Amulya : ಹೊಸ ರೀಲ್ಸ್ ಶೇರ್ ಮಾಡಿಕೊಂಡ ಅಮ್ಮು..! ಅಮೂಲ್ಯ ವಿಡಿಯೋಗೇ ಫಿದಾ ಖಂಡಿತಾ ಆಗ್ತೀರಾ

By Infoflick Correspondent

Updated:Sunday, July 17, 2022, 18:40[IST]

Amulya : ಹೊಸ ರೀಲ್ಸ್ ಶೇರ್ ಮಾಡಿಕೊಂಡ ಅಮ್ಮು..! ಅಮೂಲ್ಯ ವಿಡಿಯೋಗೇ ಫಿದಾ ಖಂಡಿತಾ ಆಗ್ತೀರಾ

ಸ್ಯಾಂಡಲ್ ವುಡ್ ನ ಕ್ಯೂಟ್ ಬೆಡಗಿ ಚೆಲುವಿನ ಚಿತ್ತಾರ ಮೂಲಕ ಇಡೀ ಕನ್ನಡಿಗರ ಮನ ಗೆದ್ದಿದ್ದ ಐಸು ಖ್ಯಾತಿಯ ನಟಿ ಅಮೂಲ್ಯ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರದ ಅಮೂಲ್ಯ ಅವರು ಇದೀಗ ಮೊಟ್ಟ ಮೊದಲ ಬಾರಿ ತಮ್ಮ ರೀಲ್ಸ್ ವಿಡಿಯೋ ಒಂದನ್ನು ಹಂಚಿಕೊಂಡು ಹೆಚ್ಚು ಖುಷಿ ವ್ಯಕ್ತಪಡಿಸಿದ್ದಾರೆ. ನಟಿ ಅಮೂಲ್ಯ ಅವರು ಮಾರ್ಚ್ ನಲ್ಲಿ ಎರಡು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಆ ವಿಷಯವನ್ನ ಅವರ ಪತಿ ಜಗದೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಮುಟ್ಟಿಸಿದ್ದರು. ಹೌದು ನಟಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಗಣ್ಯತಿಗಣ್ಯರು, ಕಲಾವಿದರು, ಶುಭ ಕೋರಿದರು. ನಿಮ್ಮ ಮುಂದಿನ ಮಕ್ಕಳ ಜೀವನ ಹಸನಾಗಲಿ ಎಂದು ಹಾರೈಸಿದ್ದರು. 

ಹೌದು ಮಕ್ಕಳ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದ ನಟಿ ಅಮೂಲ್ಯ ಮುದ್ದಾದ ನಟಿ. ಅವರು ಚಿನಕುರಳಿಯಂತೆ ಮಾತನಾಡುವ ಶೈಲಿ ಎಲ್ಲರಿಗೂ ಇಷ್ಟ. ಅಪಾರ ಅಭಿಮಾನಿ ಬಳಗ ಸಹ ಹೊಂದಿದ್ದಾರೆ. ಅವರದೇ ಆದ ನಟನೆಗೆ ನಟಿ ಅಮೂಲ್ಯ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈಗ ನಟಿ ಅಮೂಲ್ಯ ಅವರು ಇದೀಗ ಒಂದು ಹೊಸ ಹಾಡಿಗೆ ರೀಲ್ಸ್ ಮಾಡಿದ್ದು ನನಗೆ ಈ ಹಾಡು ತುಂಬಾ ಇಷ್ಟ ಆಗಿದೆ ಎಂದು ಅವರ ಅಭಿಪ್ರಾಯ ಹಂಚಿಕೊಂಡಿರುವ ವಿಶೇಷ ವಿಡಿಯೋ ವೈರಲಾಗುತ್ತಿದೆ. ಹೌದು ಇತ್ತೀಚಿಗೆ ನಟ ಶರಣ್ ಅವರ ಅಭಿನಯದಲ್ಲಿ ತರುಣ್ ಸುಧೀರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಗುರು ಶಿಷ್ಯರು ಸಿನಿಮಾದ ಆಣೆ ಮಾಡಿ ಹೇಳುತ್ತೀನಿ ಎನ್ನುವ ಹಾಡೊಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಈ ಹಹಾಡು ಕೇಳುಗರಿಗೆ ತುಂಬಾ ಇಂಪಾಗಿದೆ. ಹಾಡು ಕೂಡ ಎಲ್ಲೆಡೆ ಒಳ್ಳೆಯ ಪ್ರಶಂಸೆಯನ್ನ ಪಡೆಯುತ್ತಿದೆ.     

ತಾಯಿಯಾದ ಬಳಿಕ ಅಮೂಲ್ಯ ಅವರು ಮೊಟ್ಟಮೊದಲ ಬಾರಿಗೆ ನನ್ನ ಮೊದಲ ರೀಲ್ಸ್ ಇದು. ಹಾಡು ನನಗೆ ಹೆಚ್ಚು ಇಷ್ಟ ಆಗಿದೆ ಎಂದು ಕ್ಯಾಪ್ಷನಲ್ಲಿ ಹೇಳಿದ್ದು, ನಿರ್ಮಾಪಕ ತರುಣ್ ಸುಧೀರ್ ಹಾಗೂ ಅವರ ಇಡಿ ಚಿತ್ರತಂಡಕ್ಕೆ ಶುಭವಾಗಲಿ ಎಂದು ವಿಡೀಯೋ ಶೇರ್ ಮಾಡಿದ್ದಾರೆ. ಆಣೆ ಮಾಡಿ ಹೇಳುತ್ತೀನಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನಟಿ ಅಮೂಲ್ಯ. ಇಲ್ಲಿದೆ ನೋಡಿ ವಿಡಿಯೋ. ನಿಮಗೂ ಕೂಡ ಇಷ್ಟವಾಗುವಂತಿದೆ. ಶೇರ್ ಮಾಡಿ. ತಾಯಿಯಾದ ಬಳಿಕ ಎಷ್ಟು ಮುದ್ದಾಗಿ ತೆಳ್ಳಗೆ ಕಾಣುತ್ತಿದ್ದಾರೆ ಅಮೂಲ್ಯ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...

 
 
 
 
 
 
 
 
 
 
 
 
 
 
 

A post shared by Amulya (@nimmaamulya)