Aindrita Ray : ದೇವರ ತರ ಬಂದು ನಮ್ಮನ್ನು ಕಾಪಡಿದ್ದು ಇವರೇ ಎಂದು ಭಾವುಕರಾದ ಐಂದ್ರಿತಾ ರೈ..! ಅಸಲಿಗೆ ಆಗಿದ್ದೇನು..?

By Infoflick Correspondent

Updated:Wednesday, June 29, 2022, 19:43[IST]

Aindrita Ray : ದೇವರ ತರ ಬಂದು ನಮ್ಮನ್ನು ಕಾಪಡಿದ್ದು ಇವರೇ ಎಂದು ಭಾವುಕರಾದ ಐಂದ್ರಿತಾ ರೈ..! ಅಸಲಿಗೆ ಆಗಿದ್ದೇನು..?

ದೂದ್ ಪೇಡ ದಿಗಂತ್ ಹಾಗೂ ಅವರ ಕುಟುಂಬದವರು ಗೋವಾ ಪ್ರವಾಸ ಕೈಗೊಂಡಿದ್ದಾಗ ದಿಗಂತ್ ಅವರಿಗೆ ಇದೇ ಜೂನ್ 20ನೇ ತಾರೀಕು ಸಮ್ಮರ್ ಸಾಲ್ಟ್ ಮಾಡುವಾಗ ಅವರ ತಲೆಕೆಳಗಾಗಿ ಸಾಹಸಮಯವಾಗಿ ಜಿಗಿಯುವ ಈ ಒಂದು ಕೆಲಸ ದಿಗಂತ್ ಅವರಿಗೆ ಕಂಟಕ ಎದುರು ತಂದಿತ್ತು. ಅವರ ಕುತ್ತಿಗೆ ಮತ್ತು ಬೆನ್ನು ಮೂಳೆ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು, ತದನಂತರ ಅಲ್ಲಿಂದ ಬೆಂಗಳೂರಿಗೆ ತಂದು ದಿಗಂತ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಇದೀಗ ಸ್ವಲ್ಪ ಸ್ವಲ್ಪ ಚೇತರಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೌದು ಇದೆಲ್ಲದರ ನಡುವೆ ಅವರ ಪತ್ನಿ ನಟಿ ಐಂದ್ರಿತಾ ರೈ ಅವರು ಕೆಲವೊಂದಿಷ್ಟು ವಿಚಾರಗಳನ್ನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನಮಗೆ ಸಹಾಯ ಮಾಡಿದ್ದು ಇವರೇ, ನಮ್ಮ ದೇವರು ಎನ್ನಲಾಗಿ ತುಂಬಾ ಭಾವಕರಾಗಿದ್ದಾರೆ.    

ನಂತರ ಅವರು ಹೇಳುವ ಹಾಗೆ ದಿಗಂತ್ ಗೆ ಇದ್ದಕ್ಕಿದ್ದಂತೆ ಈ ರೀತಿ ಸಮಸ್ಯೆ ಎದುರಾದಾಗ ನಮಗೆ ಏನು ತೋಚುದೆ ತುಂಬಾ ಕಕ್ಕಾಬಿಕ್ಕಿ ಯಾಗಿದ್ದೆವು. ಗೋವಾದಲ್ಲಿ ಆಸ್ಪತ್ರೆಗೂ ಸೇರಿಸಿ ಚಿಕಿತ್ಸೆ ಕೊಡಿಸಲು ಹೇಗೋ ಮುಂದಾದದೆವು. ಆದ್ರೆ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು ಹಾಗೂ ದಿಗಂತ್ ನನ್ನ ಬೆಂಗಳೂರಿಗೆ ಆದಷ್ಟು ಬೇಗ ಕರೆದುಕೊಂಡು ಹೋಗಬೇಕು ಎಂದರು. ಆಗ ನಮಗೆ ಏನು ತೋಚಲಿಲ್ಲ. ಹೇಗಪ್ಪಾ ಬೇಗ ಕರೆದುಕೊಂಡು  ಹೋಗೋದು ಎಂದು ಚಿಂತನೆ ನಡೆಸಿದ್ದೆವು. ಆಗ ದೇವರಂತೆ ಬಂದು ಕಾಪಾಡಿದ್ದು ನಿರ್ಮಾಪಕ ವೆಂಕಟ್ ನಾರಾಯಣ್ ಎಂದು ಹೇಳಿದ್ದಾರೆ. ಹಾಗೆ  ಧನ್ಯವಾದವನ್ನು ಕೂಡ ತಿಳಿಸಿದ್ದಾರೆ.

ಹೌದು ದಿಗಂತ್ ಅವರಿಗೆ ಈ ರೀತಿ ಸಮಸ್ಯೆ ಎದುರಾದಾಗ ಇದ್ದಕ್ಕಿದ್ದಂತೆ ಏರ್ಲಿಫ್ಟ್ ಮೂಲಕ ದಿಗಂತ್ ಅವರನ್ನು ಕರೆತರಲು ಸಹಾಯ ಮಾಡಿದ್ದು ಇದೆ ನಿರ್ಮಾಪಕ ಕೆವಿಎನ್ ಗ್ರೂಪ್ನ ಸಂಸ್ಥಾಪಕ ವೆಂಕಟ ನಾರಾಯಣ. ಧನ್ಯವಾದ ತಿಳಿಸಿದ ಐಂದ್ರಿತಾ ರೈ ವೆಂಕಟನಾರಾಯಣ ಅವರು ನಮ್ಮ ಪಾಲಿಗೆ ದೇವರಂತೆ ಅಂದು ಬಂದರು ಎಂದು ಹೇಳಿದ್ದಾರೆ. ಈಗ ದಿಗಂತ್ ಅವರು ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೌದು ನಿರ್ಮಾಪಕ ವೆಂಕಟನಾರಾಯಣ ಅವರು ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ದ್ರುವ ಸರ್ಜಾ ಅವರ ಮುಂದಿನ ಸಿನಿಮಾ ಕೂಡ ಇವರೇ ಹಣ ಹಾಕಿದ್ದಾರೆ ಎನ್ನಲಾಗಿದೆ. ಹಾಗೆ ಯಶ್ ಮುಂದಿನ ಚಿತ್ರಕ್ಕೂ ಕೂಡ ಇವರೇ ಪ್ರೊಡ್ಯೂಸರ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..