿದ್ದರು. ಅಷ್ಟೇ ಅಲ್ಲದೇ, ವಿಜಯ್ ಲಕ್ಷ್ಮೀ ಹಾಗೂ ಅವರ ಅಕ್ಕ ಉಷಾಗೆ ಆಸರೆ ಕೊಟ್ಟಿದ್ದರು.
ಬಳಿಕ ವೀಡಿಯೋ ಮಾಡಿ ಹಣ ಸಹಾಯಕ್ಕಾಗಿ ಜನರಲ್ಲಿ ಯೋಗೇಶ್ ಮನವಿ ಮಾಡಿದ್ದರು. ಆಗ ಜನ ಮರುಗಿ ಮೂರು ಲಕ್ಷದ ಒಂಬ್ಬತ್ತು ಸಾವಿರ ಹಣವನ್ನು ಯೋಗೇಶ್ ಅವರ ಖಾತೆಗೆ ಜಮಾಯಿಸಿದ್ದರು. ಅದೇನಾಯ್ತೋ ಚೆನ್ನಾಗೇ ಇದ್ದ ಇವರಿಬ್ಬರ ನಡುವೆ ಬಿರುಕು ಮೂಡಿ ಯೋಗೇಶ್ ಹಾಗೂ ವಿಜಯ್ ಲಕ್ಷ್ಮೀ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಬಂದಿದ್ದರು. ಅಲ್ಲಿ ವಿಜಯ್ ಲಕ್ಷ್ಮೀ ಯೋಗೇಶ್ ಮೇಲೆ ಕೆಟ್ಟ ಕೆಟ್ಟದಾಗಿ ಮಾತನಾಡಿ ಹಣ ಕೊಡುವಂತೆ ಕೇಳಿದ್ದರು. ಆಗ ಯೋಗೇಶ್ ಹಣ ಕೊಡುವುದಾಗಿ ಹೇಳಿ ಹೋಗಿದ್ದರು. ಗಾಂಧಿ ಜಯಂತಿ, ಭಾನುವಾರ ಇದ್ದಿದ್ದರಿಂದ ಹಣ ಕೊಡಲು ತಡವಾಯಿತು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿ ಹಣ ಕೊಟ್ಟಿದ್ದರು ಯೋಗೇಶ್.
ಆದರೆ, ಇದೀಗ ವಿಜಯ್ ಲಕ್ಷ್ಮೀ ಮತ್ತೆ ವೀಡಿಯೋ ಮಾಡಿ ಯೋಗೇಶ್ ಮೇಲೆ ಕೂಗಾಡಿದ್ದಾರೆ. ಇದನ್ನು ನೋಡಿದ ಜನ ವಿಜಯ್ ಲಕ್ಷ್ಮೀ ಗೆ ಬೈಯ್ಯಲು ಶುರು ಮಾಡಿದ್ದಾರೆ. ನಾನ್ಯಾಕೆ ಅವನ ಆಶ್ರಮಕ್ಕೆ ಹೋಗಬೇಕು. ಅದು ಇದು ಅಂತ ಕೆಟ್ಟ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಮಾಧ್ಯಮಗಳು ನಾನು ಹೀಗೆ ಮಾತನಾಡಿ ವೀಡಿಯೋ ಮಾಡುವುದನ್ನು ಮಾತ್ರ ಸುದ್ದಿ ಮಾಡುತ್ತದೆ. ಆದರೆ, ನಾನು ಅಣ್ಣವರ ಹಾಡು ಹಾಡಿದ್ದರ ಬಗ್ಗೆ ಒಬ್ಬರೂ ಸುದ್ದಿ ಮಾಡಿಲ್ಲ ಎಂದೆಲ್ಲಾ ಹೇಳಿದ್ದಾರೆ. ಪದೇ ಪದೇ ಹೀಗೆ ವೀಡಿಯೋ ಮಾಡುತ್ತಿರಯವ ವಿಜಯ್ ಲಕ್ಷ್ಮೀ ಬಗ್ಗೆ ಜನ ಇವಳಿಗೆ ಟ್ರೀಟ್ ಮೆಂಟ್ ಕೊಡಿಸಬೇಕು. ಅವರ ಕಷ್ಟಕ್ಕೆ ಮರುಗಿ ಜನ ಕೊಟ್ಟ ಹಣವನ್ನು ದುರಹಂಕಾರದಿಂದ ಬೇಡ ಎನ್ನುತ್ತಿದ್ದಾರೆ. ವಿಜಯ್ ಲಕ್ಷ್ಮೀಗೆ ತಲೆ ಕೆಟ್ಟಿದೆ ಎಂದೆಲ್ಲಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. (video credit : sb creations )