ಸತ್ಯ ಸೀರಿಯಲ್ ಖ್ಯಾತಿಯ ಅಮೃತ ನಾಯ್ಡು ಸ್ಥಿತಿ ಗಂಭೀರ..! ಅಸಲಿಗೆ ಏನಾಗಿದೆ ನೋಡಿ

By Infoflick Correspondent

Updated:Thursday, January 13, 2022, 22:40[IST]

ಸತ್ಯ ಸೀರಿಯಲ್ ಖ್ಯಾತಿಯ ಅಮೃತ ನಾಯ್ಡು ಸ್ಥಿತಿ ಗಂಭೀರ..! ಅಸಲಿಗೆ ಏನಾಗಿದೆ ನೋಡಿ

ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಿತ್ತು. ಹೌದು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಇದೀಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸಮನ್ವಿ ಸ್ಪರ್ಧೆಯಾಗಿ ಆಗಮಿಸಿದ್ದಳು ಎನ್ನಲಾಗಿದೆ. ಸಮನ್ವಿಗೆ ಇದೀಗ ಕೇವಲ ಆರು ವರ್ಷ. ಸಮನ್ವಿಯ ಸಾವಿನ ಸುದ್ದಿ ಕೇಳಿ ಕಿರುತೆರೆ ಪ್ರಿಯರು ಕಂಬನಿ ಮಿಡಿದಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಅಭಿಮಾನಿಗಳಿಗೂ ದುಃಖವಾಗಿದೆ. ದೇವರು ಎಂತಹ ಕಠಿಣ ಹೃದಯದ ಎಂದೆನಿಸುತ್ತಿದೆ. ಇವರ ತಾಯಿ ಅಮೃತ ನಾಯ್ಡು ಡ್ಯಾನ್ಸ್ ಕ್ಲಾಸಿನಿಂದ ಮಗಳನ್ನು ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಕರೆದುಕೊಂಡು ಬರುವ ವೇಳೆ, ಎದುರಿಗೆ ಬಂದ ಲಾರಿ ಢಿಕ್ಕಿ ಹೊಡೆದ ಕಾರಣಕ್ಕಾಗಿ ಅಪಘಾತ ಸಂಭವಿಸಿದೆ. 

ಬಳಿಕ ಸ್ಥಳದಲ್ಲಿಯೇ ಸಮನ್ವಿ ಸಾವನ್ನಪ್ಪಿದ್ದಾಳೆ. ಇವರ ತಾಯಿ ಅಮೃತ ನಾಯ್ಡು ಅವರ ಸ್ಥಿತಿ ಸಹ ಇದೀಗ ಹೆಚ್ಚು ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ, ಖ್ಯಾತ ಹರಿಕಥೆಯ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಎಂದು ತಿಳಿದುಬಂದಿದೆ. ಸಮನ್ವಿ ತಾಯಿ ಅಮೃತ ನಾಯ್ಡು ಅವರು ಕೂಡ ಸತ್ಯ ಸೀರಿಯಲ್ನಲ್ಲಿ ಅಭಿನಯ ಮಾಡಿದ್ದಾರೆ. ಜೊತೆಗೆ ಅಮೃತಾ ಅವರು ಗರ್ಭಿಣಿ ಕೂಡ ಆಗಿದ್ದರಂತೆ. ಸಮನ್ವಿ ಒಬ್ಬಂಟಿಯಾಗಿರುತ್ತಾಳೆ, ಅವಳಿಗೆ ಇನ್ನೊಂದು ಮಗುವಿನ ಜೊತೆ ಮಾಡುವ ಉದ್ದೇಶದಿಂದ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಅಮೃತ ಅವರಿದ್ದರಂತೆ. 

 

ಬ್ರೇಕಿಂಗ್ ನ್ಯೂಸ್; ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಸಾವು

ಅಪಘಾತದ ಸ್ಥಳದಲ್ಲಿಯೇ ಸಮನ್ವಿ ಸಾವನ್ನಪ್ಪಿದ್ದು, ತಾಯಿ ಅಮೃತ ನಾಯ್ಡು ಅವರಿಗೆ ರಸ್ತೆಯ ಅಪಘಾತದಲ್ಲಿ ಹೆಚ್ಚು ಪೆಟ್ಟಾಗಿದ್ದು ಗಾಯಗಳಾದ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗೆ ಈ ಘಟನೆ ಸ್ಥಳಕ್ಕೆ ಕುಮಾರಸ್ವಾಮಿ ಸಂಚಾರ ಪೊಲೀಸರು ಬಂದು ಆ ಲಾರಿ ಚಾಲಕನನ್ನು ಬಂಧಿಸಿದ್ದಾರೆ....