Ravichandran : ಜಾಕ್ವೆಲಿನ್ ಗೆ ರವಿಚಂದ್ರನ್ ಯಾರು ಎಂದು ತಿಳಿಸಿದ ಅಕುಲ್ ಬಾಲಾಜಿ..! ನಟಿಯ ರಿಯಾಕ್ಷನ್ ಹೀಗಿತ್ತು
Updated:Wednesday, June 22, 2022, 17:23[IST]

ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಇಷ್ಟರಲ್ಲೇ ತೆರೆಗೆ ಅಪ್ಪಳಿಸಲು ಎಲ್ಲಾ ಸಿದ್ಧತೆ ನಡೆಸಿದೆ. ನಾಳೆ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಲು ಇಂದು ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮವನ್ನು ಭರ್ಜರಿಯಾಗಿ ಏರ್ಪಾಡು ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಶಿವಣ್ಣ, ರವಿಚಂದ್ರನ್, ನಟ ರಮೇಶ್ ಅರವಿಂದ್, ಹಾಗೆ ಇನ್ನು ಕೂಡ ಸಾಕಷ್ಟು ಸ್ಟಾರ್ ನಟರು ಕಲಾವಿದರು ಆಗಮಿಸಿದ್ದರು. ಜೊತೆಗೆ ಕಾರ್ಯಕ್ರಮವನ್ನು ನಿರೂಪಣೆ ಮಾಡಿಕೊಟ್ಟಿದ್ದು ಅಕುಲ್ ಬಾಲಾಜಿ. ಅನುಪ್ ಬಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿಕ್ರಾಂತ್ ರೋಣ ಇದಾಗಿದ್ದು ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.
ನಟ ಕಿಚ್ಚ ಸುದೀಪ್ ಅವರು ಇದೇ ಮೊಟ್ಟ ಮೊದಲ ಬಾರಿಗೆ ಅವರದೇ ಆದ ಭರ್ಜರಿ ವಿಕ್ರಾಂತ್ ರೋಣ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹಾಗೆ ಸದ್ದು ಮಾಡಲು ಸಹ ಸಜ್ಜಾಗಿದ್ದಾರೆ ಎನ್ನಲಾಗಿದೆ. ನಟ ಕಿಚ್ಚ ಸುದೀಪ್ ಅವರ ಅಭಿನಯದ ಬಗ್ಗೆ ನಾವು ಹೇಳಬೇಕಿಲ್ಲ. ಕಿಚ್ಚ ಸುದೀಪ್ ಅಭಿನಯ ಅದೆಷ್ಟರ ಮಟ್ಟಿಗೆ ಅಭಿಮಾನಿ ಹೃದಯದಲ್ಲಿ ನೆಲೆಸಿದೆ ಎಂದರೆ, ಅದಕ್ಕೆ ಯಾವ ಪದಗಳೇ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಕಿಚ್ಚ ಸುದೀಪ್ ಯಾವುದೇ ಪಾತ್ರ ಇದ್ದರೂ ನಿಭಾಯಿಸುವ ಕೌಶಲ್ಯ ಹೊಂದಿದ್ದಾರೆ ಎಂದು ಹೇಳಬಹುದು. ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಹಾಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ವೈರಲ್ ಸಹ ಆಗಿತ್ತು. ನಾವು ಎಲ್ಲಿ ನೋಡಿದರೂ ಆ ಹಾಡಿಗೆ ತಲೆದೂಗದೇ ಸುಮ್ಮನೆ ಇರುವವರು ಯಾರು ಇಲ್ಲ ಎಂದೇ ಹೇಳಬಹುದು.
ಅಷ್ಟರಮಟ್ಟಿಗೆ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಹೌದು ಈ ರಾರಾ ರಕ್ಕಮ್ಮ ಹಾಡಿಗೆ ಬಾಲಿವುಡ್ ಖ್ಯಾತ ನಟಿ ಜಾಕ್ವಲಿನ್ ಫರ್ನಾಂಡೀಸ್ ಅವರು ಹೆಜ್ಜೆಹಾಕಿದ್ದಾರೆ. ಇಂದು ಟ್ರೈಲರ್ ಲಾಂಚ್ ಈವೆಂಟ್ ಕಾರ್ಯಕ್ರಮದಲ್ಲಿ ಜಾಕ್ವಲಿನ್ ಫರ್ನಾಂಡೀಸ್ ಕೂಡ ಆಗಮಿಸಿದ್ದು ರವಿಚಂದ್ರನ್ ಅವರನ್ನ ನಿರೂಪಕ ಅಕುಲ್ ಬಾಲಾಜಿ, ನಟಿ ಜಾಕ್ ಬಳಿ ಪರಿಚಯ ಮಾಡಿಕೊಟ್ಟಿದ್ದಾರೆ. ಹೌದು ನಿಮಗೆ ರವಿಚಂದ್ರನ್ ಸರ್ ಗೊತ್ತಾ ಎಂದು ಮಾತನ್ನು ಆರಂಭಿಸಿದ ಅಕುಲ್, ನಿಮಗೆ ಜೂಹಿಚಾವ್ಲಾ, ಶಿಲ್ಪಾಶೆಟ್ಟಿ, ಹಾಗೂ ರವೀನಾ ಟಂಡನ್ ಗೊತ್ತಾ, ಅವರೆಲ್ಲರೂ ರವಿಚಂದ್ರನ್ ಸರ್ ಅವರ ನಟಿ ಮಣಿಯರು. ಹಾಗೆ ಗಿಟಾರ್ ಎಲ್ಲಿಂದ ಬಂತು ಗೊತ್ತಾ ಅದು ರವಿಚಂದ್ರನ್ ಅವರೇ ಕಂಡುಹಿಡಿದಿದ್ದಾರೆ ಎಂದು ತುಂಬಾ ಚೆನ್ನಾಗಿ ಮಾತನಾಡಿಸಿ ಪರಿಚಯಮಾಡಿಕೊಟ್ಟಿದ್ದಾರೆ ನಟಿ ಜಾಕ್ವೆಲಿನ್ ಬಳಿ. ಹೌದು ಇಲ್ಲಿದೆ ನೋಡಿ ಅದರ ವಿಡಿಯೋ. ಜಾಕ್ವಲಿನ್ ಗೆ ರವಿಚಂದ್ರನ್ ಅವರ ಪರಿಚಯ ಮಾಡಿಕೊಟ್ಟ ವಿಡಿಯೋ ಒಂದುಬಾರಿ ನೋಡಿ. ನೀವು ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..( video credit : news first kannada ).