ಹುಟ್ಟಿದ ನಾಲ್ಕೇ ದಿನಕ್ಕೆ ತಮ್ಮ ಮಕ್ಕಳಿಗೆ ಈ ಹೆಸರಿಟ್ಟ ಅಮೂಲ್ಯ ಕುಟುಂಬ..? ಹೆಸರುಗಳೇನು ಗೊತ್ತಾ

By Infoflick Correspondent

Updated:Monday, March 7, 2022, 11:38[IST]

ಹುಟ್ಟಿದ ನಾಲ್ಕೇ ದಿನಕ್ಕೆ ತಮ್ಮ ಮಕ್ಕಳಿಗೆ ಈ ಹೆಸರಿಟ್ಟ ಅಮೂಲ್ಯ ಕುಟುಂಬ..? ಹೆಸರುಗಳೇನು ಗೊತ್ತಾ

ಇತ್ತೀಚಿಗಷ್ಟೇ ಶಿವರಾತ್ರಿ ಹಬ್ಬದಂದು ಕನ್ನಡದ ಖ್ಯಾತ ನಟಿ ಯುವ ನಟಿ ಆಗಿದ್ದ ಗೋಲ್ಡನ್ ಕ್ವೀನ್ ಅಮೂಲ್ಯ  (Amulya) ಅವರು ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೌದು ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅಮೂಲ್ಯ ಅವರು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಅಮೂಲ್ಯ ಟ್ವಿನ್ಸ್ ಬೇಬಿ ಗಳಿಗೆ ತಾಯಿ ಆಗುತ್ತಿದ್ದಂತೆ ಈ ಖುಷಿಯ ವಿಷಯವನ್ನು ಅವರ ಪತಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಷಯ ತಿಳಿದ ಬಳಿಕ ಸ್ಯಾಂಡಲ್ವುಡ್ನ ದೊಡ್ಡ ದೊಡ್ಡ ಕಲಾವಿದರು, ಎಲ್ಲಾ ಕಲಾವಿದರ ಬಳಗವೂ ಅಮೂಲ್ಯ ಅವರಿಗೆ ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ. ಹಾಗೇನೇ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಿಸಿದ್ದಾರೆ.

ಇದರ ಬೆನ್ನಲ್ಲೆ ಇದೀಗ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ನಟಿ ಅಮೂಲ್ಯ ಅಭಿಮಾನಿಗಳು ಈಗಾಗಲೇ ಅಮೂಲ್ಯ ಮಕ್ಕಳಿಗೆ ಹೆಸರನ್ನು ಇಡಲು ಮುಂದಾಗಿದ್ದು, ಅಮೂಲ್ಯ ಅವರ ಹೆಸರಿನಿಂದ ಎ ತೆಗೆದುಕೊಂಡು ಜಗದೀಶ್ ಅವರ ಹೆಸರಿನಿಂದ ಜೆ ತೆಗೆದುಕೊಂಡು ಅಜಯ್ ವಿಜಯ್ ಅಂಥ ಇಡೀ ತುಂಬಾ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮೂಲಕ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ   .

ಆದರೆ ನಟಿ ಅಮೂಲ್ಯ ಅವರಾಗಲಿ ಅಥವಾ ಅವರ ಕುಟುಂಬದ ಸದಸ್ಯರುಗಳಾಗಲಿ ಈಗ ಆಗಮಿಸಿರುವ ಮಕ್ಕಳಿಗೆ ಯಾವ ಹೆಸರು ಇಡಬೇಕು ಎಂಬುದಾಗಿ ಯೋಚಿಸಿಲ್ಲ ಎಂದು ತಿಳಿದುಬಂದಿದೆ. ಹಾಗೆ ಅಮೂಲ್ಯ ಅವರು ಮಕ್ಕಳನ್ನು ಪ್ರೀತಿಯಿಂದ ಸದ್ಯಕ್ಕೆ ಅಪ್ಪು ಪಪ್ಪು ಎಂದು ಕರೆಯುತ್ತಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ.ಅಸಲಿಗೆ ನಾಮಕರಣದ ಕುರಿತು ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅಮೂಲ್ಯ ಅವರು ನಿಜಕ್ಕೂ ಯಾವ ಹೆಸರು ಇಡಬೇಕಾಗಿ ಚಿಂತನೆ ನಡೆಸಿದ್ದಾರೆ ಎಂದು ಇಷ್ಟರಲ್ಲೇ ಎಲ್ಲಾ ಗೊತ್ತಾಗುತ್ತದೆ. ಈ ವಿಡಿಯೋದಲ್ಲಿ ಹೇಳುವುದು ನಿಜಕ್ಕೂ ಸತ್ಯನಾ ನೀವೇ ಒಂದು ಬಾರಿ ವಿಡಿಯೋ ನೋಡಿ. ಹಾಗೇನೇ ಅಮೂಲ್ಯ ಅವರ ಮಕ್ಕಳಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಎಂದು ಹಾರೈಸಿ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು... (video credit : jana priya varte)