Amoolya : ನಟಿ ಅಮೂಲ್ಯ ಅವರು ಪತಿ ಹಾಗೂ ಮಕ್ಕಳ ಜೊತೆಗೆ ಎಲ್ಲಿಗೆ ಹೋಗಿದ್ದರು ಗೊತ್ತಾ..?

By Infoflick Correspondent

Updated:Saturday, May 28, 2022, 19:06[IST]

Amoolya : ನಟಿ ಅಮೂಲ್ಯ ಅವರು ಪತಿ ಹಾಗೂ ಮಕ್ಕಳ ಜೊತೆಗೆ ಎಲ್ಲಿಗೆ ಹೋಗಿದ್ದರು ಗೊತ್ತಾ..?

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಮೂರು ತಿಂಗಳ ಹಿಂದಷ್ಟೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ನಟಿ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ 14ನೇ ವಯಸ್ಸಿಗೆ ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ತಮ್ಮ ಮುಗ್ಧತೆ ಹಾಗೂ ನಗು ಮುಖದಿಂದಲೇ ಚಿರಪರಿಚಿತರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ನಾಯಕರೊಂದಿಗೆ ನಟಿಸಿರುವ ನಟಿ ಅಮೂಲ್ಯ ಅವರು ಕೆಲ ವರ್ಷಗಳ ಹಿಂದೆ ಉದ್ಯಮಿ ಜಗದೀಶ್ ಅವರ ಕೈ ಹಿಡಿದರು.  

ಮದುವೆ ಆದ ನಂತರ ನಟಿ ಅಮೂಲ್ಯ ಅವರು ಯಾವುದೇ ರಿಯಾಲಿಟಿ ಶೋಗಳಲ್ಲಿ ಆಗಲಿ ಅಥವಾ ಕಿರುತೆರೆ, ಹಿರಿತೆರೆಯಲ್ಲಿ ಆಗಲಿ ಅಥವಾ ಗೆಸ್ಟ್ ರೋಲ್ ಆಗಿ ಯಾವುದೇ ಸಿನಿಮಾಗಳಲ್ಲೂ ಕೂಡ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಸಹಾಯ ಮಾಡಿದ್ದರು. ಕಳೆದ ತಿಂಗಳು ಅವಳಿ ಮಕ್ಕಳ ತಾಯಿಯಾಗಿರುವ ಅಮೂಲ್ಯ ಅವರು ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. 

ಇನ್ನು ನಿನ್ನೆ ಅಮೂಲ್ಯ ಹಾಗೂ ಅವರ ಪತಿ ತಮ್ಮ ಮಕ್ಕಳಿಗೆ ಮೂರು ತಿಂಗಳು ತುಂಬಿದ ಹಿನ್ನೆಲೆ ಅಣ್ಣಮ್ಮ ದೇವಿಯ ದರ್ಶನ ಪಡೆದಿದ್ದಾರೆ. ಈ ಬಗ್ಗೆ ಅಮೂಲ್ಯ ಪತಿ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜಿಸ್ಟಿಕ್ ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆಯಲಾಯಿತು ಎಂದು ಬರೆದುಕೊಂಡಿದ್ದಾರೆ.