ಆಲ್ ಓಕೆಗೆ ಅಪ್ಪು ಹೇಳಿದ್ದ ಆ ಮಾತುಗಳು ಎಷ್ಟು ಸತ್ಯ ಆದವು..? ಅಪ್ಪು ನೆನೆದ ಆಲ್ ಓಕೆ ಹೇಳಿದ್ದಿಷ್ಟು

By Infoflick Correspondent

Updated:Friday, March 4, 2022, 17:31[IST]

ಆಲ್ ಓಕೆಗೆ ಅಪ್ಪು ಹೇಳಿದ್ದ ಆ ಮಾತುಗಳು ಎಷ್ಟು ಸತ್ಯ ಆದವು..? ಅಪ್ಪು ನೆನೆದ ಆಲ್ ಓಕೆ ಹೇಳಿದ್ದಿಷ್ಟು

ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ   (Alok)  ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ಹೌದು ಇವರ ಹಾಡುಗಳಿಗೆ ಅತಿ ದೊಡ್ಡ ಅಭಿಮಾನಿ ಬಳಗವಿದೆ. ಹಾಗೇ ಇವರಿಗೂ ಕೂಡ ಹೆಚ್ಚು ಫ್ಯಾನ್ಸ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ರ್ಯಾಪರ್ ಯುಗದಲ್ಲಿ ಒಂದು ಹೊಚ್ಚ ಹೊಸ ಬಿರುಗಾಳಿ ಎಬ್ಬಿಸಿದ ರ್ಯಾಪರ್ ಆಲ್ ಓಕೆ ಇದೀಗ ಮಾಧ್ಯಮ ಜೊತೆ ಮಾತನಾಡಿದ್ದು ಕೆಲವೊಂದಿಷ್ಟು ವಿಷಯಗಳನ್ನು ಕನ್ನಡಿಗರ ಎದುರು ಬಿಚ್ಚಿಟ್ಟಿದ್ದಾರೆ. ಹಾಗೆ ತಮ್ಮ ಮತ್ತು ಅಪ್ಪು ಅವರ ಒಡನಾಟ ಹೇಗಿತ್ತು ಎಂಬುದಾಗಿ ತಿಳಿಸಿದ್ದಾರೆ. ಒಟ್ಟು 15 ವರ್ಷದ ರ್ಯಾಪರ್ ಜರ್ನಿಯಲ್ಲಿ ಆಲ್ ಓಕೆ ಅವರು ತುಂಬಾನೇ ಏಳುಬೀಳುಗಳನ್ನು ಕಂಡಿದ್ದು, ಇದೀಗ ಹೆಚ್ಚು ಯಶಸ್ವಿ ತುತ್ತತುದಿಯಲ್ಲಿ ನಿಂತಿದ್ದಾರೆ ಎನ್ನಬಹುದು. ಕಾರಣ ಇವರ ಹಾಡುಗಳೆಲ್ಲವೂ ಹೆಚ್ಚು ತುಂಬಾ ಅದ್ಭುತವಾಗಿವೆ.

ಇತ್ತೀಚಿಗಷ್ಟೇ ಫೆಬ್ರವರಿ 24 ನೇ ತಾರೀಕು ರೈತರ ಕುರಿತು ಒಂದು ಹಾಡನ್ನು ಮಾಡಿದ್ದರು. ಅದು ಸಹ ಹೆಚ್ಚಾಗಿಯೇ ಯಶಸ್ವಿಯಾಗುತ್ತಿದೆ. ರಾಷ್ಟ್ರಕ್ಕೆ ರೈತನೆ ಬೆನ್ನೆಲುಬು, ಅವರ ಮುಂದೆ ಯಾರು ಏನು ಇಲ್ಲ, ಎಲ್ಲಾ ರೈತರಿಗೆ ಮರ್ಯಾದೆ ನೀಡಲೇಬೇಕು, ಗೌರವ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಒಂದು ಹಾಡನ್ನು ಮಾಡಿದ್ದಾರೆ. ಅದು ಇದೀಗ ಹೆಚ್ಚು ಯಶಸ್ವಿಯಾಗಿದೆ. ಈ ಬಗ್ಗೆ ಮಾತನಾಡಿದ ರ್ಯಾಪರ್ ಆಲ್ ಓಕೆ ನನ್ನ ಮೊದಲ ಆಲ್ಬಮ್ ಸಾಂಗ್ ಅನ್ನು ಪುನೀತ್ ಅವರೇ ಲಾಂಚ್ ಮಾಡಿದ್ದರು. ಎಲ್ಲಾ ಹಾಡುಗಳನ್ನು ಅವರಿಗೆ ಕೇಳಿಸುತ್ತಿದ್ದೆ. ಯಾಕಿಂಗೆ ಮಗ ಭಾಗ-2 ಹಾಡನ್ನು ಕೂಡ ಕೇಳಿಸಿದ್ದೆ ಆದರೆ ಇದೀಗ ರೈತರ ಹಾಡನ್ನು ಅವರಿಗೆ ಕೇಳಿಸಲು ಆಗಲಿಲ್ಲ ಎಂದು ಭಾವುಕರಾದರು.   

ಪುನೀತ್ (Puneeth Rajkumar)  ಅವರು ಹೇಳಿದ ಕೆಲ ಮಾತುಗಳ ಬಗ್ಗೆಯೂ ಕೂಡ ಮಾತನಾಡಿದ ಆಲ್ ಓಕೆ, ಅಪ್ಪು ಅವರು ಒಂದು ಮಾತನ್ನು ನನಗೆ ಹೇಳಿದ್ದರು. ಒಬ್ಬ ರ್ಯಾಪರ್ ಆಗಿ ನೀನು ರ್ಯಾಪ್ ಹಾಡುಗಳನ್ನ ಜನರಿಗೆ ಇಷ್ಟವಾಗುವಂತೆ ಮಾಡಬೇಕು. ಹಾಗೆ ಅವರಿಗೆ ಅರ್ಥವಾಗುವಂತೆ ಮಾಡಬೇಕು. ಜೊತೆಗೆ ಅದು ಇಂಪಾಗಿ ಇರುವಂತಿರಬೇಕು. ಆಗಲೇ ಅದಕ್ಕೊಂದು ಅರ್ಥ ಇರುತ್ತದೆ ಜನರು ಇಷ್ಟಪಡುತ್ತಾರೆ ಎಂದು ಹೇಳಿದ್ದರಂತೆ. ಅವೆಲ್ಲ ಮಾತುಗಳು ಇದೀಗ ಸತ್ಯ ಆಗಿದೆ ಎನ್ನುತ್ತಾರೆ ಆಲ್ ಓಕೆ. ಜೊತೆಗೆ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ನಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿರುವುದರ ಬಗ್ಗೆಯೂ ಹೇಳಿದ್ದು, ಇದು ಅದೃಷ್ಟವೋ ಅಥವಾ ದುರದೃಷ್ಟವೋ ಗೊತ್ತಿಲ್ಲ ಪುನೀತ್ ಅವರು ನನ್ನ ಮೊದಲ ಆಲ್ಬಮ್ ಹಾಡಿಗೆ ಲಾಂಚ್ ಮಾಡಿದ್ದರು. ಇದೀಗ ಅವರ ಕೊನೆಯ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ. ಇದು ನನಗೆ ಹೆಮ್ಮೆ ಇದೆ ಎಂದು ಮನಸ್ಸಿನಿಂದ ಮಾತನಾಡಿದ್ದಾರೆ ಆಲ್ ಓಕೆ...