ಸುಕೃತಾ ನಾಗ್ ಅವರಿಂದ ಮತ್ತೊಂದು ಭರ್ಜರಿ ಹಾಟ್ ಡ್ಯಾನ್ಸ್..! ಬಾಲಿವುಡ್ ಹಳೆಯ ಹಾಡು ವೈರಲ್

By Infoflick Correspondent

Updated:Tuesday, April 12, 2022, 08:17[IST]

ಸುಕೃತಾ ನಾಗ್ ಅವರಿಂದ ಮತ್ತೊಂದು ಭರ್ಜರಿ ಹಾಟ್ ಡ್ಯಾನ್ಸ್..! ಬಾಲಿವುಡ್ ಹಳೆಯ ಹಾಡು ವೈರಲ್

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದ್ದೇ ಆದ ಸಕ್ಕತ್ ಅಭಿನಯದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಸಾಕಷ್ಟು ಕಲಾವಿದರು ನಟ-ನಟಿಯರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ ಎಂದೇ ಹೇಳಬಹುದು. ಧಾರಾವಾಹಿ ಎಂದರೆ ಹಳ್ಳಿಗಳಲ್ಲಿ ಹೆಚ್ಚು ಹೆಣ್ಣುಮಕ್ಕಳು ನೋಡುತ್ತಾರೆ. ಜೊತೆಗೆ ಸಿಟಿಗಳಲ್ಲಿಯೂ ಹೆಣ್ಣುಮಕ್ಕಳು ಚಾಚೂತಪ್ಪದೆ ಅವರಿಗಿಷ್ಟ ಇರುವ ಧಾರಾವಾಹಿಗಳನ್ನು ವೀಕ್ಷಣೆ ಮಾಡ್ತಾರೆ. ಧಾರಾವಾಹಿಗಳ ಮೂಲಕವೇ ಹೆಚ್ಚು ನಟ-ನಟಿಯರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ನಾವು ಹೇಳಬಹುದು.

ಕಲರ್ಸ್ ಕನ್ನಡದಲ್ಲಿ ಈ ಹಿಂದೆ ಪ್ರಸಾರ ಆದಂತಹ ಅಗ್ನಿಸಾಕ್ಷಿ ಸೀರಿಯಲ್ ಯಾರಿಗೆ ತಾನೆ ಗೊತ್ತಿಲ್ಲ ಇಲ್ಲ ಹೇಳಿ. ಅಗ್ನಿಸಾಕ್ಷಿ ಒಂದು ಭರಪೂರ ಮನರಂಜನೆ ಧಾರಾವಾಹಿ ಆಗಿತ್ತು, ಹಾಗೆ ಧಾರವಾಹಿಯಲ್ಲಿ ಎಲ್ಲಾ ಕಲಾವಿದರು ನಿಜ ಅತ್ಯದ್ಭುತವಾಗಿ ಅಭಿನಯ ಮಾಡಿದ್ದರು. ವೈಷ್ಣವಿ ಅವರು ಸನ್ನಿಧಿ ಪಾತ್ರದಲ್ಲಿ ಮಿಂಚಿದ್ದರೆ, ಇವರ ನಾದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಂಜಲಿ ಪಾತ್ರದ ಸುಕೃತ ನಾಗ್. ಹೌದು ನಟಿ ಸುಕೃತ ನಾಗ್ ಈ ಅಗ್ನಿಸಾಕ್ಷಿ ಸೀರಿಯಲ್ ಬಳಿಕ ಎಲ್ಲಿಯೂ ಕಾಣಿಸಲಿಲ್ಲ. ಹಾಗೆ ಯಾವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ, ಆದ್ರೆ ಇದೀಗ ಲಕ್ಷಣ ಎಂಬ ಧಾರಾವಾಹಿಯಲ್ಲಿ ಶ್ರೀಮಂತರ ಹುಡುಗಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ಸೀರಿಯಲ್ ಖಳ ನಾಯಕಿ ಕೂಡ ಹೌದು.   

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇರುವ ಅಗ್ನಿಸಾಕ್ಷಿ ಅಂಜಲಿ ಪಾತ್ರದ ಸುಕೃತ ನಾಗ್ ಅವರು ಆಗಾಗ ಫೋಟೋಶೂಟ್ ಗಳನ್ನು ಮಾಡಿಸುತ್ತಾರೆ. ಇದೀಗ ಮತ್ತೆ ಬಾಲಿವುಡ್ನ ಒಂದು ಹಳೆಯ ಸಾಂಗಿಗೆ ಡಾನ್ಸ್ ಮಾಡಿದ್ದು ಆ ವಿಡೀಯೋವನ್ನ ಅವರ ಇನ್ಸ್ಟಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಕತ್ತಾಗಿ ಹಾಟ್ ಆಗಿ ಕಾಣಿಸಿರುವ ನಟಿ ಸುಕೃತಾ ನಾಗ್ ಅಸಲಿಗೆ ಬಾಲಿವುಡ್ ನ ಈ ಹಳೆಯ ಹಾಡಿಗೆ ಯಾವ ರೀತಿ ಹೆಜ್ಜೆಹಾಕಿದ್ದಾರೆ ಗೊತ್ತಾ..? ಇಲ್ಲಿದೆ ಆ ವಿಡೀಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು....