Aditi Prabhudeva : ಪ್ರತಿ ದಿನದ ರೂಟೀನ್ ವಿಡೀಯೋ ಶೇರ್ ಮಾಡಿಕೊಂಡ ನಟಿ ಅಧಿತಿ ಪ್ರಭುದೇವ್ ;ಅಸಲಿಗೆ ಇದು ಬೇಕಿತ್ತಾ..?

By Infoflick Correspondent

Updated:Tuesday, July 19, 2022, 18:39[IST]

Aditi Prabhudeva : ಪ್ರತಿ ದಿನದ ರೂಟೀನ್ ವಿಡೀಯೋ ಶೇರ್ ಮಾಡಿಕೊಂಡ ನಟಿ ಅಧಿತಿ ಪ್ರಭುದೇವ್ ;ಅಸಲಿಗೆ ಇದು ಬೇಕಿತ್ತಾ..?

ಮುದ್ದುಮುಖದ ಚೆಲುವೆ, ಅಂದದ ಗೊಂಬೆ ಕ್ಯೂಟ್ ಬೆಡಗಿ ಹಾಗೂ ನಾಗಿಣಿ ಸೀರಿಯಲ್ ಮೂಲಕ ಅಪಾರ ಅಭಿಮಾನಿ ಬಳಗ ಗಳಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟಿ ಅದಿತಿ ಪ್ರಭುದೇವ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು ಹೆಚ್ಚು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗೆ ಇತ್ತೀಚಿಗಷ್ಟೇ ಯುವ ನಟ ಶ್ರೀನಿ ಅವರ ಜೊತೆಗೂ ಸಹ ತೆರೆ ಹಂಚಿಕೊಂಡು ಅಭಿನಯಿಸಿ ಸೈ ಎನಿಸಿಕೊಂಡರು. ನಟ ಚಿರಂಜೀವಿ ಸರ್ಜಾ ಅವರೊಟ್ಟಿಗೂ ಸಿನಿಮಾ ಮಾಡಿದ್ದಾರೆ. ನಟ ಸತೀಶ್ ಜೊತೆಗೂ ಕೂಡ ಸಿನಿಮಾ ಮಾಡಿ ಗೆದ್ದು ಬಿಗಿದ್ದಾರೆ ಪ್ರಭುದೇವ್. ಹೌದು, ನಟಿ ಅಧಿತಿ ಪ್ರಭುದೇವ್ ಅವರು ಹೆಚ್ಚು ಬೇಡಿಕೆ ನಟಿ ಆಗಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.

ಈಗ ಕೆಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದು ನಟಿ ಅಧಿತಿ ಅವರು ಸಾಮಾಜಿಕ ಜಾಲತಾಣದಲ್ಲೂ ಅವರ ಪ್ರೀತಿಯ ಅಭಿಮಾನಿಗಳಿಗೆ ಕೆಲ ವಿಡಿಯೋ ಮತ್ತು ಫೋಟೋಗಳ ಮೂಲಕ ಕಾಣಿಸುತ್ತಾರೆ. ಅನುಶ್ರೀ ಅವರ ಜೊತೆ ಮಾತುಕತೆ ನಡೆಸಿದ ಅದಿತಿ ಪ್ರಭುದೇವ್ ಅವರು ಹೇಳಿದ್ದ ಅದೊಂದು ಸಾಲಿನ ಅಂದಿನ ವಿಡಿಯೋ ಹೆಚ್ಚು ವೈರಲ್ ಆಗಿತ್ತು.  

ಹೀಗೆ ಒಂದಲ್ಲ ಒಂದು ವಿಚಾರವಾಗಿ ನಟಿ ಅದಿತಿ ಪ್ರಭುದೇವವರು ಸದಾ ಆಕ್ಟಿವ್ ಆಗಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ. ಇದೀಗ ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ. ಅದು ಶೂಟಿಂಗ್ ಹಿನ್ನೆಲೆ ಕುರಿತು. ಅಲ್ಲಿನ ದಿನದ ರುಟಿನ್ ಹೇಗಿದೆ, ಅವರಿಗೆ ಕೊಟ್ಟಿರುವ ಫ್ಲ್ಯಾಟ್ ಹೇಗಿದೆ? ಅಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ, ಶೂಟಿಂಗ್ ಹೇಗೆ ಎಲ್ಲಾ ಇದೀಗ ಈ ವಿಡೀಯೋ ಮೂಲಕ ತೋರಿಸಿದ್ದಾರೆ..

ನಟಿ ಅದಿತಿ ಪ್ರಭುದೇವ್ ಅವರು ಅವರು ನಿಜ ಜೀವನದಲ್ಲಿ ಪ್ರತಿದಿನ ಚಾಚು ತಪ್ಪದೆ ಮಾಡುವ ನಾಲ್ಕು ಕೆಲಸಗಳನ್ನು ಸಹ ಹೇಳಿದ್ದಾರೆ. ಆ ನಾಲ್ಕು ಟಿಪ್ ಗಳ ಬಗ್ಗೆಯೂ ವಿವರಣೆ ಕೊಟ್ಟಿದ್ದಾರೆ. ಈಗ ಚೆನ್ನೈನಲ್ಲಿರುವ ನಟಿ ಅದಿತಿ ಪ್ರತಿ ದಿನದ ರೂಟೀನ್ ನಲ್ಲಿ ಯಾವ ರೀತಿ ಇರುತ್ತಾರೆ ಗೊತ್ತಾ..? ಹೌದು ಅವುಗಳನ್ನು ನೀವು ಕೂಡ ತಿಳಿಯಬೇಕು. ಅವುಗಳು ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರ ಇರಬಹುದು. ಅಥವಾ ನಿಮ್ಮ ಜೀವನಕ್ಕೂ ಕೂಡ ಅಳವಡಿಸಿಕೊಳ್ಳುವಂತೆ ಇದ್ದಾವೆ. ನಿಮಗೇ ಹೇಗೆ ಬೇಕೋಹಾಗೆ ತೆಗೆದುಕೊಳ್ಳಿ ಎಂದು ಅದಿತಿ ಶೇರ್ ಮಾಡಿರುವ ಆ ವಿಡಿಯೋ ಇಲ್ಲಿದೆ ನೋಡಿ. ಈ ವಿಡಿಯೋ ಲೈಫ್ ಇಸ್ ಬ್ಯೂಟಿಫುಲ್ ಎಂದು ಕ್ಯಾಪ್ಶನ್ ನೀಡಿ ಶೇರ್ ಮಾಡಿಕೊಂಡ ಪ್ರಭುದೇವ್ ವಿಡಿಯೋ ಬಾರಿ ವೈರಲ್ ಸಹ ಆಗುತ್ತಿದೆ. ನೋಡಿ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ. ಧನ್ಯವಾದಗಳು...