Aditi Prabhudeva : ಸಿಂಪಲ್ ಹುಡುಗಿ ಅದಿತಿ ಪ್ರಭುದೇವ ವಯನಾಡು ಟ್ರಿಪ್‌ ಹೇಗಿತ್ತು ಗೊತ್ತಾ..?

By Infoflick Correspondent

Updated:Thursday, July 7, 2022, 11:40[IST]

Aditi Prabhudeva : ಸಿಂಪಲ್ ಹುಡುಗಿ ಅದಿತಿ ಪ್ರಭುದೇವ ವಯನಾಡು ಟ್ರಿಪ್‌ ಹೇಗಿತ್ತು ಗೊತ್ತಾ..?

ಹೀರೋಯಿನ್ ಎಂದರೆ ಇಷ್ಟು ಸಿಂಪಲ್ ಆಗೂ ಬದುಕಬಹುದು ಎಂದು ತೋರಿಸಿಕೊಟ್ಟವರು ಅದಿತಿ ಪ್ರಭುದೇವ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ದಾವಣಗೆರೆಯ ತನ್ನ ಅಜ್ಜಿ ಮನೆಯಲ್ಲಿ ಸಾಮಾನ್ಯಳಂತೆ ಜೀವನ ನಡೆಸಿದ್ದರು. ಇದರ ವೀಡಿಯೋ ಮಾಡಿ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲೂ ಅಪ್ ಲೋಡ್ ಮಾಡಿದ್ದರು. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಹೀರೋಯಿನ್ ಒಬ್ಬರು ಸರಳವಾಗಿ ತಮ್ಮ ಹಳ್ಳಿಯ ಜೀವನ ಶೈಲಿ ಬಗ್ಗೆ ಜನಸಾಮಾನ್ಯರಿಗೆ ಪರಿಚಯಿಸಿದ್ದರು.

ಇನ್ನು ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಪಡ್ಡೆ ಹುಡುಗರಿಗೆ ನಿರಾಸೆ ಮೂಡಿಸಿದ್ದರು. ಯಶಸ್‌ ಎಂಬ ಹುಡುಗನ ಜೊತೆಗೆ ಎಂಗೇಜ್‌ ಮೆಂಟ್‌ ಆದ ಅದಿತಿ ಪ್ರಭುದೇವ ಅವರು ತಮ್ಮ ಹುಡುಗನನ್ನು ಪರಿಚಯಿಸಿದ್ದರು. ಈ ಸುದ್ದಿ ಕೇಳಿದ ಅಭಿಮಾನಿಗಳು ಖುಷಿಪಟ್ಟಿದ್ದರೆ, ಅದಿತಿಯನ್ನು ಮನದರಸಿ ಎಂದುಕೊಂಡಿದ್ದ ಪಡ್ಡೆ ಹುಡುಗರು ಬೇಸರಪಟ್ಟುಕೊಂಡಿದ್ದಾರೆ. ಇನ್ನು ಅದಿತಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಚಿತ್ರೀಕರಣ ಮುಗಿದ ಮೇಲೆ ಮದುವೆಯಾಗಬಹುದು ಎಂದು ಹೇಳಲಾಗುತ್ತಿದೆ.  

ಇನ್ನು ತಮ್ಮ ಯೂಟ್ಯೂಬ್‌ ವ್ಲಾಗ್‌ ನಲ್ಲಿ ಆಗಾಗ ಕೆಲ ವೀಡಿಯೋಗಳನ್ನು ಮಾಡಿ ಹಾಕುವ ಅದಿತಿ ಅವರು, ಟಿಪ್ಸ್‌ ಕೊಡುತ್ತಾರೆ. ತಮ್ಮ ದಿನಚರಿಯನ್ನು ತಿಳಿಸುತ್ತಾರೆ. ಎಲ್ಲಾದರೂ ಹೊರಗಡೆ ಟ್ರಿಪ್‌ ಹೋದರೆ ಅಲ್ಲಿಯ ವೀಡಿಯೋ ಮಾಡಿ ಅಪ್‌ ಲೋಡ್‌ ಮಾಡುತ್ತಾರೆ. ಇನ್ನು ಸಿಂಪಲ್‌ ಜೀವನ ನಡೆಸುತ್ತಿರಯವ ಅದಿತಿ ಅವರು ಇತ್ತೀಚೆಗಷ್ಟೇ ಮೊದಲ ಬಾರಿಗೆ ಕೇರಳಕ್ಕೆ ಹೋಗಿದ್ದಾರೆ. ಕೇರಳದ ವಯಾನಾಡಲ್ಲಿ ತಂಗಿದ್ದ ಅವರು, ಅಲ್ಲಿ ನ ಪರಿಸರವನ್ನು ಸೆರೆ ಹಿಡಿದಿದ್ದು, ಎಂಜಾಯ್‌ ಕೂಡ ಮಾಡಿದ್ದಾರೆ. ಇದೆಲ್ಲವನ್ನೂ ಅದಿತಿ ಅವರು ತಮ್ಮ ವ್ಲಾಗ್‌ ನಲ್ಲಿ ಹಂಚಿಕೊಂಡಿದ್ದಾರೆ.