ರಾಕಿ ಭಾಯ್ ಜೊತೆ ರಂಗ ಭೈ ಮಾತುಕತೆ..! ಅಕುಲ್ ಅಡ್ಡದಲ್ಲಿ ಕೆಜಿಎಫ್ 2 ಹವಾ..!

By Infoflick Correspondent

Updated:Monday, April 18, 2022, 13:26[IST]

ರಾಕಿ ಭಾಯ್ ಜೊತೆ ರಂಗ ಭೈ ಮಾತುಕತೆ..! ಅಕುಲ್ ಅಡ್ಡದಲ್ಲಿ ಕೆಜಿಎಫ್ 2 ಹವಾ..!

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ ಟು ಇಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವಮಟ್ಟದಲ್ಲಿ ರಾಕಿ ಬಾಯ್ ಅಬ್ಬರಕ್ಕೆ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳು ಈಗ ಬಿರುಗಾಳಿಯಂತೆ ಧೂಳೆಬ್ಬಿಸುತ್ತಿವೆ. ಹೌದು ಕನ್ನಡದ ಚಿತ್ರ ದೊಡ್ಡ ಈ ಮಟ್ಟಕ್ಕೆ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರೆ ಕನ್ನಡಿಗರಿಗೆ ಹೆಮ್ಮೆಯ ವಿಷಯ. ರಾಕಿ ಬಾಯ್ ಅಭಿನಯ ಮಾತ್ರ ಅಲ್ಲದೆ, ಇಡೀ ಕೆಜಿಎಫ್ ಚಿತ್ರತಂಡ ಈ ಸಿನಿಮಾಗಾಗಿ ತುಂಬಾನೇ ಕಷ್ಟ ಪಟ್ಟಿದ್ದು, ಇಂದು ಅದರ ಪರಿಶ್ರಮವಾಗಿ ಪ್ರತಿಫಲ ಸಿಕ್ಕಿದೆ ಎಂದು ಹೇಳಬಹುದು. ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ ಕೆಜಿಎಫ್ ನಲ್ಲಿ ಮೂಡಿಬಂದಿದ್ದು, ಇಡೀ ಇಂಡಿಯಾದ ಸಿನಿಪ್ರಿಯರು ನಮ್ಮ ಪ್ರಶಾಂತ್ ನೀಲ್ ಅವರನ್ನು ಒಪ್ಪಿಕೊಂಡಿದ್ದಾರೆ. ಇಂತಹ ಡೈರೆಕ್ಟರ್ ಇನ್ನೊಬ್ಬರಿಲ್ಲ ಎಂದು ಹೊಗಳುತ್ತಿದ್ದಾರೆ. ಎಂತಹ ಅದ್ಭುತ ಡೈರೆಕ್ಷನ್ ಪ್ರಶಾಂತ್ ನೀಲ್ ಅವರದು ಎಂದು ಹಾಡಿ ಹೋಗುಳುತ್ತಿದ್ದಾರೆ. 

ಜೊತೆಗೆ ಭುವನ್ ಗೌಡ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರುರು ಅವರನ್ನು ಸಹ ನೆನೆಸಬೇಕು. ಜೊತೆಗೆ ಕೆಜಿಎಫ್ ಸಿನಿಮಾದ ಎಡಿಟಿಂಗ್ ಕೂಡ ನಾವು ಮೆಚ್ಚಬೇಕು. ಅದು ಕೇವಲ 19 ವರ್ಷದ ಯುವಕ. ಪ್ರಶಾಂತ್ ಅವರು ನಿಜಕ್ಕೂ ಟ್ಯಾಲೆಂಟ್ ಡೈರೆಕ್ಟರ್ ಇಂತಹ ಪ್ರತಿಭೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಿನಿಮಾಗಳನ್ನು ಮಾಡಲಿ, ಇಡೀ ವಿಶ್ವಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬುದೇ ನಮ್ಮ ಆಶಯ ಎನ್ನುತ್ತಿದ್ದಾರೆ ಅಭಿಮಾನಿಗಳು. ಹೌದು ಇದರ ನಡುವೆಯೇ ಇದೀಗ ಅಕುಲ್ ಬಾಲಾಜಿ ಅವರು ರಾಕಿ ಬಾಯ್ ನಟ ಯಶ್ ಹಾಗೂ ಪಬ್ಲಿಕ್ ಟಿವಿ ಖ್ಯಾತಿಯ ರಂಗಣ್ಣ ಅವರನ್ನು ಕರೆದು ಅಕುಲ್ ಅಡ್ಡದಲಿ ಸಂದರ್ಶನ ಮಾಡಿದ್ದಾರೆ.

ರಾಕಿಬಾಯ್ ಜೊತೆ ರಂಗ ಭಾಯ್ ಎಂಬುದಾಗಿ ಕರೆದು ಕೆಜಿಎಫ್ ಚಿತ್ರದ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. 

ಅಕುಲ್ ಯಶ್ ಅವರನ್ನ ಕೇಳುತ್ತಾರೆ, ಇದಕ್ಕೆ ಸ್ಫೂರ್ತಿ ಯಾರು, ಯಾವ ರೀತಿ ಈ ಸಿನಿಮಾ ಮಾಡಲು ನಿರ್ಧಾರ ಮಾಡಿದಿರಿ, ಇದರ ಕೆಲ್ಸ ಹೇಗೆ ನಡೆಯಿತು ಎಂದು. ಹೌದು ಆಗ ಉತ್ತರ ನೀಡಿದ ಯಶ್ ಅವರ ಪ್ರತಿಕ್ರಿಯೆ ತುಂಬಾನೇ ಚೆನ್ನಾಗಿತ್ತು ಎಂದು ಹೇಳಬಹುದು. ಅಸಲಿಗೆ ರಾಕಿಬಾಯ್ ಜೊತೆ ರಂಗಣ್ಣ ಮಾತನಾಡಿದ್ದ ಪರಿ ನಿಜ ಅದ್ಭುತವಾಗಿತ್ತು. 4 ವರ್ಷದಿಂದ ಇದೇ ಕೆಜಿಎಫ್ ಸಿನಿಮಾ ಮಾಡುತ್ತಿದ್ದೇವೆ ಎಂದರೆ ಸುಮಾರು ಹತ್ತು ಸಿನಿಮಾಗಳನ್ನು ನಾನು ಇಷ್ಟರಲ್ಲಿ ಮಾಡುತ್ತಿದ್ದೆ, ಅದೆಲ್ಲ ದುಡ್ಡು ಇದು ಒಂದರಲ್ಲೇ ಬರುತ್ತದೆ ಎಂಬ ನಂಬಿಕೆ ನನಗೆ ಇತ್ತು ಎಂದು ಹೇಳುತ್ತಾರೆ. ಹಾಗೆ ಕಷ್ಟಪಟ್ಟು ಕೆಲಸ ಮಾಡಿದ್ದಿವಿ ಎಂದು ಹೇಳಿದರು. ಆಗ ರಂಗಣ್ಣ ಯಶ್ ಗೆ ಹೇಳಿದ ಮಾತು ನಿಜಕ್ಕೂ ಯಾವ ರೀತಿ ಇತ್ತು ಗೊತ್ತಾ.? ಈ ವಿಡಿಯೋ ಕೊನೆಯವರೆಗೂ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು.