Aditi Prabhudeva : ಸಿಕ್ಕಾಪಟ್ಟೆ ಹಣ ಕೊಟ್ಟು ಅದಿತಿ ಪ್ರಭುದೇವ ಖರಿದಿಸಿದ್ದು ಏನು ಗೊತ್ತೆ ಕೇಳಿದ ಜನ ಶಾಕ್

By Infoflick Correspondent

Updated:Wednesday, July 27, 2022, 17:08[IST]

Aditi Prabhudeva : ಸಿಕ್ಕಾಪಟ್ಟೆ ಹಣ ಕೊಟ್ಟು ಅದಿತಿ ಪ್ರಭುದೇವ ಖರಿದಿಸಿದ್ದು ಏನು ಗೊತ್ತೆ ಕೇಳಿದ ಜನ ಶಾಕ್

ಹತ್ತು ಹಲವು ಸಿನಿಮಾಗಳಲ್ಲಿ ನಟಿ ಅದಿತಿ ಪ್ರಭುದೇವ ಅವರು ಬ್ಯುಸಿ ಆಗಿದ್ದಾರೆ. ಆದರೆ ಅದಿತಿ ಅವರಿಗೆ ಗಿಡ ತೋಟ ಎಂದರೆ ಅಪಾರ ಇಷ್ಟ ಹಾಗಾಗಿ ಕೆಲ ತಿಂಗಳ ಹಿಂದೆ ಎಲ್ಲೋ ಫಾರಿನ್​ನಲ್ಲಿ ಕುಳಿತು ಕೆಲಸ ಮಾಡುವವರು ನನಗೆ ಇಷ್ಟ ಆಗುವುದಿಲ್ಲ. ತೋಟ, ಕೃಷಿ, ಹಸು ಬಗ್ಗೆ ಆಸಕ್ತಿ ಇರುವವಳು ನಾನು. ಅಂಥ ಹುಡುಗನನ್ನು ಮನೆಯವರು ಕೂಡ ಒಪ್ಪಬೇಕಿತ್ತು. ಆ ವಿಚಾರದಲ್ಲಿ ಒತ್ತಡ ಇತ್ತು. ಯಶಸ್​ ಕೂಡ ನನ್ನ ರೀತಿಯ ವ್ಯಕ್ತಿ. ಕಾಫಿ ತೋಟ, ಮರ-ಗಿಡಗಳ ಬಗ್ಗೆ ಅವರಿಗೆ ಇಂಟರೆಸ್ಟ್​ ಇದೆ. ಎಂದಿದ್ದರು.

ಇದೀಗ ಗಿಡ ತೋಟ ಹಸಿರು ಮೇಲೆ ಅದಿತಿಗೆ ಪ್ರೀತಿ ಇರೋದನ್ನ ಮಗದೊಮ್ಮೆ ಸಾಬೀತು ಪಡಿಸಿದ್ದಾರೆ. ಅದಿತಿ ಶಾಪಿಂಗ್ ಮಾಡಿದ ವಸ್ತುವೊಂದು ಹಾಗು ಅದರ ಬೆಲೆ ತಿಳಿದು ಜನ ಶಾಕ್ ಆಗಿದ್ದಾರೆ. ಅದಿತಿ ಏನನ್ನು ಖರಿದಿಸಿದ್ದಾರೆ ಅದರ ಬೆಲೆ ಎಷ್ಟು ಏನದರ ವಿಶೇಷತೆ ಇಲ್ಲಿದೆ ನೋಡಿ   

ಕನ್ನಡ ಚಿತ್ರರಂಗದ ಮುದ್ದು ಮುಖದ ನಟಿ ಅದಿತಿ ಪ್ರಭುದೇವ ಕೂಡ IKEAಗೆ ಭೇಟಿ ಕೊಟ್ಟು ಶಾಪಿಂಗ್ ಮಾಡಿರುವ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತುಂಬಾ ದಿನಗಳಿಂದ ನಾನು ಐಕಿಯಾಗೆ ಹೋಗಬೇಕು ಅಂದುಕೊಂಡಿದ್ದೆ ಕೊನೆಗೂ ಇವತ್ತು ಸಮಯ ಆಯ್ತು. ನಾನು ಐಕಿಯಾದಲ್ಲಿ ಕೆಲವೊಂದು ವಿಚಾರಗಳನ್ನು ಗಮನಿಸಿರುವೆ. ಫರ್ನಿಚರ್‌ಗಳು ಓಕೆ ಓಕೆ ಆಗಿದೆ. ಅಲ್ಲಿನ ಬಟ್ಟೆ ಟೆಕ್ಸಚರ್‌ ಚೆನ್ನಾಗಿದೆ. ಐಕಿಯಾ ತುಂಬಾ ದುಬಾರಿ ಅನಿಸಿತ್ತು. ಕೆಲವೊಂದು ದುಬಾರಿ ಇದ್ರೂ ಬೇಕು ಅನಿಸುತ್ತದೆ.' ಎಂದು ತಂದಿರುವ ವಸ್ತುಗಳನ್ನು ತೋರಿಸಿದ್ದಾರೆ.

ನನಗೆ ಮನೆ ಡೆಕೋರೇಟ್ ಮಾಡುವುದಕ್ಕೆ ಸೆಟಪ್ ಮಾಡುವುದಕ್ಕೆ ಕೆಲವೊಂದು ವಸ್ತುಗಳು ಬೇಕಾಗುತ್ತದೆ ಅದನ್ನ ನಾನು ತೆಗೆದುಕೊಂಡು ಬಂದಿದ್ದೀನಿ. ನಾವು ಸ್ವಲ್ಪ ಯೋಚನೆ ಮಾಡಿ ಖರೀದಿ ಮಾಡಿದೆ.  ಇವತ್ತು ಆ ಜಾಗಕ್ಕೆ ಹೋಗಿರುವುದಕ್ಕೆ ಖುಷಿ ಇದೆ.' ಎಂದಿದ್ದಾರೆ ಅದಿತಿ. ಪ್ಲಾಸ್ಟಿಕ್ ಹೂ, ಸ್ಟೀಲ್ ಪಾಟ್, ಮೂರ್ನಾಲ್ಕು ಸಣ್ಣ ಪುಟ್ಟ ಗಿಡಗಳು, ಹಾಸಿಗೆಗೆ ಹಾಸುವ ಬೆಡ್‌ಶೀಟ್‌, ನೇಲ್‌ ಸೆಟ್ ಬಾಕ್ಸ್‌ ಮತ್ತು ಅದನ್ನ ಡ್ರಿಲ್ ಮಾಡಲು ಡ್ರಿಲರ್‌ ಮಷಿನ್, ಮರದ ಬೌಲ್‌ಗಳು, ಸೀಲಿಂಗ್ ಕ್ಲಿಪ್, ಹಣ್ಣು ಇಡುವುದಕ್ಕೆ ಬೌಲ್, ಸೌಟು, ಬಾರ್ಬೆಕ್ಯೂ ಬ್ರಷ್, ಲಿಂಟ್ ರೋಲರ್‌, ಕೇಬಲ್ ವಯರ್‌ಗಳನ್ನು ಕಟ್ಟಿಗೆ ಕಟ್ಟಲು ಪ್ಲಾಸ್ಟಿಕ್ ಕೇಬಲ್ ಮತ್ತು ಎರಡು ಗಿಡಗಳು. ಇಷ್ಟೇಲ್ಲ ವಸ್ತುಗಳನ್ನು ಅದಿತಿ ಖರಿದಿಸಿದ್ದಾರೆ. 

ಎರಡು ಮೂರು ಗಿಡದ ಪಾಟ್‌ಗಳನ್ನು ಖರೀದಿಸಿರುವ ಅದಿತಿ ಹೆಚ್ಚಿಗೆ ಹಣ ಕೊಟ್ಟಿದ್ದಾರಂತೆ.  ಹೊರಗಡೆ 500 ರೂ.ಗೆ ಸಿಗುವ ಗಿಡಕ್ಕೆ 1990 ರೂ. ಕೊಟ್ಟಿದ್ದಾರೆ. 100ರೂ. ಕೊಡುವ ಗಿಡಕ್ಕೆ 500 ರೂ. ಕೊಟ್ಟಿದ್ದಾರೆ. ಐಷಾರಾಮಿ ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ಬದಲು ಲೋಕಲ್‌ ಅಂಗಡಿಗಳಲ್ಲಿ ಖರೀದಿ ಮಾಡಿ ಎಂದು ಅದಿತಿಗೆ ನೆಟ್ಟಿಗರಿಂದ ಕಿವಿಮಾತು ಬಂದಿದೆ.