ದರ್ಶನ್ ವಿರುದ್ಧಫಿಲಂ ಚೇಂಬರ್ ಗೆ ದೂರು: ಐದು ವರ್ಷ ಬ್ಯಾನ್ ಮಾಡುವಂತೆ ಒತ್ತಾಯ.. ಕಂಪ್ಲೇಂಟ್ ಕೊಟ್ಟಿದ್ಯಾರು ಗೊತ್ತಾ..??

Updated: Tuesday, July 20, 2021, 19:51 [IST]

    

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ಕಳೆದೊಂದು ವಾರದಿಂದ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇಂದ್ರಜಿತ್ ಲಂಕೇಶ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ದರ್ಶನ್ ಅವರು ಆಡಿದ ಮಾತು ನಾನಾ ತಿರುವುಗಳನ್ನು ಪಡೆದುಕೊಂಡಿದೆ. 

ಮಾಧ್ಯಮಗಳ ಮುಂದೆ ಮಾತನಾಡುವಾಗ, ಉಮಾಪತಿ ನನಗೆ ಪರಿಚಯ ಆಗಿದ್ದು ಮಿಸ್ಟರ್ ಜೋಗಿ ಪ್ರೇಮ್‌ರಿಂದ. ಉಮಾಪತಿ ಹಾಗೂ ಮಿಸ್ಟರ್ ಪ್ರೇಮ್ ನನ್ನ ಮನೆಗೆ ಬಂದರು. ಸಿನಿಮಾ ಬಗ್ಗೆ ನಾವು ಮೂರು ಜನ ಮಾತನಾಡಿದ್ವಿ. ಹೊರಗೆ ಬಂದ ತಕ್ಷಣ ಒಂದು ಮ್ಯಾಟರ್ ಬಂತು.. ತಾರಕ್ ಪ್ರೆಸ್‌ಮೀಟ್‌ನಲ್ಲಿ ನಾನು ಹೇಳಿದ್ದೆ 70 ದಿನದ ಮೇಲೆ ನಾನು ಯಾರಿಗೂ ಕಾಲ್‌ಶೀಟ್ ಕೊಡಲ್ಲ ಅಂತ. ಆದರೆ, ಪ್ರೇಮ್‌ಗಾಗಿ ದರ್ಶನ್ ನೂರು ದಿನ ಡೇಟ್ಸ್ ಕೊಡ್ತಿದ್ದಾರೆ ಅಂತ ಸುದ್ದಿ ಆಯ್ತು. ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? ಕರಿಯದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ.. ಆಮೇಲೆ ಇದನ್ನ ನಾನು ಮಾಡಲ್ಲ ಅಂತ ಹೇಳಿದೆ. ತರುಣ್ ಬಂದರು ಸಿನಿಮಾ ಆಯ್ತು' ಎಂದು ದರ್ಶನ್ ಹೇಳಿದ್ದರು. 

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಿರ್ದೇಶಕ ಜೋಗಿ ಪ್ರೇಮ್ ಕೂಡಾ ದರ್ಶನ್ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ರಕ್ಷಿತಾ ಪ್ರೇಮ್ ಕೂಡ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

ಇದೆಲ್ಲದರ ನಡುವೆ, ದರ್ಶನ್ ಪರ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. #WestandwithDboss ಎನ್ನುವ ಅಭಿಯಾನ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆರಂಭವಾಗಿದೆ. ಸಾವಿರಾರು ಅಭಿಮಾನಿಗಳು ದರ್ಶನ್ ಪರ ಪೋಸ್ಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ, ಇದೀಗ ದರ್ವನ್ ಅವರ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ. ಮಾನವ ಹಕ್ಕು, ಭ್ರಷ್ಟಾಚಾರ ನಿಗ್ರಹ ದಳ ದೂರು ದಾಖಲಿಸಿದೆ. ದರ್ಶನ್ ಅವಾಚ್ಯ ಶಬ್ಧಗಳನ್ನು ಬಳಸಿದ್ದು ತಪ್ಪು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ರನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿದೆ.