Ajay Rao : ನಿಜವಾಗಲೂ ಕಲೆಕ್ಷನ್ ಇಲ್ಲ ಜನ ಬರ್ತಿಲ್ಲ..! ಬೇಸರ ವ್ಯಕ್ತ ಪಡಿಸಿದ ಅಜಯ್ ರಾವ್..!
Updated:Monday, May 2, 2022, 10:58[IST]

ಕನ್ನಡದ ಬಹುನಿರೀಕ್ಷಿತ ಚಿತ್ರವಾದ ಶೋಕಿವಾಲಾ ಒಂದು ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಚಲನಚಿತ್ರ ಆಗಿದ್ದು, ಇದನ್ನು ಜಾಕಿ ಬಿ ನಿರ್ದೇಶಿಸಿದ್ದಾರೆ..ಮತ್ತು ಟಿ ಆರ್ ಚಂದ್ರಶೇಖರ್ ಅವರು ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಕೃಷ್ಣ ಅಜಯ್ ರಾವ್, ಮತ್ತು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿದ್ದರೆ, ಶ್ರೀಧರ್ ವಿ ಸಂಭ್ರಮ್ ಅವರು ಸಕತ್ ಸಂಗೀತ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶೋಕಿವಾಲ ಚಿತ್ರವೊಂದು ಸಕ್ಕತ್ ಸಿನಿಮಾ ಆಗಿದ್ದು, ನಟ ಅಜಯ್ ರಾವ್ ಅವರು ಇದರಲಿ ನಟರಾಗಿ ಅಭಿನಯ ಮಾಡಿದ್ದಾರೆ. ನಟ ಅಜಯ್ ರಾವ್ ಎಂಥಹಾ ಪ್ರತಿಭೆ ಚಾಣಾಕ್ಷ ನಟ ಎಂದು ಕೂಡ ಎಲ್ಲರಿಗೂ ಗೊತ್ತು.
ಮೊನ್ನೆ ಏಪ್ರಿಲ್ 29ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಶೋಕಿವಾಲ ಸಿನಿಮಾ ಬಿಡುಗಡೆಯಾಗಿತ್ತು. ಆದ್ರೆ ಇದೀಗ ಚಿತ್ರತಂಡ ಆರಂಭದಲ್ಲಿಯೇ ದೊಡ್ಡ ಸಮಸ್ಯೆ ಎದುರಿಸಿದೆ ಎನ್ನಲಾಗಿದೆ. ಶೋಕಿವಾಲ ಚಿತ್ರ ಚೆನ್ನಾಗಿ ಮೂಡಿ ಬಂದರೂ ಜನರು ಸಿನಿಮಾ ನೋಡಲಿಕ್ಕೆ ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದೆ. ಈ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಕನ್ನಡದ ಸಣ್ಣ ಸಣ್ಣ ಹೊಸ ಸಿನಿಮಾಗಳಿಗೆ ತುಂಬಾ ದೊಡ್ಡ ಅನ್ಯಾಯ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿರ್ಮಾಪಕರು ದುಡ್ಡು ಹಾಕಿ ಈ ರೀತಿ ಆದರೆ ಅವರು ಏನು ಮಾಡಬೇಕು ಎಂದು ಇದೀಗ ಚಿತ್ರತಂಡ ತಮ್ಮ ನೋವನ್ನು ಮಾಧ್ಯಮದ ಎದುರು ಹಂಚಿಕೊಂಡಿದೆ.
ಹೌದು ಸಿನಿಮಾದ ನಾಯಕ ನಟ ಅಜಯ್ ರಾವ್ ಅವರು ಹೇಳುವ ಹಾಗೆ, ಸಿನಿಮಾ ತುಂಬಾ ಚೆನ್ನಾಗಿದೆ. ಜನರು ಥಿಯೇಟರ್ ಕಡೆ ಬರಲು ಮನಸ್ಸು ಮಾಡುತ್ತಿಲ್ಲ. ಹಾಗೆ ಹೆಚ್ಚು ಥಿಯೇಟರ್ ಗಳು ಕೂಡ ನಮ್ಮಲ್ಲಿ ಇಲ್ಲ. ಸಿನಿಮಾ ಇನ್ನು ಕೂಡ ಪ್ರಮೋಶನ್ ಆಗಬೇಕಿತ್ತು ಏನೋ, ಸಿನಿಮಾ ಚೆನ್ನಾಗಿದ್ದರೂ ಕಲೆಕ್ಷನ್ ಅಷ್ಟಾಗಿ ಇಲ್ಲ. ಹೌದು ಮುಂದಿನ ದಿನಗಳಲ್ಲಿ ನಮ್ಮ ಸಿನಿಮಾಗೆ ಗೆಲುವು ಸಿಗುತ್ತದೆ ಎನ್ನುವ ಉದ್ದೇಶದಿಂದ ಇಲ್ಲಿ ಬಂದು ಮಾತನಾಡುತ್ತಿದ್ದೇವೆ ಎಲ್ಲರೂ ನಮ್ಮ ಶೋಕಿವಾಲ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಎಂದು ನಟ ಅಜಯ್ ಅವರು ಕೇಳಿಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ. ಧನ್ಯವಾದಗಳು...
VIDEO CREDIT : CINIBUZZ