ಚಿಕ್ಕ ವಯಸಿನಲ್ಲಿ ಬಿಟ್ಟುಹೋದ ಅನುಶ್ರೀ ತಂದೆ : ಅನುಶ್ರೀ ಪಟ್ಟ ಕಷ್ಟ ಏನು ನೋಡಿ

By Infoflick Correspondent

Updated:Tuesday, March 8, 2022, 13:28[IST]

ಚಿಕ್ಕ ವಯಸಿನಲ್ಲಿ ಬಿಟ್ಟುಹೋದ ಅನುಶ್ರೀ ತಂದೆ : ಅನುಶ್ರೀ ಪಟ್ಟ ಕಷ್ಟ ಏನು ನೋಡಿ

ಆ್ಯಂಕರ್ ಅನುಶ್ರೀ ಎಂದರೆ ಎಲ್ಲರಿಗೂ ಗೊತ್ತು, ಅವರು ಮಾತು ಬಲು ಹುರುಪು. ಅಷ್ಟು ಸುಪ್ರಸಿದ್ಧಿ ಪಡೆದ ಅನುಶ್ರೀ ಬದುಕಿನ ಕಥೆ ಜನರಿಗೆ ತಿಳಿದಿಲ್ಲ.ಮಂಗಳೂರಿನ  ಒಂದು ಮೂಲೆಯಿಂದ ಆಂಕರ್‌ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ‌ಇವರ ಜೀವನದ ಕಥೆ ವ್ಯಥೆ , ಹೋರಾಟದ ಬದುಕು ಇಲ್ಲಿದೆ ನೋಡಿ 

ತಂದೆ ಸಂಪತ್, ತಾಯಿ ಶಶಿಕಲಾ,‌ ತಮ್ಮ ಅಭಿಜಿತ್ ಇದು ಇವರ ಚಿಕ್ಕ‌ದಾದ ಚೊಕ್ಕ ಕುಟುಂಬ. ಆದರೆ ದುರ್ವಿಧಿಯಿಂದ ಅನುಶ್ರೀ ಚಿಕ್ಕವರಿರುವಾಗ ತಂದೆ ಮನೆಯನ್ನು ಬಿಟ್ಟುಹೋದರು, ಅನುಶ್ರೀ ಹಿರಿಮಗಳಾದ ಕಾರಣ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ಹೊತ್ತರು. ಓದು ನಿಲ್ಲಿಸಿ, ಕನಸನ್ನು ಬದಿಗಿರಿಸಿ ಅಡಿಕೆ ತೋಟದಲ್ಲಿ ಕೆಲಸಕ್ಕೆ ಹೋದರು ಅನುಶ್ರೀ.   

ಶಾಲೆಯಲ್ಲಿ ಎಲ್ಲಾ ಕಾರ್ಯಕ್ರಮದಲ್ಲೂ ಆ್ಯಂಕರಿಗ್ ಮಾಡಿ ಪ್ರಸಿದ್ದಿ ಪಡೆದ ಅನುಶ್ರಿ ಆ್ಯಂಕರ್ ಆಗಬೇಕೆಂದೆ ಕನಸಹೊತ್ತಿ ಬೆಂಗಳೂರಿಗೆ ಬಂದರು. ಬೆಳಕಿನ ನಗರಿಗೆ ಬರುವ ಮೊದಲೆ ನಮ್ಮ‌ಟಿವಿ ಎಂಬ ಮಂಗಳೂರಿನ ಚಾನಲ್ ನಲ್ಲಿ ಆ್ಯಂಕರ್ ಆಗಿ 250 ಸಂಬಳದಲ್ಲಿ ಆ್ಯಂಕರ್ ಜೀವನ ಪ್ರಾರಂಭಿಸಿದ್ದರು. 

ಬೆಂಗಳೂರಿಗೆ ಬಂದ ಅನುಶ್ರೀ ಈಟಿವಿ ಚಾನಲ್ ನ ಡಿಮ್ಯಾಂಡಪ್ಪೊ ಡಿಮ್ಯಾಂಡೊ ಕಾರ್ಯಕ್ರಮದ ಮೂಲಕ ಆ್ಯಂಕರ್ ಆಗಿ ತಮ್ಮನ್ನು ತಾವು ಗುರುತಿಸಿಕೊಂಡರು. ಬಿಗ್ ಬಾಸ್ ಸಿಸನ್ 1 ರ ಸ್ಪರ್ಧಿಯಾಗಿ ಈಡಿ ಕರ್ನಾಟಕದ ಮನೆಮಗಳಾದರು. 

ನಂತರದ ದಿನಗಳಲ್ಲಿ ಹಲವಾರು ಕಾರ್ಯಕ್ರಮದ ನಿರೂಪಕಿಯಾಗಿ ಜನಮೆಚ್ಚುಗೆ ಪಡೆದು ಈಗ ಜಿಕನ್ನಡದ ಖ್ಯಾತ ನಿರೂಪಕಿಯಾಗಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿನ ಇಂಪು ಜೊತೆ ಇವರ ಆ್ಯಂಕರಿಗ್ ಕೂಡ ಅಷ್ಟೇ ಸೊಗಸು. ಕರ್ನಾಟಕದ ಪ್ರಸಿದ್ಧ ಆ್ಯಂಕರ್ ಇವರಾಗಿದ್ದಾರೆ.