ದಿಗಂತ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಐಂದ್ರಿತಾ ರೇ !! ನಂಗೆ ತುಂಬಾ ಭಯ ಆಗಿತ್ತು

By Infoflick Correspondent

Updated:Wednesday, June 22, 2022, 22:14[IST]

ದಿಗಂತ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಐಂದ್ರಿತಾ ರೇ !!  ನಂಗೆ ತುಂಬಾ ಭಯ ಆಗಿತ್ತು

ಗೋವಾ ಕಡಲತೀರದಲ್ಲಿ ಸಮ್ಮರ್ ಸಾಲ್ಟ್ ಜಂಪ್ ವೇಳೆ ದಿಂಗತ್ ಕುತ್ತಿಗೆಗೆ ಪೆಟ್ಟು ಬಿದ್ದಿತ್ತು. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ನಿನ್ನೆ ಮಧ್ಯಾಹ್ನ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿಗಂತ್ ಪತ್ನಿ ಐದ್ರಿಂತಾ ರೇ ನಾನು ಮತ್ತು ದಿಗಂತ್‌ ರಜೆ ಕಳೆಯಲು ಗೋವಾಗೆ ಹೋಗಿದ್ದೆವು. ನಾವಿರುವ ರೆಸಾರ್ಟ್ ಗೋವಾದಿಂದ 3 ಗಂಟೆ ದೂರದಲ್ಲಿತ್ತು. ನಿಮ್ಮೆಲ್ಲರಿಗೂ ಗೊತ್ತು. 

ಅವನಿಗೆ ಸ್ಪೋರ್ಟ್ಸ್ ಆಕ್ಟಿವಿಟಿಸ್ ತುಂಬಾ ಇಷ್ಟ ಅಂತ. ಸಮ್ಮರ್ ಸಾಲ್ಟ್ ಮಾಡುವುದಕ್ಕೆ ತುಂಬಾನೇ ಇಷ್ಟ. ದುರಾದೃಷ್ಟವಶಾತ್ ಈ ಬಾರಿ ಸಮ್ಮರ್ ಸಾಲ್ಟ್ ಸ್ಪಲ್ಪ ರಾಂಗ್ ಆಗಿ, ಲಾಂಡ್ ಆಗುವಾಗ ತಲೆ ತಾಗಿ ಕತ್ತಿಗೆಗೆ ಪೆಟ್ಟು ಬಿದ್ದಿದೆ." ಅಲ್ಲಿ ಪಲ್ಟಿ ಹೊಡೆಯುವಾಗ ಗಾಯಗೊಂಡರು. ಕತ್ತಿಗೆ ಪಟ್ಟು ಮಾಡಿಕೊಂಡಿದ್ದರು. ಗೋವಾದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು.

ನಾನು ತಕ್ಷಣ ಗೋವಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗಿದ್ದೆ, ತಕ್ಷಣ ಎಂಆರ್‌ಐ, ಎಕ್ಸ್‌ರೇ ರಿಪೋರ್ಟ್ ಎಲ್ಲಾ ಇಲ್ಲಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದೆ. ಡ್ಯಾಮೇಜ್ ತುಂಬಾನೇ ಸೀರಿಯಸ್ ಆಗಬಹುದಾಗಿತ್ತು. ಆದರೆ ದಿಗಂತ್ ತುಂಬಾ ಶಿಸ್ತಿನಿಂದ ಇದ್ದ ಹಾಗೂ ವರ್ಕ್‌ಔಟ್ ಮಾಡುತ್ತಿದ್ದ. ಅದು ಅವನ ಮೇಲೆ ಆಗಬಹುದಾದ ಪರಿಣಾಮವನ್ನು ತಡೆದಿದೆ. ನಮ್ಮ ಬಳಿ ಸಮಯ ಜಾಸ್ತಿ ಇರಲಿಲ್ಲ.

ಅವನನ್ನು ಗೋವಾದಿಂದ ಏರ್‌ಲಿಫ್ಟ್ ಮಾಡಿ ಬೆಂಗಳೂರಿಗೆ ಶಿಫ್ಟ್ ಮಾಡಬೇಕಿತ್ತು." ನಾನು ಈ ಸಂದರ್ಭದಲ್ಲಿ ಗೋವಾ ಸರ್ಕಾರ ಹಾಗೂ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲು ಸಹಕರಿಸಿದ್ಧಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಇಲ್ಲಿನ ಮಣಿಪಾಲ್ ಆಸ್ಪತ್ರೆಯ ಡಾ. ವಿದ್ಯಾಧರ್ ಜೊತೆ ಸಂಪರ್ಕದಲ್ಲಿದ್ದೆ. ದಿಗಂತ್ ಅವರನ್ನುಆರೋಗ್ಯದ ಮೇಲೆ ನಿಗಾ ಇಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ದಿಗಂತ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯ ಈಗ ಸುಧಾರಿಸಿದೆ. ಈಗ ಗುಣಮುಖನಾಗುತ್ತಿದ್ದಾನೆ." ಈಗ ಅವನ ಆರೋಗ್ಯ ತುಂಬಾನೇ ಚೆನ್ನಾಗಿದೆ. ಈಗಾಗಲೇ ಡಾಕ್ಟರ್‌ಗೆ ಮತ್ತೆ ಸಮ್ಮರ್ ಸಾಲ್ಟ್‌ಗೆ ರೆಡಿಯಾಗಿದ್ದೀನಿ ಅಂತ ಹೇಳಿದ್ದಾನೆ.

ಏನೂ ಟೆನ್ಷನ್ ಇಲ್ಲ. ನನಗೆ ಗೋವಾದಲ್ಲಿದ್ದಾಗ ನನಗೆ ಸ್ವಲ್ಪ ಟೆನ್ಷನ್ ಇತ್ತು. ತಕ್ಷಣ ಬೆಂಗಳೂರಿಗೆ ಬಂದಾಗ ರಿಲೀಫ್ ಆಯ್ತು. ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರೂ ಇದ್ದಾರೆ. ಸಪೋರ್ಟ್ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಎಂದು ಐದ್ರಿಂತಾ ಹೇಳಿದ್ದಾರೆ. ನಿನ್ನೆ 3 ಗಂಟೆ ಕಾಲ ವೈದ್ಯರು ಆಪರೇಷನ್ ಮಾಡಿದ್ದು, ಇದೀಗ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮನೆಗೆ ತೆರಳಿದ ದಿಗಂತ್ ಅವರಿಗೆ ಮೂರು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

VIDEO CREDIT : PUBLIC TV