ಆಂಕರ್ ಅನುಶ್ರೀ ತಂದೆ ಎಂದು ಹೇಳಿಕೊಂಡು ಪ್ರತ್ಯಕ್ಷವಾದ ವ್ಯಕ್ತಿ.. ಹೇಳಿದ್ಯೇನು ಗೊತ್ತಾ? ಕಣ್ಣೀರು ಬರುತ್ತೆ

By Infoflick Correspondent

Updated:Monday, April 4, 2022, 23:32[IST]

ಆಂಕರ್ ಅನುಶ್ರೀ ತಂದೆ ಎಂದು ಹೇಳಿಕೊಂಡು ಪ್ರತ್ಯಕ್ಷವಾದ ವ್ಯಕ್ತಿ.. ಹೇಳಿದ್ಯೇನು ಗೊತ್ತಾ? ಕಣ್ಣೀರು ಬರುತ್ತೆ

ಕನ್ನಡದ ಫೇಮಸ್ ಹಾಗೂ ಏಕೈಕ ಆಂಕರ್ ಅಂದರೆ ಅದು ಅನುಶ್ರೀ. ಹಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಆಂಕರಿಂಗ್ ಮಾಡಿಕೊಂಡು ಜನ ಮನ  ಗೆದ್ದಿರುವ ಅನುಶ್ರೀ ಅವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿದ್ದಾರೆ. ಇನ್ನು ಆಂಕರ್ ಅನುಶ್ರೀ ಅವರು ಆಗಾಗ ಸಂದರ್ಶನಗಳಲ್ಲಿ ತಮ್ಮ ತಾಯಿ ಹಾಗೂ ತಮ್ಮನ ಬಗ್ಗೆ ಹೇಳಿಕೊಂಡಿದ್ದಾರೆ. ತಂದೆ ಬಿಟ್ಟು ಹೋದ ಕಾರಣ ಜೀವನ ತುಂಬಾ ಕಷ್ಟವಾಯ್ತು ಎಂದು ನೊಂದುಕೊಂಡಿದ್ದಾರೆ. ಆದರೆ ಈಗ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಮಾಧ್ಯಮಗಳ ಎದುರು ಬಂದು ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿದ್ದಾರೆ..

ಸಂಪತ್ ಕುಮಾರ್ ಎಂಬುವರು ತನ್ನ ಹೆಂಡತಿ ಮಕ್ಕಳನ್ನು ನೆನಪಿಸಿಕೊಂಡಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿರುವ ಸಂಪತ್ ಕುಮಾರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಧ್ಯಮಗಳ ಎದುರು ಮಾತನಾಡಿ, ನಾನು ಅನುಶ್ರೀ ಅವರ ತಂದೆ ಎಂದು ಹೇಳಿಕೊಂಡಿದ್ದಾರೆ. ಇವರಿಗೆ ನಡೆದಾಡೋಕೆ ಕೂಡ ಆಗದ ಸ್ಥಿತಿಯಲ್ಲಿದ್ದು, ತನ್ನ ಮಗಳ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ಈ ಹಿಂದೆ 1998 ರ ವರೆಗೂ ನಾನು ನನ್ನ ಫ್ಯಾಮಿಲಿ ಜೊತೆಗೇ ಇದ್ದೆ. ಆದರೆ  ನನ್ನ ಮಾತಿಗೆ ಕುಟುಂಬದಲ್ಲಿ ಪ್ರಾಮುಖ್ಯತೆ ಇರಲಿಲ್ಲ. ಹಾಗಾಗಿ ನಾನು ಎಲ್ಲರನ್ನೂ ಬಿಟ್ಟು ಬಂದು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೇನೆ. ನಾನು ನ್ಯೂಜಿಲ್ಯಾಂಡ್, ಶ್ರೀಲಂಕಾ ಹಾಗೂ ದುಬೈ ದೇಶಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದೆ. ಇಷ್ಟು ದಿವಸ ನಾನು ರಾಯಲ್ ಆಗಿ ಬದುಕಿದೆ.    

ಈ ಹಿಂದೆ ಎಂದೂ ಕೂಡ ನಾನು ಅನುಶ್ರೀ ತಂದೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ನನ್ನ ಮಗಳು ಅನುಶ್ರೀ ತುಂಬಾ ಕಷ್ಟಪಟ್ಟು ಹೆಸರು ಕೀರ್ತಿಯನ್ನು ಗಳಿಸಿದ್ದಾಳೆ. ಅವಳ ಹೆಸರಿಗೆ ಧಕ್ಕೆ ಬರಬಾರದು ಅಂತ ನಾನು ಸತ್ಯ ಹೇಳಿಲ್ಲ. ಅನುಶ್ರೀ ನಾನು ಬಿಟ್ಟು ಹೋಗಿದ್ದನ್ನು ಹೇಳೀಕೊಂಡು ಸಿಂಪತಿಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾಳೆ. ನನ್ನ ಮಗಳು ನನ್ನನ್ನು ನೋಡಲು ಬರದಿದ್ದರೂ ಪರವಾಗಿಲ್ಲ. ಆದರೆ ನಾನು ಸತ್ತ ಮೇಲೆ ಮಣ್ಣು ಹಾಕಿದರೆ ಸಾಕು ಎಂದು ಸಂಪತ್ ಕುಮಾರ್ ಹೇಳಿಕೊಂಡಿದ್ದಾರೆ. ( video credit : news first kannada )