Sudeep, Ajay Devgn : ಈಗ ಸುದೀಪ್ ಗೆ ಧನ್ಯವಾದ ಹೇಳಿದ ಅಜಯ್ ದೇವಗನ್ ! ಏಕೆ ಗೊತ್ತೆ ? ಇಲ್ಲಿದೆ ಓದಿ
Updated:Thursday, April 28, 2022, 13:32[IST]

ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಬಗ್ಗೆ ಈಗ ದೇಶಾದ್ಯಂತ ಚರ್ಚೆ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತು ಮಾತನಾಡುವಾಗ ಕಿಚ್ಚ ಸುದೀಪ್ ಅವರು ನೀಡಿದ ಹೇಳಿಕೆ ವೈರಲ್ ಆಗಿದೆ. ಸುದೀಪ್ ಮಾತನ್ನು ಅಜಯ್ ದೇವಗನ್ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಇತ್ತೀಚೆಗೆ ಕಿಚ್ಚ ಸುದೀಪ್ ಕೂಡ 'ಹಿಂದಿ ರಾಷ್ಟ್ರ ಭಾಷೆ ಅಲ್ಲ' ಎಂಬುದನ್ನು ಒತ್ತಿ ಹೇಳಿದರು. ಅವರ ಹೇಳಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.
ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಐ ಆಯಮ್ ಆರ್' ಸಿನಿಮಾದ ಟೈಟಲ್ ಮತ್ತು ಫಸ್ಟ್ಲುಕ್ ಲಾಂಚ್ ಕಾರ್ಯಕ್ರಮ. ಅದಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅಥಿತಿ ಆಗಿದ್ದರು. ಆ ವೇದಿಕೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತು ಪ್ರಸ್ತಾಪ ಆಯಿತು. ಅದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಅವರು, 'ಕನ್ನಡ ಚಿತ್ರರಂಗದ ಒಂದು ಸಿನಿಮಾವನ್ನು ಪ್ಯಾನ್ ಇಂಡಿಯಾ ಚಿತ್ರ ಅಂತ ಹೇಳಿದ್ದೀರಿ. ಅದಕ್ಕೆ ಒಂದು ಕರೆಕ್ಷನ್ ಇರಲಿ. ಯಾಕೆಂದರೆ ಈಗ ಹಿಂದಿ ರಾಷ್ಟ್ರ ಭಾಷೆ ಅಲ್ಲ. ಹಿಂದಿಯವರು ನಿಜವಾಗಿಯೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಚಿತ್ರವನ್ನು ತಮಿಳು, ತೆಲುಗಿಗೆ ಡಬ್ ಮಾಡಿ ಒದ್ದಾಡುತ್ತಿದ್ದಾರೆ. ಆಗ್ತಾ ಇಲ್ಲ' ಎಂದು ಸುದೀಪ್ ಹೇಳಿದ್ದರು.
ನನ್ನ ಸಹೋದರ ಕಿಚ್ಚ ಸುದೀಪ್ ಅವರೇ.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ನೀವೇಕೆ ರಿಲೀಸ್ ಮಾಡುತ್ತೀರಿ? ಅಂದು, ಇಂದು ಎಂದೆಂದಿಗೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ' ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದರು. ಅವರ ಈ ಮಾತಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುದೀಪ್, ನಾನು ಆ ಮಾತನ್ನ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದೇನೆ. ನಮ್ಮ ದೇಶದಲ್ಲಿರುವ ಎಲ್ಲ ಭಾಷೆಗಳನ್ನ ನಾನು ಗೌರವಿಸುತ್ತೇನೆ. ನೀವೂ ಹಿಂದಿಯಲ್ಲಿ ಟ್ವೀಟ್ ಮಾಡಿರುವುದನ್ನ ನಾನು ಅರ್ಥ ಮಾಡಿಕೊಂಡೆ, ಅದಕ್ಕೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದರೆ ನಿಮಗೆ ಅರ್ಥವಾಗುತ್ತಿತ್ತೆ? ಎಂದು ಮರು ಪ್ರಶ್ನೆ ಮಾಡಿದ್ದಾರೆ. ನಾವೆಲ್ಲರೂ ಹಿಂದಿ ಭಾಷೆ ಗೌರವಿಸಿದ್ದೇವೆ, ಪ್ರೀತಿಸಿ ಅದನ್ನ ಕಲಿತಿದ್ದೇವೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವ ವಿಷಯವಾಗಿ ಹಾಗೆ ಹೇಳಿದ್ದೆ ಎಂಬುದು ಬಹುಶಃ ನಿಮ್ಮನ್ನು ಬೇರೆಯದೇ ರೀತಿಯಲ್ಲಿ ತಲುಪಿರಬಹುದು. ನಿಮ್ಮನ್ನು ಮುಖತಃ ಭೇಟಿಯಾದಾಗ ನಾನು ಯಾಕೆ ಹಾಗೆ ಹೇಳಿದ್ದೆ ಎಂಬುದನ್ನು ವಿವರಿಸುವೆ. ಅದು ನೋವು ಅಥವಾ ಯಾವುದೇ ವಿವಾದ ಆಗಿಸುವ ಉದ್ದೇಶದಿಂದ ಹೇಳಿದ್ದಲ್ಲ' ಎಂಬುದಾಗಿ ಸುದೀಪ್ ಹೇಳಿದ್ದಾರೆ. ನನಗೆ ಉಂಟಾಗಿದ್ದ ಗೊಂದಲಗಳನ್ನ ನಿವಾರಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಇಡೀ ಚಿತ್ರರಂಗವನ್ನ ಒಂದೇ ಎಂದು ಭಾವಿಸುತ್ತೇನೆ. ಬೇರೆ ಭಾಷೆಗಳನ್ನ ಗೌರವಿಸುವ ರೀತಿಯಲ್ಲಿ ನಮ್ಮ ಭಾಷೆಯನ್ನೂ ಇತರರೂ ಗೌರವಿಸಬೇಕೆಂದು ಬಯಸುತ್ತೇನೆ. ಈ ನಡುವೆ ಅನುವಾದ ಮಾಡುವಾಗ ಅರ್ಥ ತಪ್ಪಾಗಿರಬಹುದು ಎಂದು ಹೇಳಿದ್ದಾರೆ.
ಸ್ಯಾಂಡಲ್ವುಡ್ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಆದರೆ ಅಜಯ್ ದೇವಗನ್ ವಿರುದ್ಧ ದಕ್ಷಿಣ ಭಾದತದ ಜನ ನಟ ನಟಿಯರು ರಾಜಕೀಯ ಗಣ್ಯರು ತಿರುಗಿಬಿದ್ದಿದ್ದಾರೆ. ಮತ್ತೆ ರಾಷ್ಟ ಭಾಷೆ ಚರ್ಚೆಯ ಕಾವು ಹೆಚ್ಚಾಗಿದೆ.