Amrutha Naidu : ಅಗಲಿದ ನನ್ನಮ್ಮ ಸೂಪರ್​ ಸ್ಟಾರ್ ಪುಟ್ಟ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

By Infoflick Correspondent

Updated:Sunday, July 3, 2022, 20:55[IST]

Amrutha Naidu : ಅಗಲಿದ ನನ್ನಮ್ಮ ಸೂಪರ್​ ಸ್ಟಾರ್ ಪುಟ್ಟ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

ಇತ್ತೀಚಿಗಷ್ಟೆ ಅಮೃತಾ ರೂಪೇಶ್ ಮುದ್ದು ಮಗಳು ಸಮನ್ವಿ ಸಾವಿನ ನಂತರ ಸಾಕಷ್ಟು ಕುಗ್ಗಿ ಹೋಗಿದ್ದರು. ಮಗಳನ್ನು ಕಳೆದುಕೊಂಡು ನೋವಿನಲ್ಲಿಯೇ, ತಾಯಿ ಯಾಗುತ್ತಿದ್ದ ಅಮೃತಾ ಬಾಳಲ್ಲಿ ಭರವಸೆಯೊಂದು ಇತ್ತು. ಈ ನೋವಿನಲ್ಲಿ ಅಮೃತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಕಮೆಂಟ್ಸ್ ಬಂದಿದ್ದವು. ಇದೀಗ ಗಂಡು ಮಗು ಆಗಮನದಿಂದ ಕುಟುಂಬಕ್ಕೆ ಹೊಸ ಚೈತನ್ಯ ಸಿಕ್ಕಿದೆ.ಕೆಲವು ತಿಂಗಳ ಹಿಂದೆ ಅಮೃತಾ ನಾಯ್ಡು  ಮತ್ತು ಸಮನ್ವಿ ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ಪ್ರಯಾಣಿಸುವಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತವಾಗಿತ್ತು. 6 ವರ್ಷದ ಸಮನ್ವಿ ಸ್ಥಳದಲ್ಲೇ ಮೃತಪಟ್ಟಳು. ಈ ಘಟನೆ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ದೊಡ್ಡ ಶಾಕ್ ಆಗಿತ್ತು. ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಸಮನ್ವಿ ಕರ್ನಾಟಕ ಜನತೆಯ ಮನೆ ಮಗಳಾಗಿದ್ದಳು.     

ಅಮೃತಾ ಈ ಸಮಯದಲ್ಲಿ ಗರ್ಭಿಣಿ ಆಗಿದ್ದ ಕಾರಣ ಕುಟುಂಬಸ್ಥರು ಮತ್ತು ಸ್ನೇಹಿತರು ಹೆಚ್ಚಿನ ಕಾಳಜಿ ವಹಿಸಿದರು. ಈ ಸಮಯದಲ್ಲಿ ರಾಜಕಾರಣಿಗಳು ಕೂಡ ಅಮೃತಾ ನಿವಾಸಕ್ಕೆ ಭೇಟಿ ಕೊಟ್ಟು, ಸಂತಾಪ ಸೂಚಿಸಿದ್ದರು 

ಕಿರುತೆರೆ ನಟಿ ಅಮೃತಾ ರೂಪೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಮೃತಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಅಮೃತಾ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 

ನಟಿ ಅಮೃತಾ ರೂಪೇಶ್ (ಜುಲೈ.2)ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಗುವಿನ ಆಗಮನದ ಖುಷಿಯ ವಿಚಾರವನ್ನು ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.