ಬಳುಕುವ ಬಳ್ಳಿಯಂತಾದ ಅಮೂಲ್ಯ ಕ್ಯೂಟ್ ಡಾನ್ಸ್ ನೋಡಿ ಬೆರಗಾದ ಅಭಿಮಾನಿಗಳು

By Infoflick Correspondent

Updated:Tuesday, August 2, 2022, 13:05[IST]

ಬಳುಕುವ ಬಳ್ಳಿಯಂತಾದ  ಅಮೂಲ್ಯ ಕ್ಯೂಟ್ ಡಾನ್ಸ್ ನೋಡಿ ಬೆರಗಾದ ಅಭಿಮಾನಿಗಳು

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಮೂರು ತಿಂಗಳ ಹಿಂದಷ್ಟೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ನಟಿ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ 14ನೇ ವಯಸ್ಸಿಗೆ ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ತಮ್ಮ ಮುಗ್ಧತೆ ಹಾಗೂ ನಗು ಮುಖದಿಂದಲೇ ಚಿರಪರಿಚಿತರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ನಾಯಕರೊಂದಿಗೆ ನಟಿಸಿರುವ ನಟಿ ಅಮೂಲ್ಯ ಅವರು ಕೆಲ ವರ್ಷಗಳ ಹಿಂದೆ ಉದ್ಯಮಿ ಜಗದೀಶ್ ಅವರ ಕೈ ಹಿಡಿದರು.    

ಮದುವೆ ಆದ ನಂತರ ನಟಿ ಅಮೂಲ್ಯ ಅವರು ಯಾವುದೇ ರಿಯಾಲಿಟಿ ಶೋಗಳಲ್ಲಿ ಆಗಲಿ ಅಥವಾ ಕಿರುತೆರೆ, ಹಿರಿತೆರೆಯಲ್ಲಿ ಆಗಲಿ ಅಥವಾ ಗೆಸ್ಟ್ ರೋಲ್ ಆಗಿ ಯಾವುದೇ ಸಿನಿಮಾಗಳಲ್ಲೂ ಕೂಡ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಸಹಾಯ ಮಾಡಿದ್ದರು. ಅವಳಿ ಮಕ್ಕಳ ತಾಯಿಯಾಗಿರುವ ಅಮೂಲ್ಯ ಅವರು ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು.

ಇದೀ ಅಮೂಲ್ಯ ಅವರ ಮಕ್ಕಳಿಗೆ ಐದು ತಿಂಗಳಾಗಿದ್ದು, ಅಮೂಲ್ಯ ಮತ್ತೆ ಕ್ಯೂಟ್ ಹುಡುಗಿಯಾಗಿ ಕಾಣುತ್ತಿದ್ದಾರೆ. ಕಳೆದ ವಾರ ಗುರು ಶಿಷ್ಯರು ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದ ಅಮುಲ್ಯ ಅವರ ಡ್ಯಾನ್ಸ್ ವೀಡಿಯೋ ವೈರಲ್ ಆಗಿತ್ತು. ಬೇರೆ ಸೆಲಬ್ರಿಟಿಗಳಂತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಅಮೂಲ್ಯ ಅವರು ಈಗ ಮತ್ತೊಂದು ರೀಲ್ಸ್ ಮಾಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ  ರಾ ರಾ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಆ ಹಾಡಿಗೆ ಸಂಗಡಿಗರೊಂದಿಗೆ ಸೇರಿ ಅಮೂಲ್ಯ ಸ್ಟೆಪ್ ಹಾಕಿದ್ದಾರೆ.