Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

By Infoflick Correspondent

Updated:Saturday, April 30, 2022, 11:23[IST]

Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಎರಡು ತಿಂಗಳ ಹಿಂದಷ್ಟೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ  ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ತಾವು ತಾಯಿಯಾದ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ಹೇಳಿಕೊಂಡಿದ್ದರು. ಇದೀಗ ತಮ್ಮ ಎರಡು ತಿಂಗಳ ತಾಯ್ತನದ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಗರ್ಭಿಣಿಯಾದಾಗ ತೆಗೆಸಿದ್ದ ಫೋಟೋವನ್ನು ಶೇರ್ ಮಾಡಿದ್ದು, ತಮ್ಮ ಪ್ರೆಗ್ನೆನ್ಸಿಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.   

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ನಟಿ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ 14ನೇ ವಯಸ್ಸಿಗೆ ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ತಮ್ಮ ಮುಗ್ಧತೆ ಹಾಗೂ ನಗು ಮುಖದಿಂದಲೇ ಚಿರಪರಿಚಿತರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ನಾಯಕರೊಂದಿಗೆ ನಟಿಸಿರುವ ನಟಿ ಅಮೂಲ್ಯ ಅವರು ಕೆಲ ವರ್ಷಗಳ ಹಿಂದೆ ಉದ್ಯಮಿ ಜಗದೀಶ್ ಅವರ ಕೈ ಹಿಡಿದರು. 

ಮದುವೆ ಆದ ನಂತರ ನಟಿ ಅಮೂಲ್ಯ ಅವರು ಯಾವುದೇ ರಿಯಾಲಿಟಿ ಶೋಗಳಲ್ಲಿ ಆಗಲಿ ಅಥವಾ ಕಿರುತೆರೆ, ಹಿರಿತೆರೆಯಲ್ಲಿ ಆಗಲಿ ಅಥವಾ ಗೆಸ್ಟ್ ರೋಲ್ ಆಗಿ ಯಾವುದೇ ಸಿನಿಮಾಗಳಲ್ಲೂ ಕೂಡ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಸಹಾಯ ಮಾಡಿದ್ದರು. ಇದೀಗ ಅವಳಿ ಮಕ್ಕಳ ತಾಯಿಯಾಗಿರುವ ಅಮೂಲ್ಯ ಅವರು ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ನನಗೀಗ ತಾಯ್ತನದ ಸಂಭ್ರಮಕ್ಕೆ ಎರಡು ತಿಂಗಳು. ಈ ಸಂದರ್ಭ ಖಂಡಿತವಾಗಿಯೂ ನನ್ನ ಜೀವನದಲ್ಲಿ ಬಹು ನಿರೀಕ್ಷಿತ ಜರ್ನಿಯೂ ಹೌದು.. ನಾನು ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ನನಗೆ ಉಂಟಾದ ಸಂತೋಷ ಅಷ್ಟಿಷ್ಟಲ್ಲ. ಈ ಖುಷಿಗಿಂತಲೂ ನನಗೆ ಬೇರೊಂದು ಸಂತಸವಿರಲು ಸಾಧ್ಯವಿಲ್ಲ. ನನ್ನ ಮಕ್ಕಳ ಪುಟ್ಟ ಕಾಲು ನನ್ನನ್ನು ಒದ್ದಾಗ ಗರ್ಭಾವಸ್ಥೆಯ ನನ್ನ ಎಲ್ಲಾ ಕಷ್ಟಗಳನ್ನು ಮರೆತುಬಿಡುವಂತೆ ಮಾಡಿತ್ತಿದೆ. ಈಗಾಗಲೇ ನಾನು ನನ್ನ ಗರ್ಭವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. 

ಪ್ರತಿಯೊಬ್ಬ ತಾಯಿಯೂ ಜಗತ್ತಿಗೆ ತನ್ನ ಮುಖವನ್ನು ಧೈರ್ಯವಾಗಿ ತೋರಿಸುತ್ತಾಳೆ. ಆದರೆ, ಗರ್ಭಾವಸ್ಥೆಯ ಪಯಣದಲ್ಲಿ ಆಕೆ ಅನುಭವಿಸಿ ಕಂಡ ಗುಲಾಬಿ ಹಾಗೂ ಅದರ ಮುಳ್ಳುಗಳು ಬಗ್ಗೆ ಆಕೆಗಷ್ಟೇ ತಿಳಿದಿರುತ್ತದೆ ಎಂಬುದನ್ನು ನಾನು ಹೇಳಲೇಬೇಕು. ಎಷ್ಟೇ ಕಷ್ಟವಾದರೂ, ನನ್ನ ಮಕ್ಕಳ ಪುಟ್ಟ ಪುಟ್ಟ ಪಾದಗಳನ್ನು ನೋಡಿದಾಗ  ಹಾಗೂ ಅವರ ಕೈಗಳನ್ನು ಹಿಡಿದಾಗ ಎಲ್ಲವನ್ನು ಮರೆಯುವಂತೆ ಮಾಡುತ್ತದೆ. ನಾನು ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ. ಇದನ್ನು ಹೀಗೆ  ಮುಂದುವರಿಸುತ್ತೇನೆ ಎಂದು ನಟಿ ಅಮೂಲ್ಯ ಅವರು ಬರೆದುಕೊಂಡಿದ್ದಾರೆ.

Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

ಮದುವೆ ಆದ ನಂತರ ನಟಿ ಅಮೂಲ್ಯ ಅವರು ಯಾವುದೇ ರಿಯಾಲಿಟಿ ಶೋಗಳಲ್ಲಿ ಆಗಲಿ ಅಥವಾ ಕಿರುತೆರೆ, ಹಿರಿತೆರೆಯಲ್ಲಿ ಆಗಲಿ ಅಥವಾ ಗೆಸ್ಟ್ ರೋಲ್ ಆಗಿ ಯಾವುದೇ ಸಿನಿಮಾಗಳಲ್ಲೂ ಕೂಡ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳಲಿಲ್ಲ.

Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ನಟಿ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 

Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

ಈ ಬಗ್ಗೆ  ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ತಾವು ತಾಯಿಯಾದ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ಹೇಳಿಕೊಂಡಿದ್ದರು.

Amoolya : ಎರಡು ತಿಂಗಳ ತಾಯ್ತನದ ಅನುಭವ ಹಂಚಿಕೊಂಡ ನಟಿ ಅಮೂಲ್ಯ ಜಗದೀಶ್

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಎರಡು ತಿಂಗಳ ಹಿಂದಷ್ಟೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.