ಅಮಲಾ ಪೌಲ್ ಅವರನ್ನು ಮಂಚಕ್ಕೆ ಕರೆದ ನಿರ್ಮಾಪಕ! ಹೇಳಿದ್ದೇನು ಗೊತ್ತಾ..?

By Infoflick Correspondent

Updated:Friday, September 16, 2022, 14:19[IST]

ಅಮಲಾ ಪೌಲ್ ಅವರನ್ನು ಮಂಚಕ್ಕೆ ಕರೆದ ನಿರ್ಮಾಪಕ!  ಹೇಳಿದ್ದೇನು ಗೊತ್ತಾ..?

ಸೌತ್ ಚಿತ್ರರಂಗಕ್ಕೆ ನಟಿ ಅಮಲಾ ಪೌಲ್ 17ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಮೊದ ಮೊದಲು ನಟಿಸಿದ ಸಿನಿಮಾಗಳು ಹಿಟ್ ಆಗಲಿಲ್ಲವಾದರೂ, ಕೆಲ ಸಿನಿಮಾಗಳಲ್ಲಿ ನಟಿಸಿದ ಬಳಿಕ, ಬೋಲ್ಡ್ ಆಗಿ ಆಕ್ಟ್ ಮಾಡಲು ಶುರು ಮಾಡಿದರು. ಅಲ್ಲಿಂದ ಅಮಲಾ ಪೌಲ್ ಅವರ ಅದೃಷ್ಟ ಬದಲಾಯ್ತು. ಅಮಲಾ ಪೌಲ್ ನಟಿಸಿದ ಚಿತ್ರಗಳೆಲ್ಲವೂ ಹಿಟ್ ಆಯ್ತು. ಕಿಚ್ಚ ಸುದೀಪ್ ಅವರ ನಟನೆಯ ಹೆಬ್ಬುಲಿ ಚಿತ್ರದಲ್ಲೂ ಮಿಂಚಿದರು. ಆದರೆ ಅಮಲಾ ಪೌಲ್ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟಾಗ ತುಂಬಾನೇ ಕಷ್ಟಗಳನ್ನು ಎದುರಿಸಿದ್ದಾರೆ. ಸ್ನೇಹಿತರಿಂದಲೇ ಅವಮಾನವನ್ನು ಎದುರಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. 

ಸಿನಿಮಾ ಕ್ಷೇತ್ರಕ್ಕೆ ಅಮಲಾ ಪೌಲ್ ಎಂಟ್ರಿ ಕೊಟ್ಟಾಗ ಹಲವು ನಿರ್ಮಾಪಕರು ಮಿಸ್ ಬಿಹೇವ್ ಮಾಡಿದ್ದರಂತೆ. ನೇರವಾಗಿ ಅಮಲಾ ಫೌಲ್ ಅವರನ್ನು ಮಂಚಕ್ಕೆ ಕರೆಯುತ್ತಿದ್ದರಂತೆ. ಈ ವಿಚಾರದ ಬಗ್ಗೆ ಮಾತನಾಡಿರುವ ಅಮಲಾ ಪೌಲ್ ಅವರು ಒಂಧೂ ಘಟನೆಯನ್ನು ಹೇಳಿದ್ದಾರೆ. ಅಮಲಾ ಪೌಲ್ ಅವರ ಸ್ನೇಹಿತರಿಂದಲೇ ತಮಗೆ ಮೋಸವಾಗಿತ್ತು ಎಂದು ಹೇಳಿದ್ದಾರೆ. ಒಮ್ಮೆ ಅಮಲಾ ಪೌಲ್ ಅವರು 2018ರಲ್ಲಿ ಮಲೇಶಿಯಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕಾಗಿ ನೃತ್ಯ ಅಭ್ಯಾಸ ಮಾಡಬೇಕಿತ್ತಂತೆ. ಹಾಗಾಗಿ ಅವರು ತಮ್ಮ ಸ್ನೇಹಿದ ಶ್ರೀಧರ್ ಎಂಬುವರ ಸ್ಟುಡಿಯೋದಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರಂತೆ. 

ಇದೇ ಸಂದರ್ಬದಲ್ಲಿ ಸ್ಟುಡಿಯೋಗೆ ಮತ್ತೊಬ್ಬ ಸ್ನೇಹಿತ ಬಂದಿದ್ದರಂತೆ. ಅವರೇ ಉದ್ಯಮಿ ಅಳಗೇಶನ್. ಅಳಗೇಶನ್ ಅವರು ಬಂದು ನಿನ್ನ ರೇಟ್ ಎಷ್ಟು ಎಂದು ನೇರವಾಗಿ ಕೇಳಿದ್ದಾರೆ. ಆಗ ಅಮಲಾ ಪೌಲ್ ಶಾಕ್ ಆಗಿದ್ದಾರೆ. ಕೂಡಲೇ ಅಳಗೇಶನ್ ಅವರು ನೀನು ಮೇಲೇಶಿಯಾಗೆ ಹೋಗುವ ದಾರಿಯಲ್ಲಿ ಒಬ್ಬರಿಗೆ ಕಂಪನಿ ಕೊಡಬೇಕಿದೆ ಎಂದು ಹೇಳಿದ್ದಾನೆ. ಶಾಕ್ ಆದ ಅಮಲಾ ಪೌಲ್ ಅವರು ಸುಮ್ಮನಿರದೇ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಸ್ನೇಹಿತರು ಇದೇ ಕೇಸ್ ವಿಚಾರವಾಗಿ ಕೋರ್ಟ್ ಕಚೇರಿ ಅಮತ ಅಲೆದಾಡುತ್ತಿದ್ದಾರಂತೆ. ಅಮಲಾ ಪೌಲ್ ಬಳಿ ಬಂದು ಸ್ನೇಹಿತರು ಕೇಸ್ ವಾಪಸ್ ತಗೋ ಎಂದು ಕೇಳಿದರೂ ಕೇಳುತ್ತಿಲ್ಲವಂತೆ.