ಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನು

By Infoflick Correspondent

Updated:Friday, August 19, 2022, 23:29[IST]

ಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನು

ನಟಿ ಅಮೂಲ್ಯ  ಕಳೆದ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಅವರು ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಪ್ರೆಗ್ನೆಂಟ್ ಆಗಿದ್ದ ಸಂದರ್ಭದ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಹಾಗಾಗಿ ಮಗುವಿನ ಮುಖ ತೋರಿಸಿ ಎಂಬ ಒತ್ತಾಯ ಅಭಿಮಾನಿಗಳ ಕಡೆಯಿಂದ ಬಂದಿತ್ತು. ಆದರೆ ನಟಿ ಅಮೂಲ್ಯ ಮಕ್ಕಳ ಫೋಟೋ ಹಂಚಿಕೊಂಡಿರಲಿಲ್ಲ. 

ಇದೀಗ ಇದೇ ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ ನಟಿ ಅಮೂಲ್ಯ. ಈಗ ಅಮೂಲ್ಯ  ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಯಕ್ಟೀವ್ ಆಗಿದ್ದಾರೆ. ಹೊಸಹೊಸ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಮಗುವಿನ ಫೋಟೋ ತೋರಿಸಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ಸಂತೋಷದಿಂದ ನಿಮಗೆ ಪರಿಚಯಿಸುತ್ತಿದ್ದೇವೆ. ನಮ್ಮ ಮುದ್ದಿನ ಕಂದಮಗಳ ಮೇಲೆ ನಿಮ್ಮ ಶುಭಾಶೀರ್ವಾದವಿರಲಿ ಎಂದು ನಟಿ ಅಮೂಲ್ಯ ಸೋಶಿಯಲ್​ ಮಿಡಿಯಾದಲ್ಲಿ ಶೇರ್​ ಮಾಡಿದ್ದಾರೆ.   

ಪತಿ ಜಗದೀಶ್ ಆರ್ ಚಂದ್ರ ಹಾಗೂ ಮಕ್ಕಳ ಜೊತೆ ಮುದ್ದಾಗಿರುವ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮೂಲ್ಯ ಎಲ್ಲಾ ಫೋಟೋಗಳನ್ನು ಹಾಗು ವಿವಿಧ ಥೀಮ್‌ಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಹಂಚಿಕೊಂಡಿದ್ದಾರೆ. 5 ತಿಂಗಳ ಬಳಿಕ ಮೊದಲ ಬಾರಿಗೆ ಮುದ್ದಾದ ಅವಳಿ ಮಕ್ಕಳು ಹಾಗು ಅಮೂಲ್ಯ ಅವರ ಸುಂದರ ಕುಟುಂಬ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅವಳಿ ಮಕ್ಕಳೊಂದಿಗೆ ಅಮೂಲ್ಯ ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನುಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನುಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನು
ಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನುಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನು
ಮೊದಲಬಾರಿಗೆ ಅವಳಿ ಮಕ್ಕಳ ಹಾಗು ಕುಟುಂಬದ ಫೋಟೊ ಹಂಚಿಕೊಂಡ ಅಮೂಲ್ಯ ಹೇಳಿದ್ದೇನು